ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ಡೌನ್ ಆಫರ್ : ಜಿಯೋ ರೀಚಾರ್ಜ್ ಮಾಡಿ ಕಮಿಷನ್ ಗಳಿಸಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 19: ಜಿಯೋ ತನ್ನ ಗ್ರಾಹಕರರಿಗೆ ಮತ್ತೊಮ್ಮೆ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಲು ಮುಂದಾಗಿದೆ. ಪ್ರತಿ ಜಿಯೋ ಬಳಕೆದಾರರಿಗೂ ಒಳಬರುವ ಕರೆಗಳನ್ನು ಸ್ವೀಕರಿಸುವುದನ್ನು ಮುಂದುವರಿಸುವುದಾಗಿ ಘೋಷಿಸಿದೆ. ಇದು ಕಡಿಮೆ-ಆದಾಯವನ್ನು ಹೊಂದಿರುವ ಬಳಕೆದಾರರಿಗೆ ಪ್ರಯೋಜನವನ್ನು ನೀಡುವುದಲ್ಲದೆ, ಈ ಸವಾಲಿನ ಸಮಯದಲ್ಲಿ ರೀಚಾರ್ಜ್ ಮಾಡಲು ಸಾಧ್ಯವಾಗದ ಎಲ್ಲರಿಗೂ ಪ್ರಯೋಜನವನ್ನು ನೀಡುತ್ತದೆ.

MyJio ಮತ್ತು Jio.com ಮೂಲಕ ಪ್ರತಿಯೊಬ್ಬ ಜಿಯೋ ಬಳಕೆದಾರರು ಸಂಪರ್ಕದಲ್ಲಿರಲು ಅನುವು ಮಾಡಿಕೊಡುತ್ತದೆ, ಅಲ್ಲದೇ ಇಲ್ಲಿ ಬಳಕೆದಾರರು ಯಾವುದೇ ಸಮಸ್ಯೆ ಇಲ್ಲದೆ ರಿಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ.

ಜಿಯೋಫೋನ್‌ ಬಳಕೆದಾರರಿಗೆ ಬಂಪರ್ ಆಫರ್ ಕೊಟ್ಟ ಜಿಯೋಜಿಯೋಫೋನ್‌ ಬಳಕೆದಾರರಿಗೆ ಬಂಪರ್ ಆಫರ್ ಕೊಟ್ಟ ಜಿಯೋ

ಪ್ರತಿ ಜಿಯೋ ಬಳಕೆದಾರರು ತಮ್ಮ ರೀಚಾರ್ಜ್‌ಗಳು, ಸೇವಾ ಪ್ರಶ್ನೆಗಳು ಮತ್ತು ಮೈಜಿಯೊ ಅಪ್ಲಿಕೇಶನ್ ಮತ್ತು ಜಿಯೋ.ಕಾಮ್ ವೆಬ್‌ಸೈಟ್ ಮೂಲಕ ಪಡೆದುಕೊಳ್ಳಬಹುದಾಗಿದೆ. ಇದು 24 ‍‍X 7 ಕಾರ್ಯನಿರ್ವಹಿಸಲಿದ್ದು, ಬಳಕೆದಾರರ ಸೇವೆಗೆ ಸದಾ ಸಿದ್ದವಾಗಿರಲಿದೆ.

ಏಪ್ರಿಲ್ 20 ರಿಂದ ಬಹುಪಾಲು ರೀಚಾರ್ಜ್ ಮಳಿಗೆಗಳು ಲಭ್ಯವಿರುತ್ತವೆ, ಅಲ್ಲಿಯ ವರೆಗೆ ಥರ್ಡ್ ಪಾರ್ಟಿ ಆಪ್‌ಗಳಿಂದ ರಿಚಾರ್ಜ್ ಮಾಡಿಕೊಳ್ಳಬಹುದಾಗಿದೆ. ವಾಲೆಟ್‌ಗಳು ಮತ್ತು ಡಿಜಿಟಲ್ ಪಾಲುದಾರರಾದ ಫೋನ್‌ಪೇ, ಪೇಟಿಎಂ, ಜಿಪೇ, ಅಮೆಜಾನ್ ಪೇ, ಮೊಬಿಕ್ವಿಕ್, ಫ್ರೀಚಾರ್ಜ್ ಮತ್ತು ಇನ್ನೂ ಅನೇಕ ಕಡೆಗಳಲ್ಲಿ ಜಿಯೋ ಬಳಕೆದಾರರು ರೀಚಾರ್ಜ್ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.

ಹೊಸ ಜಿಯೋ ರೀಚಾರ್ಜ್

ಹೊಸ ಜಿಯೋ ರೀಚಾರ್ಜ್

ಹೊಸ ಜಿಯೋ ರೀಚಾರ್ಜ್: ಎಟಿಎಂನಿಂದ ನೇರವಾಗಿ ರೀಚಾರ್ಜ್ ಮಾಡಿಕೊಳ್ಳುವ ಅವಕಾಶವು ಇದೆ, ಇದಲ್ಲದೆ ಆಕ್ಸಿಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನೊಂದಿಗೆ ಎಸ್‌ಎಂಎಸ್ ಬಳಸಿ ಜಿಯೋ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಜಿಯೋ ಚಿಲ್ಲರೆ ವ್ಯಾಪಾರಿಗಳಿಂದ ಜಿಯೋ ಅಸಿಸ್ಟೆಡ್ ರೀಚಾರ್ಜ್ ಅವಕಾಶವು ಲಭ್ಯವಿದೆ.

