ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೆಂಬರ್‌ನಲ್ಲಿ ಪ್ರಮುಖ ಕಂಪನಿಗಳ ಕಾರುಗಳ ಮಾರಾಟದಲ್ಲಿ ಹೆಚ್ಚಳ: ಟಾಟಾ ಮೋಟಾರ್ಸ್ ಶೇ. 26ರಷ್ಟು ಏರಿಕೆ

|
Google Oneindia Kannada News

ನವದೆಹಲಿ, ಡಿಸೆಂಬರ್ 01: ನವೆಂಬರ್ ತಿಂಗಳಿನಲ್ಲಿ ಮಾರುತಿ ಸೇರಿದಂತೆ ಇತರೇ ಕಾರು ಕಂಪನಿಗಳು ಮಾರಾಟದಲ್ಲಿ ಗಮನಾರ್ಹ ಏರಿಕೆ ಕಂಡಿದೆ. ಮಾರುತಿ, ಮಹೀಂದ್ರಾ ಮತ್ತು ಇತರ ಹಲವು ಕಂಪನಿಗಳ ಮಾರಾಟವು 2019 ರ ನವೆಂಬರ್‌ಗೆ ಹೋಲಿಸಿದರೆ 2020ರ ನವೆಂಬರ್‌ನಲ್ಲಿ ಹೆಚ್ಚಳವನ್ನು ದಾಖಲಿಸಿದೆ.

ಮೊದಲನೆಯದಾಗಿ, ದೇಶದ ಅತಿದೊಡ್ಡ ಕಾರು ತಯಾರಕರಾದ ಮಾರುತಿ ಕಳೆದ ತಿಂಗಳು ತನ್ನ ಮಾರಾಟವನ್ನು ಶೇಕಡಾ 1.7 ರಷ್ಟು ಹೆಚ್ಚಿಸಿದೆ. ಮಾರುತಿ ಹಿಂದಿನ ತಿಂಗಳಲ್ಲಿ 1,53,223 ವಾಹನಗಳನ್ನು ಮಾರಾಟ ಮಾಡಿದ್ದು, 2019 ರ ನವೆಂಬರ್‌ನಲ್ಲಿ 150,630 ಮಾರಾಟವಾಗಿದೆ.

 ಟೊಯೊಟಾ ಇನೋವಾ ಕ್ರಿಸ್ಟಾ 2020 ಬಿಡುಗಡೆ: ವಿನೂತನ ಫೀಚರ್ಸ್ ಟೊಯೊಟಾ ಇನೋವಾ ಕ್ರಿಸ್ಟಾ 2020 ಬಿಡುಗಡೆ: ವಿನೂತನ ಫೀಚರ್ಸ್

ಮಾರುತಿ ದೇಶೀಯ ಮಾರಾಟ 1.44 ಲಕ್ಷಕ್ಕೆ ಏರಿಕೆ

ಮಾರುತಿ ದೇಶೀಯ ಮಾರಾಟ 1.44 ಲಕ್ಷಕ್ಕೆ ಏರಿಕೆ

ಆದಾಗ್ಯೂ, ಹಬ್ಬದ ಋತುವಿನ ಪ್ರಕಾರ, ಈ ಸಂಖ್ಯೆಗಳು ಅಂದಾಜಿನ ಪ್ರಕಾರ ಇರುವುದಿಲ್ಲ. ಇದರ ದೇಶೀಯ ಮಾರಾಟವು 1.43 ಲಕ್ಷ ಯುನಿಟ್‌ಗಳಿಂದ 1.44 ಲಕ್ಷ ಯುನಿಟ್‌ಗಳಷ್ಟಿತ್ತು. ಇದರ ನಡುವೆ ರಫ್ತು ಶೇಕಡಾ 29.7 ರಷ್ಟು ಏರಿಕೆಯಾಗಿದೆ. ಆದರೆ ದೇಶೀಯ ಪ್ರಯಾಣಿಕರ ಕಾರು ಮಾರಾಟವು ಶೇ. 2.4ರಷ್ಟು ಇಳಿದು 1.35 ಲಕ್ಷಕ್ಕೆ ತಲುಪಿದೆ.

ಮಹೀಂದ್ರಾ ಕಾರುಗಳ ಮಾರಾಟವು ಶೇಕಡಾ 4 ರಷ್ಟು ಹೆಚ್ಚಳ

ಮಹೀಂದ್ರಾ ಕಾರುಗಳ ಮಾರಾಟವು ಶೇಕಡಾ 4 ರಷ್ಟು ಹೆಚ್ಚಳ

ಇನ್ನು ಮಹೀಂದ್ರಾ ಮತ್ತು ಮಹೀಂದ್ರಾ ಪ್ರಕಾರ, 2020 ರ ನವೆಂಬರ್ ತಿಂಗಳಲ್ಲಿ ಅದರ ಒಟ್ಟು ವಾಹನ ಮಾರಾಟ 42,731 ಯುನಿಟ್‌ಗಳಾಗಿವೆ. ಕಳೆದ ವರ್ಷ ನವೆಂಬರ್‌ನಲ್ಲಿ 41,235 ಯುನಿಟ್‌ಗಳನ್ನು ಮಾರಾಟ ಮಾಡಿದ್ದು, ಸುಮಾರು ಶೇಕಡಾ 4 ರಷ್ಟು ಹೆಚ್ಚಾಗಿದೆ.

