ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಟಿಎಂನಲ್ಲೇ ಬ್ಯಾಂಕ್ ಅಕೌಂಟ್ ಓಪನಿಂಗ್, ಚೆಕ್ ಕ್ಲಿಯರೆನ್ಸ್

|
Google Oneindia Kannada News

ಬೆಂಗಳೂರು, ಜೂನ್ 14: ಎಟಿಎಂ ತಯಾರಕರು ಹಾಗೂ ಸೇವೆ ಒದಗಿಸುವ ಎನ್ ಸಿಆರ್ ಕಾರ್ಪೋರೇಷನ್ ಹೊಸ ಎಟಿಎಂನ ಪರಿಚಯಿಸಿದೆ. ಇವು ಈವರೆಗೆ ನೀವು ನೋಡಿದ-ಬಳಸಿದ ಎಟಿಎಂಗಳಂತಲ್ಲ. ನಿಮ್ಮ ಹಲವಾರು ಬ್ಯಾಂಕಿಂಗ್ ವ್ಯವಹಾರಗಳನ್ನು ಇದರ ಮೂಲಕವೇ ಮಾಡಬಹುದು. ನಿಮ್ಮ ಬ್ಯಾಂಕ್ ವರೆಗೆ ಹೋಗುವ ಅಗತ್ಯವೇ ಇಲ್ಲದೆ ಎಟಿಎಂ ಕಾರ್ಡ್ ಪಡೆಯಬಹುದು.

ಬ್ಯಾಂಕ್ ಗಳಿಂದ ಗ್ರಾಹಕರ ಸುಲಿಗೆ ನಿಲ್ಲಿಸಲು ಆನ್ ಲೈನ್ ಅಭಿಯಾನಬ್ಯಾಂಕ್ ಗಳಿಂದ ಗ್ರಾಹಕರ ಸುಲಿಗೆ ನಿಲ್ಲಿಸಲು ಆನ್ ಲೈನ್ ಅಭಿಯಾನ

ಬ್ಯಾಂಕಿಂಗ್ ವ್ಯವಸ್ಥೆಯ ಭವಿಷ್ಯವೇ ಈ ಯಂತ್ರಗಳು. ಈ ಹೊಸ ಎಟಿಎಂಗಳ ಬೆಲೆ ಮೂವತ್ತರಿಂದ ಐವತ್ತು ಲಕ್ಷ ರುಪಾಯಿ. ಅದು ಯಾವ ರೀತಿಯ ಕಾರ್ಯ ನಿರ್ವಹಿಸುತ್ತದೆ ಎಂಬುದರ ಆಧಾರದಲ್ಲಿ ಬೆಲೆ ನಿಗದಿ ಆಗಿರುತ್ತದೆ. ಈ ಎಟಿಎಂಗಳಲ್ಲಿ ಮೂರು ಬಗೆ. SS32, SS22, SS83. ಇವು ಸಾಮಾನ್ಯ ಎಟಿಎಂಗಳಂತೆ ಕೆಲಸ ಮಾಡಿದರೂ ಅವುಗಳಿಗಿಂತ ಹೆಚ್ಚು ಕಾರ್ಯಗಳನ್ನು ಮಾಡುತ್ತವೆ.

Now, your ATMs may open bank accounts, clear cheques

ಮುಖ್ಯವಾಗಿ ಬ್ಯಾಂಕ್ ಖಾತೆಯನ್ನು ಎಟಿಎಂ ಮೂಲಕವೇ ತೆರೆಯಬಹುದು. ಚೆಕ್ ಕ್ಲಿಯರ್ ಕೂಡ ಆಗುತ್ತದೆ. ಇನ್ನೊಂದು ವಿಚಾರ ಏನೆಂದರೆ, ಬ್ಯಾಂಕ್ ಖಾತೆ ತೆರೆಯಬಹುದು, ಡೆಬಿಟ್ ಕಾರ್ಡ್ ಪಡೆಯಬಹುದು, ಜತೆಗೆ ಆಟೋಮೆಟಿಕ್ ಸಹಿ ಪರಿಶೀಲನೆ, ಹಣ ವರ್ಗಾವಣೆ, ಬಿಲ್ ಪಾವತಿ, ಮೊಬೈಲ್ ಗೆ ಕರೆನ್ಸಿ ಹಾಕಿಕೊಳ್ಳುವುದು..ಎಲ್ಲವನ್ನು ಈ ಎಟಿಎಂ ಮೂಲಕ ಮಾಡಬಹುದು.

ಈಗಿರುವ ಎಟಿಎಂಗಳನ್ನು ಎನ್ ಸಿಆರ್ ಕಾರ್ಪೋರೇಷನ್ ಬದಲಿಸಬೇಕಿದೆ. ಅದಕ್ಕೂ ಮುಂಚೆ ಮೂರು ಸ್ಥಳಗಳಲ್ಲಿ ಸರಕಾರಿ ಹಾಗೂ ಖಾಸಗಿ ಬ್ಯಾಂಕ್ ಗಳನ್ನು ಆರಿಸಿಕೊಂಡು ಪ್ರಾಯೋಗಿಕವಾಗಿ ಬದಲಾವಣೆಗೆ ಮುಂದಾಗಿದೆ.

English summary
ATM manufacturer and service provider NCR Corporation introduced a new multi-channel solution to the customers which will facilitate more functions on an ATM. Now, you may get your ATM card even without going to bank.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X