ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳೆ ಕಂಪನಿಯಲ್ಲಿನ EPF ಖಾತೆ ವರ್ಗಾವಣೆ ಇನ್ನು ಸರಳ!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 23: ಯಾವುದೇ ನೌಕರನು, ಒಂದು ಸಂಸ್ಥೆಯಿಂದ ಮತ್ತೊಂದು ಸಂಸ್ಥೆಗೆ ವಲಸೆ ಹೋದಾಗ, ಹಿಂದಿನ ಸಂಸ್ಥೆಯಲ್ಲಿ ತಾನು ಕಟ್ಟುತ್ತಿದ್ದ ಇಪಿಎಫ್ (ನೌಕರರ ಭವಿಷ್ಯ ನಿಧಿ) ಖಾತೆಯನ್ನು ಹೊಸ ಸಂಸ್ಥೆಯೊಂದಿಗೆ ನೊಂದಾಯಿಸುವ ವಿಧಾನ ಇನ್ನು ಸುಲಭವಾಗಲಿದೆ.

ಪ್ರಸ್ತುತ, ಹೊಸ ಸಂಸ್ಥೆಗೆ ಹೋಗುವ ನೌಕರನು ಫಾರ್ಮ್ ಸಂಖ್ಯೆ 13 ತುಂಬುವ ಮೂಲಕ ತನ್ನ ಹಳೆಯ ಸಂಸ್ಥೆಯಲ್ಲಿದ್ದ ಇಪಿಎಫ್ ಖಾತೆಯನ್ನು ತನ್ನ ಹೊಸ ಸಂಸ್ಥೆಯೊಂದಿಗೆ ಜೋಡಿಸಿಕೊಳ್ಳಬೇಕಿದೆ. ಆದರೆ, ಶೀಘ್ರದಲ್ಲೇ ಈ ಸರ್ಕಸ್ ಗೆ ಪೂರ್ಣ ವಿರಾಮ ಬೀಳಲಿದ್ದು, ಹೊಸ ಸಂಸ್ಥೆಗೆ ಇಪಿಎಫ್ ಖಾತೆ ಜೋಡಣೆ ಕಾರ್ಯ ಸರಳಗೊಳಿಸಲಾಗುವುದು ಎಂದು ಇಪಿಎಫ್ ಮಂಡಳಿ ತಿಳಿಸಿದೆ.

Now you need not file separate EPF transfer claim on changing jobs

ಇದಕ್ಕಾಗಿ ಎಫ್ -11 ಎಂಬ ಹೆಸರಿನ ಹೊಸ ಅರ್ಜಿಯನ್ನು ಶೀಘ್ರದಲ್ಲೇ ಇಪಿಎಫ್ ಸಂಸ್ಥೆ ಬಿಡುಗಡೆ ಮಾಡಲಿದೆ. ಯಾವುದೇ ನೌಕರನು, ಈ ಅರ್ಜಿಯನ್ನು ತುಂಬಬೇಕಿರುತ್ತದೆ. ಇದರಲ್ಲಿ ಹಳೆಯ ಕಂಪನಿಯಲ್ಲಿ ತಾನು ಹೊಂದಿದ್ದ ಇಪಿಎಫ್ ಖಾತೆಯ ಮಾಹಿತಿಯನ್ನು ದಾಖಲಿಸಬೇಕಾಗುತ್ತದೆ. ತುಂಬಿದ ಅರ್ಜಿಯನ್ನು ತಾನು ಸೇರುವ ಹೊಸ ಕಂಪನಿಗೆ ನೌಕರನು ಸಲ್ಲಿಸಿದರೆ ಸಾಕು, ಹಳೆಯ ಕಂಪನಿಯ ಜತೆ ಹೊಂದಿಕೊಂಡಿದ್ದ ಆತನ ಇಪಿಎಫ್ ಖಾತೆಯು ಹೊಸ ಕಂಪನಿಗೆ ಬೇಗನೇ ವರ್ಗಾಯಿಸಲ್ಪಡುತ್ತದೆ ಎಂದು ಸಂಸ್ಥೆ ತಿಳಿಸಿದೆ.

English summary
Retirement fund body EPFO's subscribers are no longer required to file separate EPF transfer claims using Form-13 after changing jobs as it will now be done automatically, by just filling up the new form 11 which be introduced soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X