ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್‍ಲೈನ್ ಶಾಪಿಂಗ್‍ಗೆ ಮಾರು ಹೋದ ಶೇ.87 ರಷ್ಟು ಬೆಂಗಳೂರಿಗರು!

|
Google Oneindia Kannada News

ಬೆಂಗಳೂರು, ನವೆಂಬರ್ 28: ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಕನ್ಸೂಮರ್ ಸೈಬರ್ ಸೇಫ್ಟಿ ಸಂಸ್ಥೆಯಾದ ನಾರ್ಟನ್‍ಲೈಫ್‍ಲಾಕ್ ಇಂಕ್ ತನ್ನ ಇಂಡಿಯಾ ಡಿಜಿಟಲ್ ವೆಲ್‍ನೆಸ್ ರಿಪೋರ್ಟ್ ಬಿಡುಗಡೆ ಮಾಡಿದೆ. ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ಭದ್ರತಾ ಬೆದರಿಕೆಗಳ ಬಗ್ಗೆ ಗ್ರಾಹಕರ ಜಾಗೃತಿಯನ್ನು ಅನ್ವೇಷಿಸುವ ಸಂಬಂಧ 1500 ಕ್ಕೂ ಹೆಚ್ಚು ನಗರ ವಾಸಿ ಭಾರತೀಯ ವಯಸ್ಕರನ್ನು ಆನ್‍ಲೈನ್ ಸಮೀಕ್ಷೆಗೆ ಒಳಪಡಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ.

ಈ ವರದಿ ಪ್ರಕಾರ 10 ರಲ್ಲಿ 7 ಮಂದಿ (ಶೇ.68 ರಷ್ಟು) ತಾವು ನಂಬಿರುವ ಅಥವಾ ವಿಶ್ವಾಸವಿಟ್ಟಿರುವ ವೆಬ್‍ಸೈಟ್‍ಗಳಲ್ಲಿ ತಮ್ಮ ವೈಯಕ್ತಿಕ ಬ್ಯಾಂಕ್ ವಿವರಗಳನ್ನು ಸೇವ್ ಮಾಡುವ ಸಂಬಂಧ ಹಣಕಾಸು ವ್ಯವಹಾರಗಳನ್ನು ಆನ್‍ಲೈನ್ ಮೂಲಕ ಮಾಡುತ್ತಿದ್ದಾರೆ ಮತ್ತು 10 ರಲ್ಲಿ 8 ಮಂದಿ (ಶೇ.83 ರಷ್ಟು) ಆನ್‍ಲೈನ್ ಬ್ಯಾಂಕಿಂಗ್‍ನಲ್ಲಿ ಹಣಕಾಸು ವಂಚನೆ ಮತ್ತು ಡೇಟಾ ಕಳ್ಳತನವಾಗುತ್ತದೆ ಎಂದು ಭಾವಿಸಿದ್ದಾರೆ.

ಬೆಂಗಳೂರಿನ ಜನರು ಆನ್‍ಲೈನ್ ವ್ಯವಹಾರಗಳನ್ನು ಮಾಡುವುದರಿಂದ ಸಮಯ ಉಳಿತಾಯ (ಶೇ.84 ರಷ್ಟು) ಮತ್ತು ಅನುಕೂಲಕರ (ಶೇ.89 ರಷ್ಟು) ಪ್ರಯೋಜನವಾಗುತ್ತದೆ ಎಂದು ಹೇಳಿದ್ದಾರೆ.

ಬೆಂಗಳೂರಿನ ಆನ್ ಲೈನ್ ವ್ಯವಹಾರ

ಬೆಂಗಳೂರಿನ ಆನ್ ಲೈನ್ ವ್ಯವಹಾರ

ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನ ಶೇ.87 ರಷ್ಟು ಜನರು ಶಿಪ್ಪಿಂಗ್ ವೆಚ್ಚ ಅಥವಾ ರಿಯಾಯ್ತಿಗಳನ್ನು ಪಡೆಯಲೆಂದೇ ಹೆಚ್ಚಾಗಿ ಆನ್‍ಲೈನ್ ವ್ಯವಹಾರಗಳನ್ನು ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಆನ್‍ಲೈನ್ ಬ್ಯಾಂಕಿಂಗ್‍ನಲ್ಲಿ ಹಣಕಾಸು ವಂಚನೆ ಮತ್ತು ಡೇಟಾ ಕಳ್ಳತನವಾಗುತ್ತದೆ ಎಂಬ ಆತಂಕವನ್ನು ಶೇ.86 ರಷ್ಟು ಜನರು ವ್ಯಕ್ತಪಡಿಸಿದ್ದಾರೆ.

