ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರು, ಬೈಕ್ ಇತರ ವಿಮೆ ಪ್ರೀಮಿಯಂ ಏರಿಕೆ!

|
Google Oneindia Kannada News

ಮುಂಬೈ, ಮಾರ್ಚ್ 13: ದೊಡ್ಡ ಮೊತ್ತದ ಇನ್ಷೂರೆನ್ಸ್ ಕ್ಲೇಮ್ ಗಳಿಂದ ನಷ್ಟದ ಪ್ರಮಾಣ ಹೆಚ್ಚುತ್ತಿರುವುದು ಮತ್ತು ಬಡ್ಡಿದರ ಇಳಿಕೆ ಸೇರಿದಂತೆ ಇತರೆ ನಕಾರಾತ್ಮಕ ಪರಿಣಾಮಗಳಿಂದ ಕಂಪನಿಗಳು ತತ್ತರಿಸಿದ್ದು, ಜೀವವಿಮೆ ಹೊರತಾದ ಇತರ ವಿಮೆಗಳ ಪ್ರೀಮಿಯಂ ಪೈಕಿ ಕೆಲವುದನ್ನು ಶೇ 10ರಿಂದ 15ರಷ್ಟು ಏರಿಸಲು ಚಿಂತಿಸಿವೆ.

ಐಆರ್ ಡಿಎಐ ಈ ಬಗ್ಗೆ ಈಗಾಗಲೇ ಸೂಚನೆ ಕೂಡ ನೀಡಿದೆ. ಗುಂಪು ಆರೋಗ್ಯ ವಿಮೆ ಹಾಗೂ ಥರ್ಡ್ ಪಾರ್ಟಿ ಮೋಟಾರ್ ಪ್ರೀಮಿಯಂನಲ್ಲಿ ಏಪ್ರಿಲ್ 1ರಿಂದ ಏರಿಕೆಯಾಗುವ ಸಾಧ್ಯತೆಗಳಿವೆ. "ಪ್ರೀಮಿಯಂನಲ್ಲಿ ಏರಿಕೆ ಆದರೆ ಯಾವುದೇ ಅಚ್ಚರಿಯಿಲ್ಲ" ಎಂದು ಐಆರ್ ಡಿಎಐ ಸದಸ್ಯ ಪಿಜೆ ಜೋಸೆಫ್ ಪಿಟಿಐಗೆ ತಿಳಿಸಿದ್ದಾರೆ.[92 ಪೈಸೆ ರೈಲ್ವೆ ವಿಮೆ, ನಾಮಿನಿ ಮಾಡಬೇಕಾದ ಜರೂರು]

Non-life premia set to go up as regulator backs move

ವಿಮಾ ಮಾರುಕಟ್ಟೆ ತುಂಬ ಸ್ಪರ್ಧಾತ್ಮಕವಾಗಿದೆ. ನಾವು ತುಂಬ ಏರಿಕೆ ಕೂಡ ಮಾಡಲು ಸಾಧ್ಯವಿಲ್ಲ. ನಷ್ಟದಲ್ಲಿರುವ ವಿಭಾಗದ ಇನ್ಷೂರೆನ್ಸ್ ಗಳ ಪ್ರೀಮಿಯಂಗಳಿಗೆ ಸದ್ಯಕ್ಕೆ ಎಷ್ಟು ಮೊತ್ತ ಏರಿಸಬಹುದು ಎಂಬ ಬಗ್ಗೆ ಆಲೋಚನೆ ನಡೆಯುತ್ತಿದೆ ಎಂದು ನ್ಯಾಷನಲ್ ಇನ್ಷೂರೆನ್ಸ್ ಅಧ್ಯಕ್ಷ ಹಾಗೂ ಕಾರ್ಯನಿರ್ವಹಣಾ ನಿರ್ದೇಶಕ ಸನತ್ ಹೇಳಿದ್ದಾರೆ.[ಬಂದ್ ದಿನ ಗ್ರಾಹಕರಿಗೆ ಸಿಹಿ ಸುದ್ದಿ ಕೊಟ್ಟ ಎಲ್ ಐಸಿ]

ನ್ಯೂ ಇಂಡಿಯಾ ಕೂಡ ಅದರ ವಿಮೆಯ ಕೆಲವು ವಿಭಾಗದಲ್ಲಿ ಕಂತಿನ ಮೊತ್ತ ಹೆಚ್ಚಿಸುವ ಸಾಧ್ಯತೆ ಇದೆ. ಅಗ್ನಿ ಅವಘಡ, ಗುಂಪು ಆರೋಗ್ಯ ವಿಮೆಯಂಥ ವಿಭಾಗಗಳ ಕಂತು ಹೆಚ್ಚಳವಾಗಲಿದೆ ಎಂದು ಆ ಕಂಪನಿಯ ಮುಖ್ಯಸ್ಥ ಜಿ.ಶ್ರೀನಿವಾಸನ್ ಹೇಳಿದ್ದಾರೆ.

English summary
In view of the consistent losses arising from large claim settlements and other negatives like falling interest rates that will crimp their investment income, non-life insurers are planning to increase the premium rates by 10-15 per cent in certain segments to protect their bottom lines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X