ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

NSE ಷೇರು ಪೇಟೆಯಲ್ಲಿ ಖರೀದಿಸಿದ ಚಿನ್ನ ಇನ್ಮುಂದೆ ಡೆಲಿವರಿ ಸಿಗುತ್ತೆ !

|
Google Oneindia Kannada News

ಬೆಂಗಳೂರು, ಫೆಬ್ರವರಿ 15: ದೇಶದಲ್ಲಿ ಚಿನ್ನ ಖರೀದಿಸದವರೇ ಇಲ್ಲ ! ಬಡವರಾದರೂ ಒಂದು ಚಿನ್ನದ ತಾಳಿ ಖರೀದಿಸುತ್ತಾರೆ. ಆದರೆ ಚಿನ್ನ ಖರೀದಿಸುವಾಗ ವೇಸ್ಟೇಜ್, ಮೇಕಿಂಗ್ ಚಾರ್ಜ್ ಅಂತ ಒಂದಕ್ಕೆ ನಾಲ್ಕು ಪಟ್ಟು ಸೇರಿಸಿ ಮಾರಾಟ ಮಾಡುತ್ತಾರೆ. ಅದೇ ಚಿನ್ನವನ್ನು ಜನ ಸಾಮಾನ್ಯರು ಮಾರಾಟ ಮಾಡಲು ಹೋದಾಗ ಇದ್ಯಾವುದನ್ನೂ ಪರಿಗಣಿಸುವುದಿಲ್ಲ. ಹೀಗಾಗಿ ಕೆಲವರಿಗೆ ಚಿನ್ನ ಖರೀದಿ ಲಾಭದಾಯಕವಾಗುವ ಬದಲಿಗೆ ನಷ್ಟವೇ ಆಗಿರುತ್ತದೆ. ಇದನ್ನು ತಪ್ಪಿಸಲಿಕ್ಕೆ ಕೇಂದ್ರ ಸರ್ಕಾರವೇ ಇದೀಗ ಮಹತ್ವದ ಯೋಜನೆ ರೂಪಿಸಿದೆ. ಆಭರಣ ಪ್ರಿಯರು , ಚಿನ್ನದ ವಹಿವಾಟು ಮಾಡುವರು ಈ ವಿಶೇಷ ಯೋಜನೆಯಲ್ಲಿ ಚಿನ್ನ ಖರೀದಿಸಿದರೆ ಹೆಚ್ಚು ಲಾಭವಾಗಲಿದೆ.

ಜನ ಸಾಮಾನ್ಯರು ಇನ್ನು ಮುಂದೆ ಚಿನ್ನವನ್ನು ರಾಷ್ಟ್ರೀಯ ಷೇರು ಸೂಚ್ಯಂಕದಲ್ಲಿ ಚಿನ್ನವನ್ನು ಖರೀದಿಸಿ ಡೆಲಿವರಿ ಪಡೆಯಬಹುದು. ಹೌದು. ಡಿ ಮ್ಯಾಟ್ ಖಾತೆ ಹೊಂದಿರುವರು ಈವರೆಗೂ ‍ಷೇರು ಮಾರುಕಟ್ಟೆಯಲ್ಲಿ ಚಿನ್ನವನ್ನು ಖರೀದಿಸುತ್ತಿದ್ದರು. ಇಷ್ಟ ಬಂದಾಗ ಮಾರಾಟ ಮಾಡುತ್ತಿದ್ದರು. ಪ್ರಸಕ್ತ ವರ್ಷದಿಂದ ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಚಿನ್ನ ಖರೀದಿಸಿದರೆ ಅದಕ್ಕೆ ಇ ಖರೀದಿ ಟಿಕೆಟ್ ಪಡೆಯಬಹುದು. ಇದೇ ಟಿಕೆಟ್ ತೋರಿಸಿ ಎನ್‌ಎಸ್ಐ ಇಂಡಿಯಾ ಸೂಚಿತ ಚಿನ್ನದ ಮಳಿಗೆಯಲ್ಲಿ ಹಾಲ್ ಮಾರ್ಕ್ ಚಿನ್ನವನ್ನು ಡೆಲಿವರಿ ಪಡೆಯಬಹುದು. ಇಂತಹದೊಂದು ಅವಕಾಶವನ್ನು ಕಲ್ಪಿಸಿ ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಘೋಷಿಸಿದೆ. ಇದರ ಬೆನ್ನಲ್ಲೇ ರಾಷ್ಟ್ರೀಯ ಷೇರು ಸೂಚ್ಯಂಕ ( NSE - INDIA) ಕಾರ್ಯ ಪ್ರವೃತ್ತವಾಗಿದೆ. ಕೆಲವೇ ದಿನಗಳಲ್ಲಿ ಷೇರು ಮಾರುಕಟ್ಟೆ ಮೂಲಕ ಖರೀದಿಸುವ ಚಿನ್ನವನ್ನು ಡೆಲಿವರಿ ಪಡೆಯಬಹುದು. ಇದು ಚಿನ್ನದ ಮೇಲಿನ ಹೂಡಿಕೆದಾರರಲ್ಲಿ ಭಾರೀ ಸಂತಸ ಉಂಟು ಮಾಡಿದೆ.

