ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್​ಲೈನ್ ನಲ್ಲಿ ಆಧಾರ್ ಮೂಲಕ ಇ-ಪ್ಯಾನ್ ಕಾರ್ಡ್ ಪಡೆಯುವುದು ಹೇಗೆ?

|
Google Oneindia Kannada News

ನವದೆಹಲಿ, ಫೆಬ್ರವರಿ 06: ವಿವಿಧ ಬ್ಯಾಂಕ್ ಆಧಾರಿತ ವ್ಯವಹಾರಗಳಿಗೆ ಬಳಕೆ ಮಾಡುವ ಶಾಶ್ವತ ಖಾತೆ (PAN) ಕಾರ್ಡನ್ನು ಆನ್​ಲೈನ್ ಮೂಲಕ ವಿತರಿಸುವ ಯೋಜನೆಯನ್ನು ಆರಂಭಿಸಿದೆ.

ಆಧಾರ್ ಕಾರ್ಡ್ ದಾಖಲೆ ಮೇಲೆ ತಕ್ಷಣ ಇ-ಪ್ಯಾನ್ ಕಾರ್ಡನ್ನು ಆನ್​ಲೈನ್ ಮೂಲಕ ಪಡೆದುಕೊಳ್ಳಬಹುದು ಎಂದು ಕಂದಾಯ ಸಚಿವಾಲಯದ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಹೇಳಿದ್ದಾರೆ.

ಆಧಾರ್ ಮೂಲಕ ಪಾನ್ ಕಾರ್ಡ್ ವಿತರಣೆ: ಕೇಂದ್ರದ ಹೊಸ ಯೋಜನೆಆಧಾರ್ ಮೂಲಕ ಪಾನ್ ಕಾರ್ಡ್ ವಿತರಣೆ: ಕೇಂದ್ರದ ಹೊಸ ಯೋಜನೆ

ಇ-ಪ್ಯಾನ್ ಕಾರ್ಡ್ ಪಡೆಯುವ ಯೋಜನೆಯನ್ನು 2020-21ರ ಬಜೆಟ್​ನಲ್ಲಿ ಘೋಷಿಸಲಾಗಿದೆ. ಇ ಪ್ಯಾನ್ ಪಡೆಯಲು ಅರ್ಜಿ ಭರ್ತಿ ಮಾಡಿ ಸಲ್ಲಿಸುವ ಅಗತ್ಯ ಇಲ್ಲ. ಆಧಾರ್ ಕಾರ್ಡ್ ಮಾಹಿತಿಯನ್ನು ಒದಗಿಸಿ ಇ-ಪ್ಯಾನ್ ಕಾರ್ಡ್ ಪಡೆಯುವ ಯೋಜನೆ ಫೆಬ್ರವರಿ ತಿಂಗಳಿನಿಂದ ಆರಂಭವಾಗಿದೆ.

Now get instant e-PAN based on Aadhaar from this month: Here is how

ಇ ಪ್ಯಾನ್ ಗಳಿಸುವುದು ಹೇಗೆ?

* ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್​ಸೈಟ್​ನಲ್ಲಿಆಧಾರ್ ಸಂಖ್ಯೆ ನಮೂದಿಸಿ.
* ಆಧಾರ್​ಗೆ ನೀಡಿರುವ ಮೊಬೈಲ್ ಸಂಖ್ಯೆಗೆ ಒಮ್ಮೆ ಬಳಸುವ ಪಾಸ್​ವರ್ಡ್ (ಒಟಿಪಿ) ಬರುತ್ತದೆ.
* ಆಧಾರ್ ದಾಖಲೆ ಪರಿಶೀಲನೆ ಮಾಡಲು ಒಟಿಪಿ ಬಳಸಲಾಗುತ್ತದೆ. ಆಧಾರ್ ಪರಿಶೀಲನೆ ನಂತರ ಇ-ಪ್ಯಾನ್ ತಕ್ಷಣವೇ ಸಿಗಲಿದೆ.

* ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಆದಾಯ ತೆರಿಗೆ ಇಲಾಖೆಯು ಕಾರ್ಡ್ ಗಳನ್ನು ಮನೆ ವಿಳಾಸಕ್ಕೆ ಕಳಿಸುವ ಅಗತ್ಯವಿಲ್ಲ.

ಡಿ.31 ರೊಳಗೆ PAN ಜೊತೆ ಆಧಾರ್ ಕಾರ್ಡ್ ಜೋಡಣೆ ಹೇಗೆ? ಏಕೆ?ಡಿ.31 ರೊಳಗೆ PAN ಜೊತೆ ಆಧಾರ್ ಕಾರ್ಡ್ ಜೋಡಣೆ ಹೇಗೆ? ಏಕೆ?

ಸುಮಾರು 30.75 ಕೋಟಿ ಪ್ಯಾನ್ ಕಾರ್ಡ್ ಜೊತೆಗೆ ಆಧಾರ್ ಲಿಂಕ್ ಮಾಡಲಾಗಿದೆ. ಜನವರಿ 27, 2020ರ ಎಣಿಕೆಯಂತೆ 17.58 ಕೋಟಿ ಪ್ಯಾನ್ ಇನ್ನೂ ಆಧಾರ್ ಜೊತೆ ಲಿಂಕ್ ಆಗಿಲ್ಲ ಎಂದು ಸರ್ಕಾರ ಮಾಹಿತಿ ನೀಡಿದೆ. ಆಧಾರ್ ಹಾಗೂ ಪ್ಯಾನ್ ಲಿಂಕ್ ಮಾಡಲು ಅಮರ್ಚ್ 31, 2020 ಕೊನೆ ದಿನಾಂಕವಾಗಿದೆ.

READ IN ENGLISH

English summary
Permanent Account Number (PAN) is important for various purposes like filing the income tax returns, opening bank account, conducting financial transactions and so on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X