ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಚ್ 31ರ ಒಳಗೆ ಪ್ಯಾನ್-ಆಧಾರ್ ಜೋಡಿಸದಿದ್ದರೆ ಏನೆಲ್ಲ ಅನುಭವಿಸಬೇಕು ಗೊತ್ತೇ?

|
Google Oneindia Kannada News

ನವದೆಹಲಿ, ಮಾರ್ಚ್ 25: ಆಧಾರ್ ಸಂಖ್ಯೆಯೊಂದಿಗೆ ಕಾಯಂ ಖಾತೆ ಸಂಖ್ಯೆಯನ್ನು (ಪ್ಯಾನ್) ಜೋಡಿಸುವ ಗಡುವು ಹಲವು ಬಾರಿ ವಿಸ್ತರಣೆಯಾದ ಬಳಿಕ ಇದೇ ಮಾರ್ಚ್ 31ಕ್ಕೆ ಅಂತ್ಯಗೊಳ್ಳುತ್ತಿದೆ. ಒಂದು ವೇಳೆ ಈ ಎರಡೂ ಸಂಖ್ಯೆಗಳ ಜೋಡಣೆ ಮಾಡದೆ ಹೋದರೆ ನೀವು 1,000 ರೂ.ವರೆಗೂ ದಂಡಕ್ಕೆ ಒಳಗಾಗಬಹುದು ಮತ್ತು ನಿಮ್ಮ ಪ್ಯಾನ್ ಸಂಖ್ಯೆ ಅಮಾನ್ಯಗೊಳ್ಳಬಹುದು.

ಲೋಕಸಭೆಯಲ್ಲಿ ಮಂಗಳವಾರ ಅನುಮೋದನೆಗೊಂಡ ಹಣಕಾಸು ಮಸೂದೆ 2021ರಲ್ಲಿನ ಹೊಸ ತಿದ್ದುಪಡಿಯಲ್ಲಿ ಈ ನಿಯಮ ಅಳವಡಿಸಲಾಗಿದೆ. ಹಣಕಾಸು ಮಸೂದೆ 2021ಅನ್ನು ಅಂಗೀಕರಿಸುವಾಗ ಸರ್ಕಾರವು 1961ರ ಆದಾಯ ತೆರಿಗೆ ಕಾಯ್ದೆಗೆ ಹೊಸ ಸೆಕ್ಷನ್ (ಸೆಕ್ಷನ್ 234ಎಚ್) ಅಳವಡಿಸಿದೆ. ಇದರ ಪ್ರಕಾರ 2021ರ ಮಾರ್ಚ್ 31ರ ಒಳಗೆ ಪ್ಯಾನ್‌ಅನ್ನು ಆಧಾರ್ ಜತೆ ಜೋಡಣೆ ಮಾಡದ ಜನರಿಗೆ ದಂಡ ವಿಧಿಸಬಹುದು.

ಪಿಎಫ್‌ ಖಾತೆಯನ್ನು ಆಧಾರ್‌ಗೆ ಲಿಂಕ್ ಮಾಡುವುದು ಹೇಗೆ? ತಿಳಿಯಿರಿಪಿಎಫ್‌ ಖಾತೆಯನ್ನು ಆಧಾರ್‌ಗೆ ಲಿಂಕ್ ಮಾಡುವುದು ಹೇಗೆ? ತಿಳಿಯಿರಿ

ದಂಡವಲ್ಲದೆ, ವ್ಯಕ್ತಿಯ ಪ್ಯಾನ್ ನಿಷ್ಕ್ರಿಯಗೊಳ್ಳಲಿದೆ. ಅಂತಹ ಸಂದರ್ಭದಲ್ಲಿ ವ್ಯಕ್ತಿಗಳು ತಮ್ಮ ಪ್ಯಾನ್ ಅಗತ್ಯವಿರುವ ಕಡೆಗಳಲ್ಲಿ ಪ್ಯಾನ್ ಸಂಖ್ಯೆ ಉಲ್ಲೇಖಿಸಿ ಹಣಕಾಸು ವ್ಯವಹಾರ ನಡೆಸುವುದು ಸಾಧ್ಯವಾಗುವುದಿಲ್ಲ. ಪ್ಯಾನ್-ಆಧಾರ್ ಜೋಡಣೆಯಲ್ಲಿ ವಿಫಲವಾದರೆ ವಿಧಿಸುವ ದಂಡ 1,000 ರೂ.ಗಿಂತ ಕಡಿಮೆ ಇರಬಹುದು. ಆದರೆ ಅದಕ್ಕಿಂತ ಹೆಚ್ಚಿರಲು ಸಾಧ್ಯವಿಲ್ಲ. ನಿರ್ದಿಷ್ಟ ಗಡುವಿನ ಅವಧಿಯಲ್ಲಿ ಪ್ಯಾನ್- ಆಧಾರ್ ಜೋಡಿಸಲು ವಿಫಲವಾದ ವ್ಯಕ್ತಿಗಳಿಗೆ ಅದಕ್ಕೆ ಅನುಗುಣವಾಗಿ ದಂಡ ವಿಧಿಸಲಾಗುತ್ತದೆ.

Not Linking PAN With Aadhaar Before March 31st May Cost You Huge Problems

ಈ ಎರಡೂ ಕಾರ್ಡ್‌ಗಳ ಜೋಡಣೆಗೆ ಸರ್ಕಾರ ಅನೇಕ ಬಾರಿ ಗಡುವುಗಳನ್ನು ವಿಸ್ತರಿಸಿತ್ತು. ಆದರೆ ಈ ಬಾರಿ ಮತ್ತೆ ವಿಸ್ತರಿಸುವ ಸಾಧ್ಯತೆ ಇಲ್ಲ. ಜತೆಗೆ ಪ್ರಕ್ರಿಯೆ ಪೂರ್ಣಗೊಳಿಸದವರಿಗೆ ದಂಡ ವಿಧಿಸಲು ಬಯಸಿದೆ.

ಪ್ಯಾನ್ ಅಮಾನ್ಯಗೊಂಡರೆ ಜನರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಸಹ ಸಾಧ್ಯವಾಗುವುದಿಲ್ಲ. ಅಲ್ಲದೆ, ಅದನ್ನು ಮಾಡದ ಕಾರಣಕ್ಕೆ ಭಾರಿ ದಂಡ ಎದುರಿಸಬೇಕಾಗುತ್ತದೆ. ನಿಷ್ಕ್ರಿಯ ಪ್ಯಾನ್ ಟಿಡಿಎಸ್‌ನಲ್ಲಿ ಅಧಿಕ ಪ್ರಮಾಣದ ಕಡಿತಕ್ಕೆ ಕಾರಣವಾಗಲಿದೆ. ಆದಾಯ ತೆರಿಗೆ ಕಾಯ್ದೆ ಪ್ರಕಾರ ಪ್ಯಾನ್ ನೀಡದವರು ಅಥವಾ ನಿಷ್ಕ್ರಿಯ ಪ್ಯಾನ್ ನೀಡುವವರು ಅಧಿಕ ಟಿಡಿಎಸ್ ಅಥವಾ ಟಿಸಿಎಸ್ ವಿಧಿಸಲಾಗುತ್ತದೆ.

English summary
Individuals need to link the PAN with Aadhaar before March 31st or have to face penalty and PAN will be inoperative.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X