NSE ಷೇರು ಪೇಟೆಯಲ್ಲಿ ಖರೀದಿಸಿದ ಚಿನ್ನ ಇನ್ಮುಂದೆ ಡೆಲಿವರಿ ಸಿಗುತ್ತೆ !

NSE ಷೇರು ಪೇಟೆಯಲ್ಲಿ ಖರೀದಿಸಿದ ಚಿನ್ನ ಇನ್ಮುಂದೆ ಡೆಲಿವರಿ ಸಿಗುತ್ತೆ !

ರಾಷ್ಟ್ರಿಯ ಷೇರು ಸೂಚ್ಯಂಕ ದೇಶದ ಪ್ರತಿ ರಾಜ್ಯದ ರಾಜದಾನಿಯಲ್ಲಿ ತಲಾ ಒಂದರಂತೆ ಚಿನ್ನ ಡೆಲಿವರಿ ಕೊಡುವ ಮಳಿಗೆ ಗುರುತಿಸಲಿದೆ. ಯಾರಾದರೂ ಎನ್‌ಎಸ್ ಇ ಮೂಲಕ ಚಿನ್ನ ಖರೀದಿಸಿ, ಅದನ್ನು ಡೆಲಿವರಿ ಪಡೆಯಲು ಇಚ್ಛಿಸಿದರೆ, ಇ ಟಿಕೆಟ್ ತೋರಿಸಿ ಅಧಿಸೂಚಿತ ಮಳಿಗೆ ಕೇಂದ್ರದಲ್ಲಿ ಚಿನ್ನವನ್ನು ಡೆಲಿವರಿ ಪಡೆಯಬಹುದು. ಇದರಿಂದ ಚಿನ್ನದ ಪ್ರಿಯರಿಗೆ ಭಾರೀ ಸಂತಸ ಉಂಟು ಮಾಡಿದೆ.

NSE ಷೇರು ಪೇಟೆಯಲ್ಲಿ ಖರೀದಿಸಿದ ಚಿನ್ನ ಇನ್ಮುಂದೆ ಡೆಲಿವರಿ ಸಿಗುತ್ತೆ !

NSE ಷೇರು ಪೇಟೆಯಲ್ಲಿ ಖರೀದಿಸಿದ ಚಿನ್ನ ಇನ್ಮುಂದೆ ಡೆಲಿವರಿ ಸಿಗುತ್ತೆ !

ಚಿನ್ನದ ಬಿಸ್ಕೆಟ್ ಗೆ ಬೇಡಿಕೆ: ರಾಷ್ಟ್ರೀಯ ಷೇರು ಸೂಚ್ಯಂಕದಲ್ಲಿ ಚಿನ್ನವನ್ನು ಖರೀದಿಸಿದ ಕೂಡಲೇ ಇ ಟಿಕೆಟ್ ನೀಡುತ್ತಾರೆ. ಆ ಟಿಕೆಟ್ ನ್ನು ಎನ್‌ಎಸ್ ಇ ಇಂಡಿಯಾ ಅಧಿಸೂಚಿತ ಮಳಿಗೆಯಲ್ಲಿ ನೀಡಿದರೆ ಸಾಕು, ಚಿನ್ನದ ಬಿಸ್ಕೆಟ್ ಕೊಡುತ್ತಾರೆ ಇದಕ್ಕಾಗಿ ಹೆಚ್ಚವರಿ ಐದು ರೂಪಾಯಿ ಕೂಡ ನಷ್ಟವಾಗುವುದಿಲ್ಲ. ಅತ್ತುತ್ತಮ ಗುಣ ಮಟ್ಟದ ಚಿನ್ನವನ್ನು ಖರೀದಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು. ಇಲ್ಲಿ ಹೆಚ್ಚುವರಿ ಶುಲ್ಕ ಅಂತ ಯಾವುದನ್ನೂ ಹಾಕುವುದಿಲ್ಲ. ಹೀಗಾಗಿ ಗುಣಮಟ್ಟದ ಚಿನ್ನವನ್ನು ಖರೀದಿಸಿ ಎನ್‌ಎಸ್ಇ ಇಂಡಿಯಾ ದಿಂದಲೇ ಪಡೆಯುವುದರಿಂದ ಚಿನ್ನದಲ್ಲಿ ಮೋಸ ಹೋಗುವ ಅಗತ್ಯವೇ ಬೀಳಲ್ಲ ಎಂದು ಷೇರು ಮಾರುಕಟ್ಟೆಯ ಮೂಲಕ ಚಿನ್ನದ ಖರೀದಿ ಮಾಡುವ ಗ್ರಾಹಕರೊಬ್ಬರು ತನ್ನ ಅಭಿಪ್ರಾಯ ಹಂಚಿಕೊಂಡರು.

