ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

100ಕ್ಕೆ ತಲುಪಿದ ಸ್ವಾರ್ಟ್ಅಪ್‌ಗಳ ಸಂಖ್ಯೆ: ಮೋದಿ ಮೆಚ್ಚುಗೆ

|
Google Oneindia Kannada News

ನವದೆಹಲಿ ಮೇ 29: "ಈ ತಿಂಗಳಲ್ಲಿ ಸ್ವಾರ್ಟ್ಅಪ್‌ಗಳ ಸಂಖ್ಯೆ 100 ಕ್ಕೆ ತಲುಪಿದೆ. ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲೂ ಭಾರತದ ಸಣ್ಣ ನಗರಗಳು ಮತ್ತು ಪಟ್ಟಣಗಳಿಂದ ಹೊರಹೊಮ್ಮಿದ ಉದ್ಯಮಿಗಳಿಂದ ಆರಂಭವಾದ ಸ್ವಾರ್ಟ್ಅಪ್ ಗಳು ದೇಶದ ಸಂಪತ್ತು ಮತ್ತು ಮೌಲ್ಯವನ್ನು ಹೆಚ್ಚಿಸಿವೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಮಾಸಿಕ 'ಮನ್ ಕೀ ಬಾತ್' ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿಗಳು, "ಈ ತಿಂಗಳ 5ರ ವೇಳೆಗೆ ಸ್ವಾರ್ಟ್ಅಪ್‌ಗಳ ಸಂಖ್ಯೆ 100 ಕ್ಕೆ ಏರಿಕೆಯಾಗಿದೆ. ಈ ಸ್ವಾರ್ಟ್ಅಪ್‌ಗಳ ಮೌಲ್ಯವು 25 ಲಕ್ಷ ಕೋಟಿ ರೂ.ಗಳಿಗಿಂತಲೂ ಹೆಚ್ಚು. ಪ್ರತಿಯೊಬ್ಬ ಭಾರತೀಯನಿಗೆ ಇದು ಹೆಮ್ಮೆಯ ವಿಚಾರವಾಗಿದೆ,'' ಎಂದರು.

PM Modi Assam Visit: 500 ಕೋಟಿಗೂ ಹೆಚ್ಚು ಮೌಲ್ಯದ ಯೋಜನೆ;ಮೋದಿಯಿಂದ ಶಂಕುಸ್ಥಾಪನೆ PM Modi Assam Visit: 500 ಕೋಟಿಗೂ ಹೆಚ್ಚು ಮೌಲ್ಯದ ಯೋಜನೆ;ಮೋದಿಯಿಂದ ಶಂಕುಸ್ಥಾಪನೆ

"ಕಳೆದ ವರ್ಷ ಒಟ್ಟು 44 ಸ್ವಾರ್ಟ್ಅಪ್ ಗಳು ಸ್ಥಾಪನೆಯಾಗಿವೆ. ಈ ವರ್ಷ 3-4 ತಿಂಗಳಲ್ಲಿ 14 ಸ್ವಾರ್ಟ್ಅಪ್‌ಗಳು ಹೊಸದಾಗಿ ಸ್ಥಾಪನೆಯಾಗಿವೆ. ಇದರ ಅರ್ಥ ಜಾಗತಿಕವಾಗಿ ಕಾಡುತ್ತಿರುವ ಕೊರೊನಾ ಸಾಂಕ್ರಾಮಿಕದ ಈ ಸಂದರ್ಭದಲ್ಲೂ ನಮ್ಮ ಸ್ವಾರ್ಟ್ಅಪ್ ಗಳು ಸಂಪತ್ತು ಮತ್ತು ಮೌಲ್ಯವನ್ನು ಸೃಷ್ಟಿಸುತ್ತಿವೆ,'' ಎಂದು ಮೋದಿ ಶ್ಲಾಘಿಸಿದರು.