ಜಿಯೋ ಅಸೋಸಿಯೇಟ್ ಪ್ರೋಗ್ರಾಂ

ಜಿಯೋ ಅಸೋಸಿಯೇಟ್ ಪ್ರೋಗ್ರಾಂ

ಹೊಸದಾಗಿ ಜಿಯೋ ಅಸೋಸಿಯೇಟ್ ಪ್ರೋಗ್ರಾಂ ಅನ್ನು ಪರಿಚಯಿಸಿದೆ, ಇದರ ಮೂಲಕ ಯಾವುದೇ ಬಳಕೆದಾರರು ತಮ್ಮ ಸ್ನೇಹಿತರು, ಕುಟುಂಬ ಅಥವಾ ಪರಿಚಯಸ್ಥರಿಗೆ ರೀಚಾರ್ಜ್ ಮಾಡಬಹುದು ಮತ್ತು ಹಾಗೆ ಪ್ರತಿ ಬಾರಿ ರೀಚಾರ್ಜ್ ಮಾಡುವಾಗ ಹಣವನ್ನು ಗಳಿಸಬಹುದು. ಒಮ್ಮೆ ರೀಚಾರ್ಜ್ ಮಾಡಿದರೆ 4% ಕಮೀಷನ್ ಸಹ ಪಡೆಯಬಹುದಾಗಿದೆ.

ಜಿಯೋ ಪೋಸ್ ಅಪ್ಲಿಕೇಷನ್ ಬಳಸಿ

ಜಿಯೋ ಪೋಸ್ ಅಪ್ಲಿಕೇಷನ್ ಬಳಸಿ

ರೀಚಾರ್ಜ್ ಮಾಡುವ ಡಿಜಿಟಲ್ ವಿಧಾನಗಳ ಬಗ್ಗೆ ಚೆನ್ನಾಗಿ ತಿಳಿದಿಲ್ಲದ ಮತ್ತು ಈ ಸಮಯದಲ್ಲಿ ಹೊರಗೆ ಹೋಗಲು ಸಾಧ್ಯವಾಗದ ಇತರರಿಗೆ ಸಹಾಯ ಮಾಡಲು ರೀಚಾರ್ಜ್ ಮಾಡಲು ಬಳಕೆದಾರರನ್ನು ಉತ್ತೇಜಿಸುವ ಕಾರ್ಯಕ್ರಮ ಇದಾಗಿದೆ.

ರಿಲಯನ್ಸ್ ಜಿಯೋ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಜಿಯೋ ಪೋಸ್ (JioPOS) ಲೈಟ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ, ಗ್ರಾಹಕರು ಅದನ್ನು ಡೌನ್‌ಲೋಡ್ ಮಾಡಿಕೊಂಡು ನೆಟ್‌ವರ್ಕ್‌ನಲ್ಲಿರುವ ಯಾವುದೇ ಚಂದಾದಾರರ ಫೋನ್ ಅನ್ನು ರೀಚಾರ್ಜ್ ಮಾಡಲು ಪ್ರಾರಂಭಿಸಬಹುದು.

ಕನಿಷ್ಠ ರೂ. 200 ರೀಚಾರ್ಜ್ ಮಾಡಿಸಬೇಕು

ಕನಿಷ್ಠ ರೂ. 200 ರೀಚಾರ್ಜ್ ಮಾಡಿಸಬೇಕು

ಈ ಮೊದಲು JioPOS ಬಳಕೆ ಮಾಡಲು ರೂ.1,000 ಸೇರ್ಪಡೆ ಶುಲ್ಕ ನೀಡಬೇಕಾಗಿತ್ತು, ಆದರೆ ಕಂಪನಿಯು ಅದನ್ನು ಪರಿಚಯಾತ್ಮಕ ಕೊಡುಗೆಯಾಗಿ ಬಿಟ್ಟುಕೊಟ್ಟಿದೆ. ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಜಿಯೋ ಗ್ರಾಹಕರು ಮೊದಲ ಬಾರಿಗೆ ಕನಿಷ್ಠ ರೂ. 1,000 ಗಳನ್ನು ಲೋಡ್ ಮಾಡಬೇಕಾಗುತ್ತದೆ ಮತ್ತು ನಂತರ ಅವರು ಕನಿಷ್ಠ ರೂ. 200 ರೀಚಾರ್ಜ್ ಮಾಡಿಸಬೇಕಾಗುತ್ತದೆ.

ಈ ಜಿಯೋ ಪೋಸ್ (JioPOS) ಆಪ್ ಅನ್ನು ಈಗಾಗಲೇ ಐದು ಲಕ್ಷ ಜನರು ಡೌನ್‌ ಲೋಡ್ ಮಾಡಿದ್ದಾರೆ. ಅಲ್ಲದೇ ಈ ಲಾಕ್ ಡೌನ್ ಸಂದರ್ಭದಲ್ಲಿ ಜಿಯೋ ಬಳಕೆದಾರರಿಗೆ ಸುಲಭ ರೀತಿಯಲ್ಲಿ ರೀಚಾರ್ಜ್ ಮಾಡಿಕೊಳ್ಳಲು ಇದೊಂದು ಉತ್ತಮ ಆಯ್ಕೆಯಾಗಲಿದೆ.

English summary
Jio has launched a unique ‘Jio Associate’ programme enabling customers and small businesses to make recharge on Jio mobile numbers of friends and others easily, while simultaneously earning 4% commission on the amount.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X