NSE ಷೇರು ಪೇಟೆಯಲ್ಲಿ ಖರೀದಿಸಿದ ಚಿನ್ನ ಇನ್ಮುಂದೆ ಡೆಲಿವರಿ ಸಿಗುತ್ತೆ !

NSE ಷೇರು ಪೇಟೆಯಲ್ಲಿ ಖರೀದಿಸಿದ ಚಿನ್ನ ಇನ್ಮುಂದೆ ಡೆಲಿವರಿ ಸಿಗುತ್ತೆ !

ಚಿನ್ನದ ಮೇಲಿನ ಹೂಡಿಕೆ ಯಾವಗತ್ತಿಗೂ ನಷ್ಟ ಆಗಲ್ಲ. ಆದರೆ, ಚಿನ್ನದ ಮಳಿಗೆಗಳಲ್ಲಿ ಆಭರಣ ಖರೀದಿಸುವುದರಲ್ಲಿ ಗ್ರಾಹಕರು ಒಂದಲ್ಲಾ ಒಂದು ರೀತಿ ಮೋಸ ಹೋಗುತ್ತಾರೆ. ಚಿನ್ನದ ಗುಣಮಟ್ಟದಲ್ಲಿ ಎಡವಟ್ಟು ಆಗಬಹುದು, ಇಲ್ಲವೇ ದರದಲ್ಲಿ ಮೋಸ ಹೋಗಬಹುದು. ವೇಸ್ಟೇಜ್, ಮೇಕಿಂಗ್ ಅಂತ ನಾನಾ ರೀತಿಯಲ್ಲಿ ನಷ್ಟಕ್ಕೆ ಎಡೆ ಮಾಡಿಕೊಡಬಹುದು. ಆದರೆ, ಚಿನ್ನದ ಮೇಲೆ ಹೂಡಿಕೆ ಮಾಡಿ ಲಾಭ ಮಾಡುವ ಆಸಕ್ತಿಯುಳ್ಳವರು, ಆಭರಣ ಪ್ರಿಯರು ಎನ್‌ಎಸ್ಇ ಇಂಡಿಯಾ ಷೇರು ಮಾರುಕಟ್ಟೆಯಲ್ಲಿ ಖರೀದಿಸಬಹುದು. ಚಿನ್ನ ಡೆಲಿವರಿ ಪಡೆಯುವ ಅಧಿಕೃತ ಮಳಿಗೆಗಳ ಪಟ್ಟಿಯನ್ನು ಎನ್‌ಎಸ್ಇ ಶೀಘ್ರದಲ್ಲಿಯೇ ಬಿಡುಗಡೆ ಮಾಡಲಿದೆ ಎಂದು ತಿಳಿದು ಬಂದಿದೆ.

NSE ಷೇರು ಪೇಟೆಯಲ್ಲಿ ಖರೀದಿಸಿದ ಚಿನ್ನ ಇನ್ಮುಂದೆ ಡೆಲಿವರಿ ಸಿಗುತ್ತೆ !

NSE ಷೇರು ಪೇಟೆಯಲ್ಲಿ ಖರೀದಿಸಿದ ಚಿನ್ನ ಇನ್ಮುಂದೆ ಡೆಲಿವರಿ ಸಿಗುತ್ತೆ !

ಇನ್ನು ಎನ್ಎಸ್ ಇ ಇಂಡಿಯಾ ಷೇರು ಮಾರುಕಟ್ಟೆಯಲ್ಲಿ ಚಿನ್ನ ಖರೀದಿಸಲು ಇಚ್ಛಿಸುವರು ಕಡ್ಡಾಯವಾಗಿ ಡಿ ಮ್ಯಾಟ್ ಅಕೌಂಟ್ ಹೊಂದಿರಬೇಕು. ಚಿನ್ನವನ್ನು ಖರೀದಿಸಿದ ಕೂಡಲೇ ಈ ಡಿ ಮ್ಯಾಟ್ ಖಾತೆಗೆ ಇ ಖರೀದಿ ರಶೀದಿ ಬರುತ್ತದೆ. ಅದನ್ನು ಎನ್‌ಎಸ್ ಯ ಅಧಿಸೂಚಿತ ಮಳಿಗೆಯಲ್ಲಿ ನೀಡಿ ಗುಣಮಟ್ಟದ ಚಿನ್ನವನ್ನು ಡೆಲಿವರಿ ಪಡೆಯಬಹುದಾಗಿದೆ. ಈ ವರ್ಷಾಂತ್ಯದಲ್ಲಿ ಈ ಸುವರ್ಣ ಅವಕಾಶ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಎನ್ ಎಸ್ ಇ ಕಾರ್ಯೋನ್ಮುಖವಾಗಿದೆ.

English summary
Now you get your gold delivery bought through NSE India. Know more about the new scheme announced in Union Budget 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X