• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವರ ಹಿಂದಿನ ಭವಿಷ್ಯ ನಿಜವಾಗಿತ್ತು, ಅಮೆರಿಕಕ್ಕೆ ಗಂಡಾಂತರವೆಂದು ರೂಬಿನಿ ಹೊಸ ಭವಿಷ್ಯ

|
Google Oneindia Kannada News

ನವದೆಹಲಿ, ಸೆ. 23: ಡಾಕ್ಟರ್ ಡೂಮ್ ಎಂದೇ ಖ್ಯಾತರಾಗಿರುವ ಅರ್ಥಶಾಸ್ತ್ರಜ್ಞ ನೌರಿಯೆಲ್ ರೂಬಿನಿ ಭಾರತವೂ ಸೇರಿ ವಿಶ್ವದ ಅನೇಕ ದೇಶಗಳು ಆತಂಕಗೊಳ್ಳುವಂಥ ಮಾತುಗಳನ್ನು ಆಡಿದ್ದಾರೆ. ಆರ್ಥಿಕ ಬಿಕ್ಕಟ್ಟಿನಲ್ಲಿರುವ ಅಮೆರಿಕ ಬೇಗ ಚೇತರಿಸಿಕೊಳ್ಳುವುದು ಅನುಮಾನ ಎಂದು ಅವರು ಹೇಳಿದ್ದಾರೆ.

ಅಮೆರಿಕದ ಆರ್ಥಿಕ ಹಿಂಜರಿತ ಬೇಗ ಮುಗಿಯುವುದಿಲ್ಲ. ಇದು ಸುದೀರ್ಘ ಕಾಲ ಇರುತ್ತದೆ. ಜಾಗತಿಕವಾಗಿ ಆರ್ಥಿಕ ಹಿಂಜರಿತ 2022ರ ಅಂತ್ಯಕ್ಕೆ ಶುರುವಾಗಿ 2023ರ ವರ್ಷ ಮುಗಿಯುವವರೆಗೂ ಬಾಧಿಸಲಿದೆ ಎಂದು ನೌರಿಯಲ್ ರೂಬಿನಿ ಎಚ್ಚರಿಸಿದ್ದಾರೆ.

ಉದ್ಯೋಗಿಗಳನ್ನು ನೋಟಿಸ್‌ ಅವಧಿಯಲ್ಲಿಟ್ಟ ಮೆಟಾ, ಗೂಗಲ್‌ಉದ್ಯೋಗಿಗಳನ್ನು ನೋಟಿಸ್‌ ಅವಧಿಯಲ್ಲಿಟ್ಟ ಮೆಟಾ, ಗೂಗಲ್‌

ನೌರಿಯನ್ ರೂಬಿನಿ ಕೆಲವರಿಗೆ ನೆನಪಿರಬಹುದು. ಇವರನ್ನು ಡಾಕ್ಟರ್ ಡೂಮ್ ಎಂದು ಕರೆಯಲು ಕಾರಣ ಇದೆ. ಜಗತ್ತಿಗೆ ಆರ್ಥಿಕ ದುಸ್ಥಿತಿ ಬಂದೆರಗುವ ಸಾಧ್ಯತೆಯನ್ನು ಇವರು ಮೊದಲೇ ಗ್ರಹಿಸಬಲ್ಲವರು. ಹಿಂದೆ 2007-2008ರಲ್ಲಿ ಆದ ಜಾಗತಿಕ ಹಣಕಾಸು ಬಿಕ್ಕಟ್ಟನ್ನು ಇವರು ಬಹಳ ನಿಖರವಾಗಿ ಅಂದಾಜು ಮಾಡಿ ಮೊದಲೇ ಭವಿಷ್ಯ ನುಡಿದಿದ್ದರು. ಈಗ ಅಮೆರಿಕಕ್ಕೆ ಆರ್ಥಿಕ ಹಿಂಜರಿತದ ಬಗ್ಗೆ ಅವರು ಹೇಳಿರುವ ಭಯಾನಕ ಭವಿಷ್ಯವನ್ನು ಗಂಭೀರವಾಗಿ ಪರಿಗಣಿಸದೇ ಬೇರೆ ವಿಧಿ ಇಲ್ಲ.