ಪ್ರಧಾನಿಯವರೇ ಸುಳ್ಳು ಹೇಳದೆ ಈ 5 ಪ್ರಶ್ನೆಗಳಿಗೆ ಉತ್ತರಿಸಿ: ಸುರ್ಜೇವಾಲಾಪ್ರಧಾನಿಯವರೇ ಸುಳ್ಳು ಹೇಳದೆ ಈ 5 ಪ್ರಶ್ನೆಗಳಿಗೆ ಉತ್ತರಿಸಿ: ಸುರ್ಜೇವಾಲಾ

ಅಮೆರಿಕ, ಯುಕೆಗಿಂತಲೂ ಮುಂದು

ಅಮೆರಿಕ, ಯುಕೆಗಿಂತಲೂ ಮುಂದು

"ಭಾರತೀಯ ಸ್ವಾರ್ಟ್ಅಪ್‌ಗಳ ಸರಾಸರಿ ವಾರ್ಷಿಕ ಬೆಳವಣಿಗೆಯ ದರವು ಅಮೆರಿಕ, ಯುಕೆ ಮತ್ತು ಇತರ ಹಲವು ದೇಶಗಳಿಗಿಂತಲೂ ಹೆಚ್ಚಿದೆ. ಮುಂಬರುವ ದಿನಗಳಲ್ಲಿ ಈ ಸಂಖ್ಯೆಯು ತೀವ್ರವಾಗಿ ಏರಿಕೆಯಾಗಲಿದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಇ-ಕಾಮರ್ಸ್, ಫಿನ್-ಟೆಕ್, ಎಡ್-ಟೆಕ್ ಮತ್ತು ಬಯೋಟೆಕ್ ಕ್ಷೇತ್ರಗಳಲ್ಲಿ ಸ್ವಾರ್ಟ್ಅಪ್‌ಗಳು ಕಾರ್ಯನಿರ್ವಹಿಸುತ್ತಿವೆ,'' ಎಂದರು.

ಸಣ್ಣ ನಗರ, ಪಟ್ಟಣಗಳ ಉದ್ಯಮಿಗಳು

ಸಣ್ಣ ನಗರ, ಪಟ್ಟಣಗಳ ಉದ್ಯಮಿಗಳು

"ಸ್ವಾರ್ಟ್ಅಪ್‌ಗಳು ನವಭಾರತದ ಮನೋಭಾವವನ್ನು ಪ್ರತಿಬಿಂಬಿಸುತ್ತಿವೆ. ಇಂದು ಭಾರತದ ಸ್ವಾರ್ಟ್ಅಪ್‌ಗಳು ಕೇವಲ ದೊಡ್ಡ ನಗರಗಳಿಂದ ಹೊರಹೊಮ್ಮುತ್ತಿಲ್ಲ. ಸಣ್ಣ ನಗರಗಳು ಮತ್ತು ಪಟ್ಟಣಗಳಿಂದಲೂ ಉದ್ಯಮಿಗಳು ಹೊರಹೊಮ್ಮುತ್ತಿದ್ದಾರೆ. ಭಾರತದಲ್ಲಿ ನೂತನ ಕಲ್ಪನೆಗಳನ್ನು ಹೊಂದಿರುವವರು ಸಂಪತ್ತನ್ನು ಸೃಷ್ಟಿಸಬಲ್ಲರು ಎಂಬುದನ್ನು ಇದು ತೋರಿಸುತ್ತದೆ,'' ಎಂದು ಹೇಳಿದರು.

"ಉತ್ತಮ ಮಾರ್ಗದರ್ಶಕರು ಸ್ವಾರ್ಟ್ಅಪ್ ಅನ್ನು ಹೊಸ ಎತ್ತರಕ್ಕೆ ಕೊಂಡಯ್ಯಬಲ್ಲರು. ಸಂಸ್ಥಾಪಕರು ಸರಿಯಾದ ನಿರ್ಧಾರ ತೆಗೆದುಕೊಳ್ಳುವ ನಿಟ್ಟಿನಲ್ಲಿ ಎಲ್ಲ ರೀತಿಯಲ್ಲೂ ಮಾರ್ಗದರ್ಶನ ನೀಡಬಲ್ಲರು. ಭಾರತದಲ್ಲಿ ಸ್ವಾರ್ಟ್ಅಪ್ ಗಳನ್ನು ಉತ್ತೇಜಿಸಲು ತಮ್ಮನ್ನು ತಾವು ಸಮರ್ಪಿಸಿಕೊಂಡಿರುವ ಇಂತಹ ಅನೇಕ ಮಾರ್ಗದರ್ಶರು ಇದ್ದಾರೆ ಎಂಬುದಕ್ಕೆ ನನಗೆ ಹೆಮ್ಮೆ ಇದೆ,'' ಎಂದು ನರೇಂದ್ರ ಮೋದಿ ಶ್ಲಾಘಿಸಿದರು.

