ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋಕಿಯಾ ಸಿಬ್ಬಂದಿಗಳಿಗೆ ಕೊವಿಡ್ 19 ಸೋಂಕು, ಘಟಕ ಬಂದ್

|
Google Oneindia Kannada News

ಚೆನ್ನೈ, ಮೇ 27: ಶ್ರೀಪೆರಂಬುದೂರು ಬಳಿಯ ನೋಕಿಯಾ ಕಚೇರಿ ಉತ್ಪಾದನಾ ಘಟಕಕ್ಕೆ ಬಾಗಿಲು ಹಾಕಲಾಗಿದೆ. ನೋಕಿಯಾ ಟೆಲಿಕಾಂ ಗೇರ್ ಉತ್ಪಾದನಾ ಘಟಕದಲ್ಲಿ ಹಲವು ಉದ್ಯೋಗಿಗಳಿಗೆ ಕೊರೋನಾ ವೈರಸ್ ಪಾಸಿಟಿವ್ ಬಂದಿರುವ ಸುದ್ದಿಯಿದೆ.

ಈ ಘಟಕದಲ್ಲಿ ಕನಿಷ್ಠ 42 ಮಂದಿ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಸಂಸ್ಥೆ ಇನ್ನೂ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.

ಚಾಮರಾಜನಗರದಲ್ಲಿ ತೋಳ ಪತ್ತೆಯಾಗಿರುವುದಲ್ಲಿ ವಿಶೇಷ ಏನಿದೆ?ಚಾಮರಾಜನಗರದಲ್ಲಿ ತೋಳ ಪತ್ತೆಯಾಗಿರುವುದಲ್ಲಿ ವಿಶೇಷ ಏನಿದೆ?

ಭಾರತದಲ್ಲಿ ಸೋಂಕು ಹರಡದಂತೆ ಲಾಕ್ ಡೌನ್ ಹೇರಿದ ಬಳಿಕ ನೋಕಿಯಾ ಘಟಕ ಕೂಡಾ ಸ್ಥಗಿತಗೊಂಡಿತ್ತು. ಕಂಪನಿಯಲ್ಲಿ ಸಾಮಾಜಿಕ ದೂರ ಮತ್ತು ಕ್ಯಾಂಟೀನ್ ಸೌಲಭ್ಯಗಳಿಗೆ ಬದಲಾವಣೆಳನ್ನು ಜಾರಿಗೆ ತಂದು ಕಾರ್ಯ ನಿರ್ವಹಿಸಲಾಗುತ್ತಿತ್ತು. ಕಳೆದ ವಾರ ಆರಂಭವಾದ ಕಾರ್ಖಾನೆಯನ್ನು ಈಗ ಮುಚ್ಚಲಾಗಿದೆ. ಮುಂದಿನ ದಿನಗಳಲ್ಲಿ ಕೆಲವೇ ಕೆಲವು ಸಿಬ್ಬಂದಿಗಳು ಕಾರ್ಯ ನಿರ್ವಹಿಸುವ ವ್ಯವಸ್ಥೆಯೊಂದಿಗೆ ಮತ್ತೆ ಘಟಕ ಆರಂಭಿಸುವ ಭರವಸೆಯನ್ನು ಸಂಸ್ಥೆ ನೀಡಿದೆ.

Nokia shuts plant in south India after 42 test positive for coronavirus

ಒಂದೊಮ್ಮೆ ಚೆನ್ನೈ ಘಟಕದಲ್ಲಿ ಮೂರೂ ಶಿಫ್ಟ್ ಮುಖಾಂತರ 16-20 ದಶಲಕ್ಷ ಮೊಬೈಲ್ ಸೆಟ್ ಗಳನ್ನು ಉತ್ಪಾದಿಸಲಾಗುತ್ತಿತ್ತು. ಕೊನೆ ಕೊನೆಗೆ ಅದೀಗ 40 ಲಕ್ಷಕ್ಕೆ ಕುಸಿದಿತ್ತು. ನೋಕಿಯಾವನ್ನು ಮೈಕ್ರೋಸಾಫ್ಟ್ ಸಂಸ್ಥೆ ಖರೀದಿಸಿದ ಬಳಿಕ ಈ ಘಟಕದಲ್ಲಿದ್ದ ಸಾವಿರಾರು ಸಿಬ್ಬಂದಿಗೆ ಲಕ್ಷಾಂತರ ರುಪಾಯಿ ಪ್ಯಾಕೇಜ್ ನೀಡಿ ಸ್ವಯಂ ನಿವೃತ್ತಿ ಪಡೆಯಲು ಉತ್ತೇಜಿಸಲಾಯಿತು. ಮೈಕ್ರೋಸಾಫ್ಟ್ ಕೈಬಿಟ್ಟು ತೆರಳಿದ ಬಳಿಕ ಮತ್ತೆ ಸ್ವತಂತ್ರವಾಗಿ ಬೆಳೆದ ನೋಕಿಯಾ ಈ ಘಟಕವನ್ನು ಉಳಿಸಿಕೊಂಡು ಬಂದಿದೆ.

ದೆಹಲಿಯಲ್ಲಿರುವ ಒಪ್ಪೋ ಮೊಬೈಲ್ ಉತ್ಪಾದನಾ ಘಟಕ ಕೂಡಾ ಕೊರೊನಾ ಸೋಂಕಿಗೆ ಸಿಲುಕಿ ಬಂದ್ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Nokia shuts plant in south India. Nokia did not disclose how many workers at the plant in Sriperumbudur in the southern state of Tamil Nadu tested positive, but a source familiar with the matter said they were at least 42.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X