• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇನ್ಮುಂದೆ ಪೇಟಿಎಂ ಬಳಸಿ ಎಲ್ಐಸಿ ಪ್ರೀಮಿಯಂ ಪಾವತಿಸಿ

|

ಬೆಂಗಳೂರು, ನವೆಂಬರ್ 21: ವಿಮಾ ಪಾಲಿಸಿಗಳ ಪ್ರೀಮಿಯಂ ಪಾವತಿ ಸೇವೆಯನ್ನು ಮತ್ತಷ್ಟು ವಿಸ್ತರಿಸಿರುವ ಪೇಟಿಎಂ, ಇದಕ್ಕೆ ಸಂಬಂಧಿಸಿದಂತೆ ಭಾರತದ ಅತ್ಯಂತ ಬೃಹತ್ ವಿಮಾ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮ'ದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.

ಇದರಿಂದಾಗಿ, ಎಲ್ಐಸಿ ಪಾಲಿಸಿದಾರರು ಇನ್ನುಮುಂದೆ ಕ್ಷಣಾರ್ಧದಲ್ಲಿ, ಆನ್-ಲೈನ್ ಮೂಲಕ ತಮ್ಮ ಕಂತಿನ ಮೊತ್ತವನ್ನು ಪಾವತಿಸುವುದು ಸಾಧ್ಯವಾಗಲಿದೆ.

ಇದಲ್ಲದೆ, ಮುಂಚೂಣಿ ವಿಮಾ ಸಂಸ್ಥೆಗಳಾದ ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್, ರಿಲಯನ್ಸ್ ಲೈಫ್, ಮ್ಯಾಕ್ಸ್ ಲೈಫ್ ಇನ್ಶುರೆನ್ಸ್, ಎಚ್ ಡಿಎಫ್ ಸಿ ಲೈಫ್, ಟಾಟಾ ಎಐಎ, ಎಸ್ ಬಿಐ ಲೈಫ್, ಆದಿತ್ಯ ಬಿರ್ಲಾ ಸನ್ ಲೈಫ್, ಕೆನಾ ಎಚ್ಎಸ್ ಬಿಸಿ ಲೈಫ್ ಇನ್ಶುರೆನ್ಸ್, ಶ್ರೀರಾಮ್ ಲೈಫ್ ಮತ್ತು ಸ್ಟಾರ್ ಲೈಫ್ ಮುಂತಾದ 30ಕ್ಕೂ ಹೆಚ್ಚು ಸಂಸ್ಥೆಗಳ ಜೀವವಿಮೆ ಕಂತುಗಳನ್ನು ಕೂಡ ಪೇಟಿಎಂ ಮೂಲಕ ಆನ್-ಲೈನ್ ನಲ್ಲಿ ಸುಲಭವಾಗಿ ಪಾವತಿಸಬಹುದು ಎಂದು ಪೇಟಿಎಂ ಸಂಸ್ಥೆಯ ಸಿಒಒ ಕಿರಣ್ ವಸಿರೆಡ್ಡಿ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, "ಸಾಮಾನ್ಯವಾಗಿ ನಮ್ಮ ದೇಶದಲ್ಲಿ ವಿಮಾ ಕಂತುಗಳನ್ನು ಹೆಚ್ಚಿನ ಪಾಲಿಸಿದಾರರು ಸಾಂಪ್ರದಾಯಿಕ ಮಾದರಿಯಲ್ಲೇ ಪಾವತಿಸುತ್ತಿದ್ದಾರೆ. ಇಂತಹ ಕೋಟ್ಯಂತರ ಪಾಲಿಸಿದಾರರು ಸುಗಮವಾಗಿ ಮತ್ತು ಸುಲಭವಾಗಿ, ಕೇವಲ ಅರೆಕ್ಷಣದಲ್ಲಿ ತಾವಿದ್ದ ಜಾಗದಿಂದಲೇ ಆನ್-ಲೈನ್ ಮೂಲಕ ಕಂತುಗಳನ್ನು ಪಾವತಿಸುವಂತೆ ಮಾಡಬೇಕೆಂಬುದು ನಮ್ಮ ಆಶಯವಾಗಿದೆ. ಆನ್ಲೈನ್ ಮೂಲಕ ಪಾವತಿ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎನ್ನುವುದನ್ನು ನಾವು ನಮ್ಮ ಗ್ರಾಹಕರಿಗೆ ತಿಳಿಸಿಕೊಡಲಿದ್ದೇವೆ,'' ಎಂದಿದ್ದಾರೆ.

ಡಿ.1ರಿಂದ ಎಲ್ಐಸಿಯ ಜನಪ್ರಿಯ ವಿಮೆ ಯೋಜನೆ ಸ್ಥಗಿತ

ಪಾಲಿಸಿಗಳ ಲೆಕ್ಕ ಹಿಡಿದು ಹೇಳುವುದಾದರೆ, 360 ದಶಲಕ್ಷ ವಿಮಾ ಪಾಲಿಸಿಗಳನ್ನು ಹೊಂದಿರುವ ಭಾರತವು ಈ ವಿಚಾರದಲ್ಲಿ ಜಗತ್ತಿನಲ್ಲೇ ಅತ್ಯಂತ ದೊಡ್ಡ ಜೀವವಿಮಾ ವಲಯವಾಗಿದೆ.

ಇದರ ಜತೆಗೆ, ಮುಂದಿನ ಐದು ವರ್ಷಗಳಲ್ಲಿ ಈ ವಲಯವು ವರ್ಷಕ್ಕೆ ಶೇಕಡ 12ರಿಂದ 15ರಷ್ಟು ಸಂಯೋಜಿತ ಬೆಳವಣಿಗೆಯನ್ನು ಹೊಂದುವ ನಿರೀಕ್ಷೆ ಇದೆ.

ಸದ್ಯಕ್ಕೆ 50 ಶತಕೋಟಿ ಡಾಲರ್ ಮೌಲ್ಯ ಹೊಂದಿರುವ ದೇಶದ ಜೀವವಿಮಾ ವಲಯವು ಮುಂದಿನ ಒಂದು ದಶಕದಲ್ಲಿ ನಾಲ್ಕು ಪಟ್ಟು ಬೆಳವಣಿಗೆ ಹೊಂದಲಿದ್ದು, 200 ಶತಕೋಟಿ ಡಾಲರ್ ಮುಟ್ಟಲಿದೆ.

ಸಾರ್ವಜನಿಕರಿಗೆ ಅನುಕೂಲಕರವಾದ ವಿಧಾನಗಳನ್ನು ಪರಿಚಯಿಸುವ ಮೂಲಕ ಈ ಮಾರುಕಟ್ಟೆಯನ್ನು ಸದ್ಬಳಕೆ ಮಾಡಿಕೊಳ್ಳುವುದು ಪೇಟಿಎಂ ಸಂಸ್ಥೆಯ ಗುರಿಯಾಗಿದೆ ಎಂದು ಕಿರಣ್ ವಸಿರೆಡ್ಡಿ ತಿಳಿಸಿದ್ದಾರೆ.

English summary
Digital payments service Paytm has entered into a partnership with Life Insurance Corp (LIC) to help customers make insurance premium payments, One97 Communications Ltd, which owns the Paytm brand, said on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more