ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಶ್ ಆನ್ ಡೆಲಿವರಿ - ಈಗ ರೈಲ್ವೆ ಟಿಕೆಟ್‌ಗೂ ಬಂತು

By Kiran B Hegde
|
Google Oneindia Kannada News

ನವದೆಹಲಿ, ಫೆ. 3: ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡುವುದು ಸುಲಭವಾದರೂ ಹಲವು ಆತಂಕಗಳಿವೆ. ಆನ್‌ಲೈನ್ ಮನಿ ಫ್ರಾಡ್ ಹೆಚ್ಚುತ್ತಿರುವ ಕಾರಣ ನೆಟ್‌ ಬ್ಯಾಂಕಿಂಗ್, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಲು ಹಲವರು ಹೆದರುತ್ತಾರೆ. ಈ ಸಮಸ್ಯೆಗಳಿಗೆ ರೈಲ್ವೆ ಇಲಾಖೆ ಪರಿಹಾರ ಹುಡುಕಿದೆ.

ಫ್ಲಿಪ್‌ಕಾರ್ಡ್, ಅಮೇಜಾನ್‌ನಂತಹ ಆನ್‌ಲೈನ್ ಶಾಪ್‌ನಲ್ಲಿ ಅಗತ್ಯ ವಸ್ತು ಬುಕ್ ಮಾಡಿ ಡೆಲಿವರಿ ಸಮಯದಲ್ಲಿ ಹಣ ನೀಡುವ ವ್ಯವಸ್ಥೆ ಇದೆ. ಇದೇ ಸೌಲಭ್ಯವನ್ನು ರೈಲ್ವೆ ಇಲಾಖೆ ಜನರಿಗೆ ಒದಗಿಸಲು ಮುಂದಾಗಿದೆ. [ವೈಷ್ಣೋದೇವಿ ದೇಗುಲಕ್ಕೆ ಒಂದೇ ರೈಲು]

ಗ್ರಾಹಕರು ಮಾಡಬೇಕಾದ್ದೇನು? : ರೈಲ್ವೆ ಟಿಕೆಟ್ ಬಯಸುವ ಗ್ರಾಹಕರು ಆನ್‌ಲೈನ್‌ನಲ್ಲಿ ಬುಕ್ ಮಾಡಬೇಕು. ನಂತರ ಟಿಕೆಟ್ ಕೈಗೆ ಸಿಕ್ಕ ಮೇಲೆ ಹಣ ನೀಡಬಹುದು. ಪ್ರಾಥಮಿಕ ಹಂತದಲ್ಲಿ ಈ ಸೌಲಭ್ಯವನ್ನು 200ಕ್ಕೂ ಹೆಚ್ಚು ನಗರಗಳಲ್ಲಿ ಜಾರಿಗೆ ತರಲು ನಿರ್ಧರಿಸಲಾಗಿದೆ. [4 ರೈಲುಗಳ ವೇಳಾಪಟ್ಟಿ]

train

ಗ್ರಾಹಕರು ರೈಲ್ವೆ ಟಿಕೆಟನ್ನು ಪ್ರಯಾಣದ ದಿನಾಂಕಕ್ಕಿಂತ ಐದು ದಿನಗಳ ಮೊದಲು ಬುಕ್ ಮಾಡಬಹುದು. [ರೈಲ್ವೆ ಮಾಹಿತಿ ಪಡೆಯಲು ಸಹಾಯವಾಣಿ]

ಸ್ಲೀಪರ್ ಕೋಚ್‌ನಲ್ಲಿ ಪ್ರಯಾಣಿಸುವವರು 40 ರು.ಗಳನ್ನು ಹಾಗೂ ಎಸಿ ಕೋಚ್‌ನಲ್ಲಿ ಪ್ರಯಾಣಿಸುವವರು 60 ರು.ಗಳನ್ನು ಹೆಚ್ಚುವರಿಯಾಗಿ ಡೆಲಿವರಿ ಶುಲ್ಕವಾಗಿ ನೀಡಬೇಕು.

ಪ್ರಸ್ತುತ Anduril Technologies ಸಂಸ್ಥೆಗೆ ಅವರ ವೆಬ್‌ಸೈಟ್ ಮೂಲಕ ಹಾಗೂ BookMyTrain.com ಆಪ್ ಮೂಲಕ ಕಾಯ್ದಿರಿಸುವ ಟಿಕೆಟ್‌ಗಳಿಗೆ ಡೆಲಿವರಿ ಸಮಯದಲ್ಲಿ ನಗದು ಪಾವತಿಸಲು ಅನುಮತಿ ನೀಡಲಾಗಿದೆ. [ಮೊದಲ ಹೈಡ್ರೋಜನ್ ರೈಲು ಮೋದಿ ಕ್ಷೇತ್ರದಲ್ಲಿ]

"ರೈಲ್ವೆ ನಿಲ್ದಾಣಗಳಲ್ಲಿ ಕಂಡುಬರುತ್ತಿರುವ ದೊಡ್ಡ ಸಾಲುಗಳನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಯೋರ್ವರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

English summary
Now you can order train ticket to be sent home on "cash-on-delivery" mode. Rs 40 for sleeper class and Rs 60 for an AC class will be charged for delivery of each ticket
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X