ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರು. 820 ತಲುಪಿ ಸಾರ್ವಕಾಲಿಕ ಏರಿಕೆ ಕಂಡ ಸಬ್ಸಿಡಿ ರಹಿತ ಸಿಲಿಂಡರ್

|
Google Oneindia Kannada News

Recommended Video

ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ 820ರೂಗೆ ಏರಿಕೆ | Oneindia Kannada

ಬೆಂಗಳೂರು, ಸೆಪ್ಟೆಂಬರ್ 4: ಈಗಾಗಲೇ ಪೆಟ್ರೋಲ್- ಡೀಸೆಲ್ ಬೆಲೆ ಏರುತ್ತಲೇ ಇದ್ದು, ಗ್ರಾಹಕರ ಜೇಬು ಸುಡುತ್ತಿದೆ. ಇದೀಗ ಬೆಂಗಳೂರಿಗರು ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಗೆ ಸೆಪ್ಟೆಂಬರ್ ನಲ್ಲಿ ತಲಾ 30.5 ರುಪಾಯಿ ಹೆಚ್ಚು ಪಾವತಿಸಬೇಕಿದೆ. ಇದೀಗ ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆ ರು. 820.5 ತಲುಪಿದ್ದು, ಆಗಸ್ಟ್ ನಲ್ಲಿ ರು. 790 ಇತ್ತು.

ಸದ್ಯಕ್ಕೆ ಇರುವ ಈ ಬೆಲೆ ಸಾರ್ವಕಾಲಿಕ ಏರಿಕೆ ಆಗಿದೆ. ಈ ಮೊತ್ತಕ್ಕೆ ಮೂರರಿಂದ ಐದು ರುಪಾಯಿ ವ್ಯತ್ಯಾಸದಲ್ಲಿ ಇಡೀ ಕರ್ನಾಟಕದ ನಾನಾ ಜಿಲ್ಲೆಯ ಜನರು ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಗೆ ಇದೇ ಮೊತ್ತ ಪಾವತಿಸುತ್ತಾರೆ. ಯಾರು ಸಬ್ಸಿಡಿ ಪಡೆಯುತ್ತಿದ್ದಾರೋ ಅವರಿಗೆ 503 ರುಪಾಯಿಗೆ ದೊರೆಯುತ್ತದೆ. ಬಾಕಿ ಮೊತ್ತವನ್ನು ಸರಕಾರ ಭರಿಸುತ್ತದೆ.

ದೆಹಲಿಯಲ್ಲಿ ಎಲ್ಪಿಜಿ ಬೆಲೆ ಏರಿಕೆ! ದುಬಾರಿಯಾಯ್ತು ದುನಿಯಾದೆಹಲಿಯಲ್ಲಿ ಎಲ್ಪಿಜಿ ಬೆಲೆ ಏರಿಕೆ! ದುಬಾರಿಯಾಯ್ತು ದುನಿಯಾ

ಅಖಿಲ ಭಾರತ ಎಲ್ ಪಿಜಿ ವಿತರಕರ ಒಕ್ಕೂಟದ ಪ್ರಕಾರ, ಬೆಂಗಳೂರಿನಲ್ಲಿ ಹತ್ತು ಲಕ್ಷ ಎಲ್ ಪಿಜಿ ಸಿಲಿಂಡರ್ ವಿತರಿಸಲಾಗುತ್ತದೆ. ಆ ಪೈಕಿ ಶೇಕಡಾ ಇಪ್ಪತ್ತೈದರಷ್ಟು ಗ್ರಾಹಕರು ತಮ ಸಬ್ಸಿಡಿ ತೆಗೆದುಕೊಳ್ಳುತ್ತಿಲ್ಲ. ಇನ್ನು ಹಲವು ಗ್ರಾಹಕರ ದೂರು ಏನೆಂದರೆ, ಸಿಲಿಂಡರ್ ಡೆಲಿವರಿ ನೀಡಲು ಬರುವವರು ಐವತ್ತು ರುಪಾಯಿ ಕೇಳಿ ಪಡೆದುಕೊಳ್ಳುತ್ತಾರಂತೆ. ಕೆಲವು ಕಡೆ ಹದಿನೈದರಿಂದ ಇಪ್ಪತ್ತು ರುಪಾಯಿ ಪಡೆಯುತ್ತಾರೆ.

