ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಜಿಟಲ್ ಪಾವತಿಗೆ ಶುಲ್ಕ ವಿಧಿಸಲು ಇದು ಸಮಯವಲ್ಲ: ನಿರ್ಮಲಾ ಸೀತಾರಾಮನ್

|
Google Oneindia Kannada News

ನವದೆಹಲಿ, ಆಗಸ್ಟ್‌ 27: ಯುಪಿಐ ಆಧಾರಿತ ಡಿಜಿಟಲ್‌ ಪಾವತಿಗಳಿಗೆ ಶುಲ್ಕ ವಿಧಿಸಲಾಗುತ್ತದೆ ಎಂಬ ವರದಿ ಸಂಬಂಧ ಸ್ಪಷ್ಟನೆ ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್‌ ಅವರು ಡಿಜಿಟಲ್ ಪಾವತಿಗಳಿಗೆ ಶುಲ್ಕ ವಿಧಿಸಲು ಇದು ಸಮಯವಲ್ಲ ಎಂದು ಹೇಳಿದ್ದಾರೆ.

ಇನ್ನೂ ಮುಂದೆ ಯುಪಿಐ ಆಧಾರಿತ ಪಾವತಿಗಳಿಗೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಶುಲ್ಕ ವಿಧಿಸುತ್ತದೆ ಎಂಬ ವರದಿ ಬೆನ್ನಲ್ಲೇ ಕೇಂದ್ರ ಹಣಕಾಸು ಸಚಿವಾಲಯ ಸ್ಟಷ್ಟನೆ ನೀಡಿ ಡಿಜಿಟಲ್‌ ಪಾವತಿಗಳಿಗೆ ಶುಲ್ಕ ವಿಧಿಸುವ ಚಿಂತನೆ ಸದ್ಯಕ್ಕೆ ಇಲ್ಲ ಎಂದು ಹೇಳಿತ್ತು. ಇದರ ಬೆನ್ನಲ್ಲೇ ಈಗ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್‌ ಅವರು ಯುಪಿಐ ಪಾವತಿ ಶುಲ್ಕ ವಿಧಿಸುವ ಬಗ್ಗೆ ಮಾತನಾಡಿದ್ದಾರೆ.

Just in: ಪೇಟಿಎಂ ಬಳಕೆಗೆ ಸಮಸ್ಯೆ, ಸರಿಪಡಿಸುತ್ತೇವೆ ಎಂದ ಕಂಪನಿJust in: ಪೇಟಿಎಂ ಬಳಕೆಗೆ ಸಮಸ್ಯೆ, ಸರಿಪಡಿಸುತ್ತೇವೆ ಎಂದ ಕಂಪನಿ

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಿರ್ಮಲ ಸೀತಾರಾಮನ್, "ನಾವು ಡಿಜಿಟಲ್ ಪಾವತಿಯನ್ನು ಸಾರ್ವಜನಿಕ ಒಳಿತಿಗಾಗಿ ಎಂದು ನೋಡುತ್ತೇವೆ. ಜನರು ಅದನ್ನು ಮುಕ್ತವಾಗಿ ಬಳಸಲು ಅವಕಾಶವಿದೆ. ಇದರಿಂದ ಭಾರತೀಯ ಆರ್ಥಿಕತೆಯ ಡಿಜಿಟಲೀಕರಣವು ಇನ್ನಷ್ಟು ಹೆಚ್ಚಾಗುತ್ತದೆ. ಅಲ್ಲದೆ, ಡಿಜಿಟಲೀಕರಣದ ಮೂಲಕ ನಾವು ಪಾರದರ್ಶಕತೆಯ ಮಟ್ಟವನ್ನು ಸಾಧಿಸುತ್ತೇವೆ, ಇದು ನಮಗೆ ತುಂಬಾ ಅಗತ್ಯವಿದೆ," ಎಂದು ಹೇಳಿದರು.

ಆದ್ದರಿಂದ ಯುಪಿಐ ಆಧಾರಿತ ಪಾವತಿಗಳಿಗೆ ಶುಲ್ಕ ವಿಧಿಸಲು ಇದು ಸರಿಯಾದ ಸಮಯವಲ್ಲ ಎಂದು ನಾವು ಇನ್ನೂ ಭಾವಿಸುತ್ತೇವೆ. ಹಾಗಾಗಿ ಮುಕ್ತ ಡಿಜಿಟಲ್ ವಹಿವಾಟುಗಳು, ಡಿಜಿಟಲೀಕರಣ ಮತ್ತು ಹಣಕಾಸಿನ ವಹಿವಾಟನ್ನು ಸಕ್ರಿಯಗೊಳಿಸುವ ವೇದಿಕೆಗಳತ್ತ ನಾವು ಹೆಚ್ಚು ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದೇವೆ. ಆರ್‌ಬಿಐ ಶಿಫಾರಸು ಮಾಡುವ ಕೆಲಸ ಮಾಡುತ್ತದೆ. ಆದರೆ ಈಗ ಡಿಜಿಟಲ್‌ ಪಾವತಿಗೆ ಶುಲ್ಕ ವಿಧಿಸುವ ಪ್ರಕ್ರಿಯೆ ಈಗ ಸದ್ಯಕ್ಕಿಲ್ಲ ಎಂದು ಅವರು ಹೇಳಿದರು.