ಈ ಸಮೀಕ್ಷೆ ಪ್ರಕಾರ ಹೆಚ್ಚಿನವರು ಅನುಕೂಲ ಮತ್ತು ಸಮಯ ಉಳಿತಾಯಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಶೇ.92 ರಷ್ಟು ಜನರು ಶಾಪಿಂಗ್‍ಗೆ ಆನ್‍ಲೈನ್ ಹಣಕಾಸು ವ್ಯವಹಾರ ಮಾಡಿದರೆ, ಶೇ.88 ರಷ್ಟು ಜನರು ಬಿಲ್ ಪೇಮೆಂಟ್‍ಗೆ ಆನ್‍ಲೈನ್ ಅನ್ನು ಬಳಸುತ್ತಿದ್ದಾರೆ.

2 ನೇ ಹಂತದ ನಗರಗಳ ಗ್ರಾಹಕರು

2 ನೇ ಹಂತದ ನಗರಗಳ ಗ್ರಾಹಕರು

ನಗರ ಪ್ರದೇಶದ ಲಕ್ಷಾಂತರ ಜನರು ಅಂದರೆ ಶೇ.98 ರಷ್ಟು ಜನರು ಆನ್‍ಲೈನ್ ಮೂಲಕ ಹಣಕಾಸು ವ್ಯವಹಾರಗಳನ್ನು ನಡೆಸುತ್ತಿದ್ದರೆ, ಜನರಲ್ X ಶೇ.97 ಮತ್ತು ಜನರಲ್ Z ಶೇ.94 ರಷ್ಟು ಜನರು ವ್ಯವಹಾರ ನಡೆಸುತ್ತಿದ್ದಾರೆ. 2 ನೇ ಹಂತದ ನಗರಗಳಲ್ಲಿ ಗ್ರಾಹಕರು ಆನ್‍ಲೈನ್ ವ್ಯವಹಾರಗಳ ಹೆಚ್ಚಿನ ಪ್ರಯೋಜನ ಪಡೆಯುತ್ತಿದ್ದಾರೆ. ಅಂದರೆ, ಮೆಟ್ರೋ ಮತ್ತು 1 ನೇ ಹಂತದ ನಗರಗಳ ಗ್ರಾಹಕರಿಗಿಂತ ಹೆಚ್ಚಾಗಿ ಈ 2 ನೇ ಹಂತದ ನಗರಗಳ ಗ್ರಾಹಕರು ಹೆಚ್ಚಾಗಿ ಆನ್‍ಲೈನ್ ವ್ಯವಹಾರಗಳನ್ನು ನಡೆಸುತ್ತಿದ್ದಾರೆ.

ನಿರ್ದೇಶಕ ರಿತೇಶ್ ಚೋಪ್ರಾ

ನಿರ್ದೇಶಕ ರಿತೇಶ್ ಚೋಪ್ರಾ

ನಾರ್ಟನ್‍ಲೈಫ್‍ಲಾಕ್ ಇಂಕ್ ಇಂಡಿಯಾದ ನಿರ್ದೇಶಕ ರಿತೇಶ್ ಚೋಪ್ರಾ ಅವರು ಈ ಸಮೀಕ್ಷಾ ವರದಿ ಬಗ್ಗೆ ಮಾತನಾಡಿ,"ಭಾರತೀಯ ಗ್ರಾಹಕರು ಬಿಲ್‍ಗಳ ಪಾವತಿ, ಹಣ ವರ್ಗಾವಣೆ, ಟಿಕೆಟ್ ಬುಕ್ ಮಾಡುವುದು ಮತ್ತು ಇನ್ನೂ ಹಲವಾರು ವ್ಯವಹಾರಗಳಿಗೆ ಡಿಜಿಟಲ್ ಮತ್ತು ಇಂಟರ್‍ನೆಟ್ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿರುವುದು ಒಂದು ರೀತಿಯ ಆಶಾದಾಯಕ ಬೆಳವಣಿಗೆಯಾಗಿದೆ'' ಎಂದು ತಿಳಿಸಿದರು.