"ಅಮೆರಿಕದ ಆರ್ಥಿಕ ಹಿಂಜರಿತ ಹೆಚ್ಚು ಕಾಲ ಇರುವುದಿಲ್ಲ ಎಂಬ ಭ್ರಮೆಯಲ್ಲಿರುವವರು ಸರಕಾರಗಳು ಮತ್ತು ಕಾರ್ಪೊರೇಟ ಸಂಸ್ಥೆಗಳು ಹೊಂದಿರುವ ಸಾಲದ ಪ್ರಮಾಣವನ್ನು ಗಮನಿಸಬೇಕು. ಬಡ್ಡಿ ದರ ಹೆಚ್ಚಾದಂತೆ, ಸಾಲ ಪಾವತಿ ವೆಚ್ಚ ಹೆಚ್ಚಾದಂತೆ ಹಲವು ಝಾಂಬೀ ಸಂಸ್ಥೆಗಳು, ಝಾಂಬೀ ಮನೆಗಳು, ಕಾರ್ಪೊರೇಟ್‌ಗಳು, ಬ್ಯಾಂಕ್‌ಗಳು, ಝಾಂಬೀ ದೇಶಗಳು ಸಾಯಲಿವೆ... ಯಾರು ಬೆತ್ತಲೆಯಾಗಿ ಈಜುತ್ತಾರೋ ನೋಡೋಣ.." ಎಂದು ರೂಬಿನಿ ಹೇಳಿದ್ದಾರೆ.

ಜಾಗತಿಕ ಆರ್ಥಿಕ ಹಿಂಜರಿತ; ಯುಎಸ್ ಬಡ್ಡಿದರ; ಭಾರತಕ್ಕೇನು ಪರಿಣಾಮ?ಜಾಗತಿಕ ಆರ್ಥಿಕ ಹಿಂಜರಿತ; ಯುಎಸ್ ಬಡ್ಡಿದರ; ಭಾರತಕ್ಕೇನು ಪರಿಣಾಮ?

ಏನಿದು ಝಾಂಬಿ ಬ್ಯಾಂಕು?

ಏನಿದು ಝಾಂಬಿ ಬ್ಯಾಂಕು?

ಇಲ್ಲಿ ಝಾಂಬೀ ಬ್ಯಾಂಕ್‌ಗಳೆಂದರೆ ದೊಡ್ಡ ಮೊತ್ತದ ಎನ್‌ಪಿಎಗಳನ್ನು ಹೊಂದಿರುವ ಬ್ಯಾಂಕ್‌ಗಳು. ಅಂದರೆ, ಮರುಪಾವತಿಯಾಗದ ದೊಡ್ಡ ಮೊತ್ತದ ಸಾಲಗಳನ್ನು ಕೊಟ್ಟು ಬರ್ಬಾದ್ ಆಗಿರುವ ಬ್ಯಾಂಕುಗಳಿವು. ಕೆಲವೊಮ್ಮೆ ಸರಕಾರದ ಸೂಚನೆ ಮೇರೆಗೆ ಹಣದ ಹರಿವು ಆಗಲೆಂದು ಬ್ಯಾಂಕುಗಳು ಅನಿರ್ಬಂಧಿತವಾಗಿ ಸಾಲಗಳನ್ನು ನೀಡುತ್ತವೆ. ಆದರೆ, ವಸೂಲಾತಿ ಆಗದೇ ಸಾಲದ ಹೊರೆ ಹಾಗೇ ಉಳಿದುಹೋಗುತ್ತದೆ.

ರೂಬಿನಿ ಪ್ರಕಾರ, ಜಾಗತಿಕವಾಗಿ ಇರುವ ಬೃಹತ್ ಸಾಲವು ಷೇರುಪೇಟೆಯನ್ನು ಅಲುಗಾಡಿಸಬಹುದು. ಅಮೆರಿಕದ ಎಸ್ ಅಂಡ್ ಪಿ 500 ಸೂಚ್ಯಂಕ ಶೇ. 40ರಷ್ಟು ಕುಸಿತ ಕಾಣಬಹುದು ಎಂದಿದ್ದಾರೆ.

ಹಣದುಬ್ಬರಕ್ಕೆ ಕಡಿವಾಣ ಕಷ್ಟಸಾಧ್ಯ

ಹಣದುಬ್ಬರಕ್ಕೆ ಕಡಿವಾಣ ಕಷ್ಟಸಾಧ್ಯ

ಅಮೆರಿಕದಲ್ಲಿ ಹಣದುಬ್ಬರ ಶೇ. 8.26ರಷ್ಟಿದೆ. ಇದು ಸರಾಸರಿ ಹಣದುಬ್ಬರವಾದ ಶೇ. 3.26ಕ್ಕಿಂತ ತೀರಾ ಹೆಚ್ಚು. ಇದನ್ನು ನಿಯಂತ್ರಿಸಲೆಂದೇ ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಬಡ್ಡಿ ದರಗಳನ್ನು ಹೆಚ್ಚಿಸುತ್ತಿದೆ. ಹಣದುಬ್ಬರವನ್ನು ಶೇ. 2ಕ್ಕೆ ತಂದು ನಿಲ್ಲಿಸುವುದು ಸದ್ಯ ಅಮೆರಿಕದ ಗುರಿ.