ನಿರ್ಮಲ ಸೀತಾರಾಮನ್ ಅವರ ತಮ್ಮ ಹೇಳಿಕೆಯನ್ನು ಪಾವತಿ ವ್ಯವಸ್ಥೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಸ್ತಾಪಿಸಲಾದ ವಿವಿಧ ಬದಲಾವಣೆಗಳ ಬಗ್ಗೆ ಸಾರ್ವಜನಿಕರಿಂದ ಪ್ರತಿಕ್ರಿಯೆಯನ್ನು ಕೇಳುವ ಹಿನ್ನೆಲೆಯಲ್ಲಿ ಹೇಳಿದ್ದಾರೆ. ಹೀಗಾಗಿ ಇದರಲ್ಲಿ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಮೂಲಕ ಮಾಡಿದ ವಹಿವಾಟುಗಳ ಮೇಲೆ ಶ್ರೇಣೀಕೃತ ಶುಲ್ಕಗಳನ್ನು ವಿಧಿಸುವ ಸಾಧ್ಯತೆಯೂ ಬಗ್ಗೆ ಅವರು ಸ್ಟಷ್ಟನೆ ನೀಡಿದ್ದಾರೆ.

ಇನ್ಮುಂದೆ ಈ ವಹಿವಾಟು ನಡೆಸಲು ಒಟಿಪಿ ಅಗತ್ಯವಿಲ್ಲ: ಆರ್‌ಬಿಐ ಹೊಸ ನಿಯಮಇನ್ಮುಂದೆ ಈ ವಹಿವಾಟು ನಡೆಸಲು ಒಟಿಪಿ ಅಗತ್ಯವಿಲ್ಲ: ಆರ್‌ಬಿಐ ಹೊಸ ನಿಯಮ

ಆದಾಗ್ಯೂ, ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ಸೇವೆಗಳಿಗೆ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ ಎಂದು ಭಾರತ ಸರ್ಕಾರ ಕಳೆದ ವಾರ ಘೋಷಿಸಿತ್ತು. ಡಿಸೆಂಬರ್ 08, 2021ರ ಅಭಿವೃದ್ಧಿ ಮತ್ತು ನಿಯಂತ್ರಕ ನೀತಿಗಳ ಹೇಳಿಕೆಯಲ್ಲಿ ಘೋಷಿಸಿದಂತೆ, ಭಾರತೀಯ ರಿಸರ್ವ್ ಬ್ಯಾಂಕ್ ಸಾರ್ವಜನಿಕ ಪ್ರತಿಕ್ರಿಯೆಗಾಗಿ "ಪಾವತಿ ವ್ಯವಸ್ಥೆಗಳಲ್ಲಿನ ಶುಲ್ಕಗಳು" ಕುರಿತು ಚರ್ಚಾ ಪ್ರಬಂಧವನ್ನು ಬಿಡುಗಡೆ ಮಾಡಿತ್ತು ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

 ಪಾರದರ್ಶಕವಲ್ಲದ ಶುಲ್ಕಗಳ ಬಗ್ಗೆ ದೂರು

ಪಾರದರ್ಶಕವಲ್ಲದ ಶುಲ್ಕಗಳ ಬಗ್ಗೆ ದೂರು

ಪಾವತಿ ವ್ಯವಸ್ಥೆಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ ನಿರ್ಧಾರಗಳ ಉದ್ದೇಶವು ವ್ಯವಸ್ಥಿತ, ಕಾರ್ಯವಿಧಾನ ಅಥವಾ ಆದಾಯ ಸಂಬಂಧಿತ ಸಮಸ್ಯೆಗಳಿಂದ ಉಂಟಾಗಬಹುದಾದ ಘರ್ಷಣೆಗಳನ್ನು ಸರಾಗಗೊಳಿಸುವುದು ಎಂಬುದಾಗಿದೆ. ಪಾವತಿಗಳ ವಹಿವಾಟು ಪ್ರಕ್ರಿಯೆಯಲ್ಲಿ ಅನೇಕ ಮಧ್ಯವರ್ತಿ ಕಂಪೆನಿಗಳು ಅಸ್ತಿತ್ವದಲ್ಲಿದ್ದರೂ ಗ್ರಾಹಕರ ದೂರುಗಳು ಸಾಮಾನ್ಯವಾಗಿ ಹೆಚ್ಚಿನ ಮತ್ತು ಪಾರದರ್ಶಕವಲ್ಲದ ಶುಲ್ಕಗಳ ಬಗ್ಗೆ ಕೇಳಿ ಬಂದಿವೆ.