ನೂತನ ಮೈಲಿಗಲ್ಲು ಸ್ಥಾಪನೆಯ ಭರವಸೆ

ನೂತನ ಮೈಲಿಗಲ್ಲು ಸ್ಥಾಪನೆಯ ಭರವಸೆ

"ಇಂದು ದೇಶದಲ್ಲಿ ಸಂಪೂರ್ಣ ಬೆಂಬಲದೊಂದಿಗೆ ಸ್ವಾರ್ಟ್ಅಪ್ ಗಳು ವಿಕಸನಗೊಳ್ಳುತ್ತಿರುವುದು ನಮಗೆ ತುಂಬ ಸಂತೋಷದ ವಿಷಯವಾಗಿದೆ. ಮುಂಬರುವ ದಿನಗಳಲ್ಲಿ ಭಾರತದ ಸ್ವಾರ್ಟ್ಅಪ್ ಕ್ಷೇತ್ರದ ಪ್ರಗತಿಯಲ್ಲಿ ನೂತನ ಮೈಲಿಗಲ್ಲು ಸ್ಥಾಪಿಸಲಿದ್ದೇವೆ ಎಂಬ ಬಗ್ಗೆ ನನಗೆ ಖಾತ್ರಿ ಇದೆ,'' ಎಂದು ಭರವಸೆ ವ್ಯಕ್ತಪಡಿಸಿದರು.

ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಸಿದ್ಧತೆ

ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಸಿದ್ಧತೆ

"ಜಗತ್ತಿನಾದ್ಯಂತ ಜೂನ್‌ 21ರಂದು ಎಂಟನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನದ ಥೀಮ್-ಮಾನವೀಯತೆಗಾಗಿ ಯೋಗ. ಅತ್ಯಂತ ಉತ್ಸಾಹದಿಂದ ಯೋಗ ದಿನವನ್ನು ಆಚರಿಸುವಂತೆ ನಾನು ನಿಮ್ಮೆಲ್ಲರಲ್ಲೂ ಮನವಿ ಮಾಡುತ್ತೇನೆ. ಈ ವೇಳೆ ಕೊರೊನಾ ಮುನ್ನೆಚ್ಚರಿಕಾ ಕ್ರಮಗಳನ್ನು ಸಹ ತೆಗೆದುಕೊಳ್ಳಿ,'' ಎಂದು ಹೇಳಿದರು.

ಉತ್ತಮ ಆರೋಗ್ಯಕ್ಕೆ ಯೋಗ ಸಹಕಾರಿ

ಉತ್ತಮ ಆರೋಗ್ಯಕ್ಕೆ ಯೋಗ ಸಹಕಾರಿ

"ಕೋವಿಡ್-19 ಪರಿಸ್ಥಿತಿಯು ಇಡೀ ಪ್ರಪಂಚಾದ್ಯಂತ ಗಮನಿಸಿದರೆ ಮೊದಲಿಗಿಂತಲೂ ಉತ್ತಮವಾಗಿದೆ. ಹೆಚ್ಚು ಹೆಚ್ಚು ಲಸಿಕಾ ಅಭಿಯಾನದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನರು ಧೈರ್ಯವಾಗಿ ಹೊರಗೆ ಓಡಾಡುತ್ತಿದ್ದಾರೆ. ಅದ್ದರಿಂದ ಅಂತಾರಾಷ್ಟ್ರೀಯ ಯೋಗ ದಿನಕ್ಕಾಗಿ ಪ್ರಪಂಚಾದ್ಯಂತ ಸಾಕಷ್ಟು ಸಿದ್ಧತೆಗಳು ಕಂಡುಬರುತ್ತಿವೆ,'' ಎಂದರು.

"ನಮ್ಮ ಜೀವನದಲ್ಲಿ ಆರೋಗ್ಯದ ಪ್ರಮುಖ್ಯತೆ ಏನು ಎಂಬುದನ್ನು ಕೊರೊನಾ ವೈರಸ್ ನಮ್ಮಲ್ಲಿ ಅರಿವಾಗುವಂತೆ ಮಾಡಿದೆ. ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಯೋಗ ಅತ್ಯಂತ ಹೆಚ್ಚು ಸಹಕಾರಿಯಾಗಿದೆ. ದೈಹಿಕ, ಆಧ್ಯಾತ್ಮಿಕ ಮತ್ತು ಬೌದ್ಧಿಕ ಆರೋಗ್ಯಕ್ಕೆ ಯೋಗ ಹೆಚ್ಚು ಸಹಕಾರಿ ಎಂಬುದನ್ನು ಜನರು ಅನುಭವಿಸುತ್ತಿದ್ದಾರೆ,'' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

English summary
Number of unicorns in India has reached to 100. And also Indian start-ups created wealth, value even during pandemic said Prime Minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X