ಅಮೆರಿಕದಲ್ಲಿ ಈಗ ರಿಪೋ ದರವನ್ನು 50 ಮೂಲಾಂಕಗಳಷ್ಟು ಹೆಚ್ಚಿಸಲಾಗಿದೆ. ಈಗ ಅಲ್ಲಿ ರಿಪೋ ದರ ಶೇ. 3 ಇದೆ. ನೌರಿಯೆಲ್ ರೂಬಿನಿ ಪ್ರಕಾರ ಹಣದುಬ್ಬರ ದರವನ್ನು ಶೇ. 2ಕ್ಕೆ ಕಟ್ಟಿ ನಿಲ್ಲಿಸುವುದು ಬಹಳ ಕಷ್ಟ, ಪವಾಡವೇ ಆಗಬೇಕಾಗುತ್ತದೆ. ಅವರ ಅಂದಾಜಿನ ಪ್ರಕಾರ ಫೆಡರಲ್ ರಿಸರ್ವ್ ಬ್ಯಾಂಕ್ ಈ ಬಾರಿ 75 ಮೂಲಾಂಕಗಳಷ್ಟು ದರ ಹೆಚ್ಚಳ ಮಾಡಬಹುದು. ಹಾಗೆಯೇ, ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ 50 + 50 ಬೇಸಿಸ್ ಪಾಯಿಂಟ್‌ಗಳಷ್ಟು ದರ ಹೆಚ್ಚಳ ಆಗಬಹುದು. ಇದರಿಂದ ಈ ವರ್ಷಾಂತ್ಯದಲ್ಲಿ ಅಮೆರಿಕದ ಫೆಡರಲ್ ಬ್ಯಾಂಕ್‌ ಬಡ್ಡಿ ದರ ಶೇ. 4ರಿಂದ 4.25ಕ್ಕೆ ಬಂದು ನಿಲ್ಲಬಹುದು ಎಂದು ರೂಬಿನಿ ಅಂದಾಜು ಮಾಡಿದ್ದಾರೆ.

ಬಡ್ಡಿ ದರ ಏರಿಕೆ ಇಷ್ಟಕ್ಕೆ ನಿಲ್ಲುವುದಿಲ್ಲ. ವೇತನ ಮತ್ತು ಸರ್ವಿಸ್ ಮೊದಲಾದ ವಲಯಗಳಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಬರುವ ಸಾಧ್ಯತೆ ಕಡಿಮೆ ಇರುವ ಕಾರಣ ಅಮೆರಿಕದ ಸೆಂಟ್ರಲ್ ಬ್ಯಾಂಕ್‌ಗೆ ಬಡ್ಡಿ ದರ ಇನ್ನಷ್ಟು ಏರಿಕೆ ಮಾಡದೇ ಬೇರೆ ವಿಧಿ ಇಲ್ಲ. ಇದು ಶೇ. 5ರ ಮಟ್ಟವನ್ನೂ ಮುಟ್ಟಬಹುದು. ಇದರ ಜೊತೆಗೆ ರಷ್ಯಾ ಉಕ್ರೇನ್ ಯುದ್ಧ ಹಾಗು ಚೀನಾದ ಕೋವಿಡ್ ಲಾಕ್ ಡೌನ್ ಇತ್ಯಾದಿ ಕ್ರಮಗಳಿಂದ ಸರಬರಾಜು ಸರಪಳಿ ವ್ಯವಸ್ಥೆ ಕುಂಠಿತಗೊಂಡು ವೆಚ್ಚ ಅಧಿಕವಾಗಿ ಆರ್ಥಿಕ ಪ್ರಗತಿ ಕಡಿಮೆಗೊಳ್ಳಬಹುದು. ಇದರಿಂದ ಆರ್ಥಿಕ ಹಿಂಜರಿತವನ್ನು ತಡೆಯಲು ಕಷ್ಟವಾಗುತ್ತದೆ ಎಂದು ನೌರಿಯೆಲ್ ರೂಬಿನಿ ಅಭಿಪ್ರಾಯಪಟ್ಟಿದ್ದಾರೆ.

ಆರ್ಥಿಕ ಹಿಂಜರಿತ ಶುರುವಾದರೆ...

ಆರ್ಥಿಕ ಹಿಂಜರಿತ ಶುರುವಾದರೆ...

