ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಷ್ಠಿತ ನೋಕಿಯಾ ಕಂಪನಿಯಲ್ಲಿ 10 ಸಾವಿರ ಉದ್ಯೋಗ ಕಡಿತ

|
Google Oneindia Kannada News

ಪ್ರತಿಷ್ಠಿತ ಮೊಬೈಲ್ ಉತ್ಪಾದನಾ ಸಂಸ್ಥೆ ನೋಕಿಯಾ ಮುಂದಿನ ಎರಡು ವರ್ಷದಲ್ಲಿ 10 ಸಾವಿರ ಉದ್ಯೋಗ ಕಡಿತ ಮಾಡುವುದಾಗಿ ಘೋಷಿಸಿದೆ. 5ಜಿ ಮೊಬೈಲ್ ಉತ್ಪಾದನೆಯ ಹೊಡೆತದಿಂದ ಕಂಗೆಟ್ಟಿರುವ ನೋಕಿಯಾ ಭವಿಷ್ಯದಲ್ಲಿ ಹೆಚ್ಚಿನ ಸಂಶೋಧನೆಗೆ ಒತ್ತು ನೀಡಲು ನಿರ್ಧರಿಸಿದೆ.

ಹೀಗಾಗಿ ಮುಂದಿನ ಎರಡು ವರ್ಷದಲ್ಲಿ ಕಂಪನಿಯ ಮರುರಚನೆಗೆ ಸುಮಾರು 700 ಮಿಲಿಯನ್ ಯೂರೋ ಹಣ ಹೂಡಿಕೆ ಮಾಡಲಾಗುತ್ತಿದ್ದು, 10 ಸಾವಿರ ಉದ್ಯೋಗಿಗಳನ್ನು ತೆಗೆದು ಹಾಕುವುದು ಅನಿವಾರ್ಯ ಎಂದು ನೋಕಿಯಾ ಸಿಇಒ ಪೆಕ್ಕಾ ಲಂಡ್‌ಮಾರ್ಕ್ ತಿಳಿಸಿದ್ದಾರೆ.

ಭಾರತದಲ್ಲಿ ಫ್ಲಿಪ್ ಕಾರ್ಟಲ್ಲಿ ನೋಕಿಯಾ 5.4 ಮಾರಾಟ ಆರಂಭಭಾರತದಲ್ಲಿ ಫ್ಲಿಪ್ ಕಾರ್ಟಲ್ಲಿ ನೋಕಿಯಾ 5.4 ಮಾರಾಟ ಆರಂಭ

ಕಳೆದ ವರ್ಷವೇ ಸಾವಿರಾರು ಉದ್ಯೋಗಿಗಳನ್ನು ತೆಗೆದು ಹಾಕಲಾಗಿದ್ದು, ಈ ಹತ್ತು ಸಾವಿರವೂ ಮುಂದಿನ ಎರಡು ವರ್ಷಗಳಲ್ಲಿ ಹೆಚ್ಚುವರಿಯಾಗಿ ಉದ್ಯೋಗ ಕಡಿತವಾಗಲಿವೆ. ಸದ್ಯಕ್ಕೆ ನೋಕಿಯಾದಲ್ಲಿ 90 ಸಾವಿರ ಉದ್ಯೋಗಿಗಳಿದ್ದಾರೆ.

Nokia To Cut Up To 10,000 Jobs To Offset 5G Investment

ಈ ಉದ್ಯೋಗ ಕಡಿತವು ಬಹುತೇಕ ಎಲ್ಲಾ ನೋಕಿಯಾ ಕಂಪನಿ ಇರುವ ರಾಷ್ಟ್ರಗಳಿಗೆ ಅನ್ವಯವಾಗಲಿದ್ದು, ಫ್ರಾನ್ಸ್ ಮಾತ್ರ ಹೊರಗುಳಿಯಲಿದೆ. ಏಕೆಂದರೆ ಫ್ರಾನ್ಸ್‌ನಲ್ಲಿ ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ತೆಗೆದುಹಾಕಲಾಗಿತ್ತು.

ನೋಕಿಯಾ ಸಂಸ್ಥೆಯು ತನ್ನ ಭವಿಷ್ಯಕ್ಕಾಗಿ 5 ಜಿ , ಕ್ಲೌಡ್ ಹಾಗೂ ಡಿಜಿಟಲ್ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಹಣ ಹೂಡಿಕೆ ಮಾಡುತ್ತಿದೆ. ಇದಲ್ಲದೆ, ಈ ಬಾರಿ ನೋಕಿಯಾ ಲಾಭವು 21.9 ಬಿಲಿಯನ್ ಯೂರೋದಿಂದ 20.6 ಬಿಲಿಯನ್ ಯೂರೋಗೆ ಇಳಿಕೆಯಾಗುವ ಸಾಧ್ಯತೆ ಇದೆ.

English summary
After taking over the top job last year, Chief Executive Pekka Lundmark has been making changes to recover from product missteps under the company’s previous management that hurt its 5G ambitions and dragged on its shares.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X