ಟಾಟಾ ಮೋಟಾರ್ಸ್‌ನಿಂದ ವಿಶಿಷ್ಟ ಕ್ರಮ: ಸೇಫ್ಟಿ ಬಬಲ್ ಮೂಲಕ ಕಾರುಗಳ ವಿತರಣೆಟಾಟಾ ಮೋಟಾರ್ಸ್‌ನಿಂದ ವಿಶಿಷ್ಟ ಕ್ರಮ: ಸೇಫ್ಟಿ ಬಬಲ್ ಮೂಲಕ ಕಾರುಗಳ ವಿತರಣೆ

ಟಾಟಾ ಮೋಟಾರ್ಸ್ ಕಾರುಗಳ ಭರ್ಜರಿ ಮಾರಾಟ

ಟಾಟಾ ಮೋಟಾರ್ಸ್ ಕಾರುಗಳ ಭರ್ಜರಿ ಮಾರಾಟ

ಟಾಟಾ ಮೋಟಾರ್ಸ್‌ ಕಾರು ಮಾರಾಟದಲ್ಲಿ ಭಾರೀ ಏರಿಕೆ ಕಂಡಿದ್ದು, 21,600 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಪ್ರಯಾಣಿಕರ ವಾಹನ ವಿತರಣೆಯು ದ್ವಿಗುಣಗೊಂಡಿದ್ದರಿಂದ ನವೆಂಬರ್‌ನಲ್ಲಿ ದೇಶೀಯ ಮಾರಾಟದಲ್ಲಿ ಶೇಕಡಾ 26ರಷ್ಟು ಏರಿಕೆ ದಾಖಲಾಗಿದೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ 38,057 ಕ್ಕೆ ಹೋಲಿಸಿದರೆ ಈ ವರ್ಷ 47,859 ವಾಹನಗಳನ್ನು ಮಾರಾಟ ಮಾಡಿದೆ ಎಂದು ಸ್ಟಾಕ್ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ತಿಳಿಸಿದೆ.


ಟಾಟಾ ಮೋಟಾರ್ಸ್ ಪ್ರಯಾಣಿಕರ ವಾಹನ ಮಾರಾಟವು ಶೇಕಡಾ 108ರಷ್ಟು ಏರಿಕೆ ಕಂಡು 21,641ಕ್ಕೆ ತಲುಪಿದೆ. ವಾಣಿಜ್ಯ ವಾಹನಗಳ ಮಾರಾಟ ಶೇಕಡಾ 9ರಷ್ಟು ಕುಸಿದು 27,982ಕ್ಕೆ ತಲುಪಿದೆ.

ಬಜಾಜ್ ಆಟೋ ಮಾರಾಟದಲ್ಲಿ ಏರಿಕೆ

ಬಜಾಜ್ ಆಟೋ ಮಾರಾಟದಲ್ಲಿ ಏರಿಕೆ

ಬಜಾಜ್ ಆಟೋ ನವೆಂಬರ್‌ನಲ್ಲಿ ಒಟ್ಟು ಮಾರಾಟದಲ್ಲಿ ಶೇ. 5 ರಷ್ಟು ಏರಿಕೆ ಕಂಡು 4.22 ಲಕ್ಷ ಯುನಿಟ್‌ಗಳಿಗೆ ತಲುಪಿದೆ. ಇದರ ಒಟ್ಟು ಮೋಟಾರ್‌ಸೈಕಲ್ ಮಾರಾಟವು ಶೇಕಡಾ 12 ರಷ್ಟು ಏರಿಕೆಯಾಗಿ 3,84,993 ಕ್ಕೆ ತಲುಪಿದೆ. ಒಟ್ಟು ವಾಣಿಜ್ಯ ವಾಹನಗಳ ಮಾರಾಟವು ಶೇಕಡಾ 38 ರಷ್ಟು ಕುಸಿದು 37,247 ಕ್ಕೆ ತಲುಪಿದೆ. ಆದರೆ ರಫ್ತು ಶೇ. 14 ರಷ್ಟು ಏರಿಕೆಯಾಗಿ 2.23 ಲಕ್ಷ ಯೂನಿಟ್‌ಗಳಿಗೆ ತಲುಪಿದೆ.

English summary
India's major Auto companies November month sales report revealed. Tata motors sales rise 26%
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X