Non subsidised LPG cylinder all time high at Rs 820

"ನನ್ನ ಮಗ ಕೆಲವು ತಿಂಗಳ ಹಿಂದೆ ಎಲ್ ಪಿಜಿ ಸಿಲಿಂಡರ್ ಸಬ್ಸಿಡಿ ಬೇಡ ಎಂದು ಬಿಟ್ಟುಕೊಟ್ಟಿದ್ದ. ಆದರೆ ಪ್ರತಿ ತಿಂಗಳು ಈ ಬೆಲೆ ಹೆಚ್ಚುತ್ತಲೇ ಇದೆ. ಇದರ ಜತೆಗೆ ಇತರ ಅಗತ್ಯ ವಸ್ತುಗಳ ಬೆಲೆಯಲ್ಲೂ ಏರಿಕೆ ಆಗುತ್ತಲೇ ಇದೆ. ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆಗೆ ಒಂದು ನಿಯಂತ್ರಣ ಹಾಕಬೇಕು" ಎಂದು ಗ್ರಾಹಕರಾದ, ಬನಶಂಕರಿ ಮೂರನೇ ಹಂತದ ನಿವಾಸಿ ಬಿ.ಜಿ.ಶ್ಯಾಮರಾವ್ ಒತ್ತಾಯಿಸುತ್ತಾರೆ.

ಫೇಸ್ಬುಕ್, ಟ್ವಿಟ್ಟರ್ ಬಳಸಿ ಎಲ್ ಪಿಜಿ ಸಿಲಿಂಡರ್ ಬುಕ್ ಮಾಡಿ!ಫೇಸ್ಬುಕ್, ಟ್ವಿಟ್ಟರ್ ಬಳಸಿ ಎಲ್ ಪಿಜಿ ಸಿಲಿಂಡರ್ ಬುಕ್ ಮಾಡಿ!

ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ಇನ್ನೂ ಹೆಚ್ಚಾಗಬಹುದು ಎಂಬ ಅಂದಾಜಿದೆ. ಅದು ಯಾವ ಪ್ರಮಾಣದಲ್ಲಿ ಎಂಬ ಬಗ್ಗೆ ನಿರ್ಧರಿಸಲು ಸಾಧ್ಯವಿಲ್ಲ. ಪ್ರತಿ ವರ್ಷ ಚಳಿಗಾಲದಲ್ಲಿ ಯುರೋಪ್ ಮತ್ತು ಅಮೆರಿಕದಲ್ಲಿ ಅಡುಗೆ ಅನಿಲ ಸಿಲಿಂಡರ್ ಬಳಕೆ ಹೆಚ್ಚಾಗುವುದರಿಂದ ಆಗ ಬೆಲೆ ಕೂಡ ಹೆಚ್ಚಾಗುತ್ತದೆ. ಚಳಿಗಾಲ ಮುಗಿದು, ಜನವರಿ ಆರಂಭ ಆಗುತ್ತಿದ್ದಂತೆ ಬೆಲೆ ಇಳಿಕೆ ಆಗುತ್ತದೆ. ಆದರೆ ಈಗ ಆಗಿರುವುದು ಸಾರ್ವಕಾಲಿಕ ಏರಿಕೆ ಎಂದು ವಿತರಕರ ಒಕ್ಕೂಟ ಅಭಿಪ್ರಾಯ ಪಡುತ್ತದೆ.

English summary
A non-subsidized cylinder will now cost Rs 820.5 — compared to Rs 790 in August — and the price is expected to rise further in the coming months before dipping after January. The record increase, which has taken the price to an all-time high, will see customers across Karnataka pay the same price, with a slight variation of Rs 3 to Rs 5 in some parts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X