ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಚ್ 01ರಿಂದ ಗೃಹಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆ ಇಳಿಕೆ

|
Google Oneindia Kannada News

ನವದೆಹಲಿ, ಮಾರ್ಚ್ 01: ಮಾರ್ಚ್ ತಿಂಗಳ ಆರಂಭದಲ್ಲೇ ಎಲ್ ಪಿಜಿ ಗ್ರಾಹಕರಿಗೆ ಶುಭ ಸುದ್ದಿ ಸಿಕ್ಕ್ದೆ. ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ತಗ್ಗಿಸಲಾಗಿದೆ. ಸಬ್ಸಿಡಿರಹಿತ ಎಲ್ ಪಿಜಿ ಸಿಲಿಂಡರ್ ಬೆಲೆಗಳನ್ನು ಮಾರ್ಚ್ 01ರಿಂದ ತಗ್ಗಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಹೇಳಿವೆ.

ಎಲ್‌ಪಿಜಿ ಸಿಲಿಂಡರ್ ದರ ಏರಿಕೆ: ಎಲ್ಲಿ ಎಷ್ಟು?ಎಲ್‌ಪಿಜಿ ಸಿಲಿಂಡರ್ ದರ ಏರಿಕೆ: ಎಲ್ಲಿ ಎಷ್ಟು?

ಸಬ್ಸಿಡಿ ರಹಿತ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ ಇಂದಿನಿಂದ 53 ರೂ. ನಷ್ಟು ಇಳಿಕೆಯಾಗಿದೆ. ಇದೇ ರೀತಿ 19 ಕೆಜಿ ವಾಣಿಜ್ಯ ಸಿಲಿಂಡರ್ ಸಹ 84.50 ರೂ.ಗಳಿಂದ ಅಗ್ಗವಾಗಿದೆ. ಕಳೆದ ತಿಂಗಳು ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್‌ಗಳ ಬೆಲೆ ಸುಮಾರು 150 ರೂಪಾಯಿಗಳಷ್ಟು ಏರಿಕೆಯಾಗಿತ್ತು.

Non-subsidised LPG prices were reduced from March 1

ಇಂಡಿಯನ್ ಆಯಿಲ್ ವೆಬ್‌ಸೈಟ್ ಪ್ರಕಾರ, ಮೆಟ್ರೋ ನಗರಗಳಲ್ಲಿ ದರ ಹೀಗಿದೆ:
ದೆಹಲಿ: 858.50 ರು (ಹಾಲಿ ದರ)-805.5 ರು (ಮಾರ್ಚ್ 01),
ಕೋಲ್ಕತಾ: 896 ರು (ಹಾಲಿ ದರ)-839.5 ರು (ಮಾರ್ಚ್ 01),
ಚೆನ್ನೈ: 881 ರು (ಹಾಲಿ ದರ)-826 ರು (ಮಾರ್ಚ್ 01),
ಮುಂಬೈ: 829.50 ರು (ಹಾಲಿ ದರ)-826 ರು (ಮಾರ್ಚ್ 01),

ಗಮನಿಸಿ: ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಪ್ರತಿ ತಿಂಗಳ ಮೊದಲ ದಿನದಂದು ಇಂಧನ ದರ, ಸಬ್ಸಿಡಿ ರಹಿತ ಎಲ್ ಪಿಜಿ, ಜೆಟ್ ಇಂಧನ, ಸೀಮೆಎಣ್ಣೆ ಬೆಲೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತವೆ. ಬೆಲೆ ಏರಿಕೆ ಹಾಗೂ ಇಳಿಕೆ ಎಲ್ಲವೂ ಜಾಗತಿಕ ಮಾರುಕಟ್ಟೆ ದರದ ಮೇಲೆ ಅವಲಂಬಿತವಾಗಿರುತ್ತದೆ. ಇದಲ್ಲದೆ ಆರು ತಿಂಗಳಿಗೊಮ್ಮೆ ನೈಸರ್ಗಿಕ ಅನಿಲದ ಸರಾಸರಿ ದರ ನಿಗದಿಪಡಿಸಲಾಗುತ್ತದೆ.

English summary
Non-subsidised LPG prices were reduced in metros from March 1, in a first downward revision in the cooking gas rates since August.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X