ಒಮ್ಮೆ ಜಾಗತಿಕವಾಗಿ ಆರ್ಥಿಕ ಹಿಂಜರಿತ ಶುರುವಾಗಿಬಿಟ್ಟರೆ ಹಣಕಾಸು ಉತ್ತೇಜಕಗಳನ್ನು ಬಂದು ಬೀಳುತ್ತವೆಂದು ನಿರೀಕ್ಷಿಸಲು ಸಾಧ್ಯವಿಲ್ಲ. ಯಾಕೆಂದರೆ ಸರಕಾರಗಳೇ ಮೈತುಂಬ ಸಾಲ ತುಂಬಿಕೊಂಡಿರುತ್ತವೆ. ಹಣದುಬ್ಬರ ಹೆಚ್ಚು ಇರುವುದೂ ಕೂಡ ಈ ಕೆಲಸವನ್ನು ಕಷ್ಟ ಮಾಡುತ್ತದೆ. ಇದರ ಪರಿಣಾಮವಾಗಿ ಎಪ್ಪತ್ತರ ದಶಕದಲ್ಲಿ ಇದ್ದ ಸ್ಟ್ಯಾಗ್‌ಫ್ಲೇಶನ್ ಮತ್ತು ಸಾಲ ಬಿಕ್ಕಟ್ಟಿನಂಥ ಸಮಸ್ಯೆ ಮತ್ತೆ ಉದ್ಭವಿಸಬಹುದು ಎಂದು ರೂಬಿನಿ ಎಚ್ಚರಿಸಿದ್ದಾರೆ.

ಸ್ಟ್ಯಾಗ್‌ಫ್ಲೇಶನ್ ಎಂದರೆ ಬೇಡಿಕೆ ಏರದ ಆರ್ಥಿಕತೆ ಜೊತೆಗೆ ನಿರುದ್ಯೋಗ ಮಟ್ಟ ಮತ್ತು ಹಣದುಬ್ಬರ ಮಟ್ಟ ನಿರಂತರವಾಗಿ ಹೆಚ್ಚುತ್ತಿರುವ ಪರಿಸ್ಥಿತಿ.

ನೌರಿಯೆಲ್ ರೂಬಿನಿ ಪ್ರಕಾರ, "ಆರ್ಥಿ ಹಿಂಜರಿತವು ಕಿರು ಅವಧಿಗೆ ಸೀಮಿತವಾಗಿರುವುದಿಲ್ಲ. ಇದು ದೀರ್ಘವಾದ ಮತ್ತು ಬಹಳ ಘೋರವಾಗಿರುವ ಹಿಂಜರಿತವಾಗಿರಲಿದೆ".

2008ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಉದ್ಭವಿಸಬಹುದು ಎಂದು ನೌರಿಯೆಲ್ ರೂಬಿನಿ ಹಿಂದೆಯೇ ಭವಿಷ್ಯ ನುಡಿದಿದ್ದರು. ಆ ಸಂದರ್ಭದಲ್ಲಿ ಬ್ಯಾಂಕ್‌ಗಳು ಮತ್ತು ಮನೆಗಳು ಹೆಚ್ಚು ಬಾಧೆಗೊಳಗಾಗಿದ್ದವು. ಈ ಬಾರಿ 2023ರಲ್ಲಿ ಉದ್ಭವಿಸುವ ಆರ್ಥಿಕ ಹಿಂಜರಿತದಲ್ಲಿ ಹೆಡ್ಜ್ ಫಂಡ್, ಖಾಸಗಿ ಈಕ್ವಿಟಿ, ಕ್ರೆಡಿಟ್ ಫಂಡ್ ಇತ್ಯಾದಿ ಶಾಡೋ ಬ್ಯಾಂಕ್‌ಗಳಿಗೆ ಭಾರೀ ಹೊಡೆತ ಬೀಳಲಿದೆ ಎಂದು ರೂಬಿನಿ ಹೇಳಿದ್ದಾರೆ.

ಆರ್ಥಿಕ ಹಿನ್ನಡೆಗೆ 11 ಅಂಶಗಳು

ಆರ್ಥಿಕ ಹಿನ್ನಡೆಗೆ 11 ಅಂಶಗಳು

ಅಂದಹಾಗೆ ನೌರಿಯೆಲ್ ರೂಬಿನಿ "ಮೆಗಾ ಥ್ರೆಟ್ಸ್" ಎಂಬ ಹೊಸ ಪುಸ್ತಕ ಬರೆದಿದ್ದಾರೆ. ಅದರಲ್ಲಿ ಜಾಗತಿಕವಾಗಿ ಉದ್ಪಾದನಾ ವೆಚ್ಚ ಹೆಚ್ಚಿಸಿ ಅರ್ಥಿಕ ಪ್ರಗತಿಯನ್ನು ಕುಂಠಿತ ಮಾಡಬಲ್ಲ 11 ಸಂಗತಿಗಳನ್ನು ಬೊಟ್ಟು ಮಾಡಿದ್ದಾರೆ.