 ಪಾವತಿ ಸೇವೆಗಳಿಗೆ ಶುಲ್ಕಗಳು ಸಮಂಜಸವಾಗಿರಬೇಕು

ಪಾವತಿ ಸೇವೆಗಳಿಗೆ ಶುಲ್ಕಗಳು ಸಮಂಜಸವಾಗಿರಬೇಕು

ಸಚಿವೆ ನಿರ್ಮಲ ಅವರು ಡಿಜಿಟಲ್‌ ಪಾವತಿಗಳಿಗೆ ಶುಲ್ಕ ವಿಧಿಸಲು ಇದು ಸಮಯವಲ್ಲ ಎಂದಿದ್ದಾರೆ ಹೊರತು, ವಿಧಿಸಲಾಗವುದೇ ಇಲ್ಲ ಎಂದು ಹೇಳಿಲ್ಲ. ಹಾಗಾಗಿ ಪಾವತಿ ಸೇವೆಗಳಿಗೆ ಶುಲ್ಕಗಳು ಸಮಂಜಸವಾಗಿರಬೇಕು. ಬಳಕೆದಾರರಿಗೆ ಸ್ಪರ್ಧಾತ್ಮಕವಾಗಿ ನಿರ್ಧರಿಸಬೇಕು ಮತ್ತು ಮಧ್ಯವರ್ತಿಗಳಿಗೆ ಅತ್ಯುತ್ತಮವಾದ ಆದಾಯವನ್ನು ಒದಗಿಸಬೇಕು. ಇಲ್ಲಿ ವಿವಿಧ ಆಯಾಮಗಳನ್ನು ಎತ್ತಿ ತೋರಿಸುವ ಮಾಡುವ ಮೂಲಕ ಹಾಗೂ ಮಧ್ಯಸ್ಥಗಾರರ ಪ್ರತಿಕ್ರಿಯೆಯನ್ನು ಪಡೆಯುವ ಮೂಲಕ ಪಾವತಿ ವ್ಯವಸ್ಥೆಗಳಲ್ಲಿ ವಿಧಿಸಲಾದ ವಿವಿಧ ಶುಲ್ಕಗಳನ್ನು ಪರಿಶೀಲಿಸಲು ಇದು ಉಪಯುಕ್ತವೆಂದು ಪರಿಗಣಿಸಲಾಗಿದೆ.

 NPCI ಅಡಿಯಲ್ಲಿ RuPay, UPI ನಿರ್ವಹಣೆ

NPCI ಅಡಿಯಲ್ಲಿ RuPay, UPI ನಿರ್ವಹಣೆ

ಭಾರತದಲ್ಲಿ RTGS ಮತ್ತು NEFT ಪಾವತಿ ವ್ಯವಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕ್ ಅಡಿಯಲ್ಲಿ ನಡೆಯುತ್ತವೆ ಹಾಗೂ ನಿರ್ವಹಿಸಲ್ಪಡುತ್ತದೆ. ಹಾಗೇಯೆ IMPS, RuPay, UPI, ಇತ್ಯಾದಿ ವ್ಯವಸ್ಥೆಗಳು ಬ್ಯಾಂಕ್‌ಗಳಿಂದ ಪ್ರಚಾರ ಮಾಡಲ್ಪಟ್ಟ ಲಾಭರಹಿತ ಘಟಕವಾದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಅಡಿಯಲ್ಲಿ ಕಾರ್ಯ ಮಾಡಿ ನಿರ್ವಹಿಸಲ್ಪಡುತ್ತದೆ.

 10.62 ಟ್ರಿಲಿಯನ್ ರುಪಾಯಿ ವಹಿವಾಟು

10.62 ಟ್ರಿಲಿಯನ್ ರುಪಾಯಿ ವಹಿವಾಟು

ನಾವು ಬಳಸುವ ಕಾರ್ಡ್ ನೆಟ್‌ವರ್ಕ್‌ಗಳು, ಪಿಪಿಐ ವಿತರಕರು ಮುಂತಾದ ಇತರ ಘಟಕಗಳು ಲಾಭವನ್ನು ಹೆಚ್ಚಿಸುವ ಖಾಸಗಿ ಘಟಕಗಳಾಗಿವೆ. ಗಮನಾರ್ಹವಾಗಿ ಜುಲೈನಲ್ಲಿ ಡಿಜಿಟಲ್ ವಹಿವಾಟಿನ ಸಂಖ್ಯೆಯು 2016 ರಿಂದ ಅತ್ಯಧಿಕವಾಗಿದೆ. ಯುಪಿಐ 6.28 ಬಿಲಿಯನ್ ವಹಿವಾಟುಗಳನ್ನು ಮಾಡಿದ್ದು, ಇದರ ಮೊತ್ತ 10.62 ಟ್ರಿಲಿಯನ್ ರುಪಾಯಿಗಳಾಗಿವೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಹೇಳಿದೆ.

English summary
Union Finance Minister Nirmala Sitharaman has clarified the report that charges will be levied for UPI-based digital payments, saying that this is not the time to charge for digital payments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X