''ಆದರೆ, ಇದೇ ಸಂದರ್ಭದಲ್ಲಿ ಗ್ರಾಹಕರು ಈ ವ್ಯವಸ್ಥೆಗಳಲ್ಲಿರುವ ಅಪಾಯಗಳನ್ನು ಅರಿತುಕೊಳ್ಳುವುದು ಸಹ ಅಷ್ಟೇ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ಜಾಗರೂಕತೆಯಿಂದ ಆನ್‍ಲೈನ್ ವ್ಯವಹಾರಗಳನ್ನು ನಡೆಸಬೇಕಾಗಿದೆ. ಕಡಿಮೆ ಭದ್ರತೆ ಇರುವಂತಹ ಗ್ರಾಹಕರನ್ನು ಪತ್ತೆ ಮಾಡುವ ಸೈಬರ್ ಕ್ರಿಮಿನಲ್‍ಗಳು ಹೊಂಚು ಹಾಕಿ ಗ್ರಾಹಕರಿಗೆ ವಂಚನೆ ಮಾಡುತ್ತಾರೆ ಮತ್ತು ಆನ್‍ಲೈನ್ ಶಾಪಿಂಗ್ ಕುತೂಹಲವನ್ನೇ ಬುಡಮೇಲು ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ಹೇಗೆ ತಮ್ಮ ಸೈಬರ್ ಭದ್ರತೆಯನ್ನು ಹೆಚ್ಚು ಮಾಡಿಕೊಳ್ಳಬಹುದಾದ ನಿರ್ಣಾಯಕ ಮತ್ತು ಜಾಗರೂಕ ಹೆಜ್ಜೆಗಳನ್ನು ಇಡಬೇಕೆಂಬುದಕ್ಕೆ ನಾವು ನೆರವಾಗುತ್ತಿದ್ದೇವೆ'' ಎಂದು ಹೇಳಿದರು.

ಜನರಲ್ X ಮತ್ತು ಮಹಿಳೆಯರಿಗೆ ಭದ್ರತೆಯ ಆತಂಕ

ಜನರಲ್ X ಮತ್ತು ಮಹಿಳೆಯರಿಗೆ ಭದ್ರತೆಯ ಆತಂಕ

ಆನ್‍ಲೈನ್ ಬ್ಯಾಂಕಿಂಗ್‍ನಲ್ಲಿ ವ್ಯವಹಾರ ನಡೆಸುವಾಗ ವಂಚನೆ ಮತ್ತು ಡೇಟಾ ಕಳವು ಬಹುದೊಡ್ಡ ಬೆದರಿಕೆಯಾಗಿವೆ. ಇದನ್ನು ಶೇ.83 ರಷ್ಟು ಭಾರತೀಯರು ಒಪ್ಪಿಕೊಂಡಿದ್ದಾರೆ. ಶೇ.80 ರಷ್ಟು ಜನರು ಆ್ಯಪ್ ಮತ್ತು ವೆಬ್‍ಸೈಟ್‍ಗಳ ಮೂಲಕ ಆನ್‍ಲೈನ್ ಪಾವತಿ ಮಾಡುವುದು ಅತ್ಯಂತ ಸುರಕ್ಷಿತ ಎಂದು ಹೇಳಿದ್ದಾರೆ. ಶೇ.88 ರಷ್ಟು ಜನರು ಈ ಆತಂಕದ ಬಗ್ಗೆ ತಿಳಿದಿದ್ದಾರೆ. ಆದರೆ, ಶೇ.86 ರಷ್ಟು ಜನರು ಆ್ಯಪ್ ಮತ್ತು ವೆಬ್‍ಸೈಟ್‍ಗಳ ಮೂಲಕ ಆನ್‍ಲೈನ್ ಪಾವತಿ ಮಾಡುವುದು ಅತ್ಯಂತ ಸುರಕ್ಷಿತ ಎಂದು ನಂಬಿದ್ದಾರೆ. ಇನ್ನು ಶೇ.85 ರಷ್ಟು ಜನರು ತಾವು ವಿಶ್ವಾಸವಿಟ್ಟಿರುವ ವೆಬ್‍ಸೈಟ್‍ಗಳಲ್ಲಿ ತಮ್ಮ ಬ್ಯಾಂಕ್ ವಿವರಗಳನ್ನು ಸೇವ್ ಮಾಡಲು ಇಚ್ಛಿಸುತ್ತಾರೆ.

English summary
NortonLifeLock conducted an online quantitative survey in 2019, with 1,572 active Indian users of smartphones and the internet aged 18 and above. Data was collected during July 8- 16, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X