ಇದರಲ್ಲಿ ಡೀಗ್ಲೋಬಲೈಸೇಶನ್ ಮತ್ತು ಪ್ರೊಟೆಕ್ಷನಿಸಂಗಳು ಸೇರಿವೆ. ಡೀ ಗ್ಲೋಬಲೈಸೇಶನ್ ಎಂಬುದು ಜಾಗತಿಕ ವಿಕೇಂದ್ರೀಕರಣವಾಗಿದೆ. ಪ್ರೊಟೆಕ್ಷನಿಸಂ ಎಂಬುದು ಒಂದೊಂದು ದೇಶದ ಮಾರುಕಟ್ಟೆ ವ್ಯವಸ್ಥೆಯಲ್ಲಿ ಇರುವ ಪ್ರತ್ಯೇಕ ನಿರ್ಬಂಧಗಳು. ತಮ್ಮ ದೇಶದ ಉತ್ಪನ್ನಗಳಿಗೆ ಆದ್ಯತೆ ಇರುವ ರೀತಿಯಲ್ಲಿ ನೀತಿಗಳನ್ನು ರೂಪಿಸುವುದಕ್ಕೆ ಪ್ರೊಟೆಕ್ಷನಿಸಂ ಎನ್ನುವುದು.

ಡೀಗ್ಲೋಬಲೈಸೇಶನ್, ಪ್ರೊಟೆಕ್ಷನಿಸಂ ಜೊತೆಗೆ ಚೀನಾದಿಂದ ಮ್ಯಾನುಫ್ಯಾಕ್ಚರಿಂಗ್ ಘಟಕಗಳನ್ನು ಬೇರೆಡೆಗೆ ಸ್ಥಳಾಂತರ ಆಗುವುದು, ಮುಂದುವರಿದ ಆರ್ಥಿಕತೆಯ ದೇಶಗಳಲ್ಲಿನ ಜನರ ವಯಸ್ಸು ಹೆಚ್ಚುವುದು, ವಲಸೆ ನಿರ್ಬಂಧಗಳು, ಅಮೆರಿಕ ಚೀನಾ ತಿಕ್ಕಾಟ, ಜಾಗತಕ ಹವಾಮಾನ ಬದಲಾವಣೆ, ಸಾಂಕ್ರಾಮಿಕ ರೋಗಳು ಪದೇ ಪದೇ ಬರುವುದು ಈ ಅಂಶಗಳು ಜಾಗತಿಕ ಆರ್ಥಿಕತೆ ಬಿಗಡಾಯಿಸುವಂತೆ ಮಾಡುತ್ತವೆ ಎಂಬುದು ಅವರ ಅನಿಸಿಕೆ.

ಹೂಡಿಕೆದಾರರಿಗೆ ಅವರ ಸಲಹೆ

ಹೂಡಿಕೆದಾರರಿಗೆ ಅವರ ಸಲಹೆ

ಷೇರುಗಳ ಮೇಲೆ ಹೆಚ್ಚು ಹೂಡಿಕೆ ಮಾಡದಿರಿ. ಹೆಚ್ಚು ನಗದು ಹಣ ಹೊಂದಿರಿ. ಹಣದುಬ್ಬರದಿಂದ ನಗದಿಗೆ ಹಿನ್ನಡೆಯಾದರೂ ಅದರ ನಾಮಿನಲ್ ಮೌಲ್ಯ ಶೂನ್ಯದಲ್ಲೇ ಇರುತ್ತದೆ. ಷೇರು ಮತ್ತಿತರ ಆಸ್ತಿ ಶೇ. 30ರವರೆಗೂ ಕುಸಿಯಬಹುದು. ಆದ್ದರಿಂದ ಷೇರುಗಳಲ್ಲಿ ಈ ಒಂದು ವರ್ಷ ಹೆಚ್ಚು ಹಣ ತೊಡಗಿಸಬೇಡಿ ಎಂಬುದು ರೂಬಿನಿ ನೀಡಿರುವ ಸಲಹೆ.

(ಒನ್ಇಂಡಿಯಾ ಸುದ್ದಿ)

English summary
Economist Nouriel Roubini, who correctly predicted 2008 crisis, has warned world countries that global recession will remain till 2023, and it will be severe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X