ಬೆಂಗಳೂರು, ಮಾರ್ಚ್ 30: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ ಬಿ) ಗೆ ಸಾವಿರಾರು ಕೋಟಿ ರು ವಂಚಿಸಿದ ಆರೋಪ ಹೊತ್ತಿರುವ ಗೀತಾಂಜಲಿ ಜೆಮ್ಸ್ ನ ಮಾಲೀಕ ಮೆಹುಲ್ ಚೋಕ್ಸಿ ಅವರು ಕರ್ನಾಟಕ ಬ್ಯಾಂಕಿಗೂ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಗೆ ಕರ್ನಾಟಕ ಬ್ಯಾಂಕಿಗೆ ಸಲ್ಲಿಸಿರುವ ವಿವರದಂತೆ, ಸರಿ ಸುಮಾರು 86.47 ಕೋಟಿ ರು ವಂಚನೆ ಕಂಡು ಬಂದಿದ್ದು, ಈ ಬಗ್ಗೆ ಆರ್ ಬಿಐಗೆ ಮಾಹಿತಿ ನೀಡಲಾಗಿದೆ. ಹೂಡಿಕೆ ಮೊತ್ತವನ್ನು ಬೇರೆಡೆಗೆ ವರ್ಗಾವಣೆ ಮಾಡುವಲ್ಲಿ ಅವ್ಯವಹಾರ ನಡೆದಿರುವುದು ಪತ್ತೆಯಾಗಿದೆ.
ಆದರೆ, ಮೆಹುಲ್ ಚೋಕ್ಸಿ ಅವರ ಕಂಪನಿ ನಡೆಸಿದ ವ್ಯವಹಾರದ ಬಗ್ಗೆ ಒಡಂಬಡಿಕೆ ಪತ್ರವಾಗಲಿ, ಇನ್ನಿತರ ಪೂರಕ ದಾಖಲೆಗಳಾಗಲಿ ಇಲ್ಲ ಎಂದು ಬ್ಯಾಂಕ್ ಹೇಳಿದೆ.
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರ.subscribe to Kannada Oneindia.
ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!