ತ್ವರಿತವಾಗಿ 10 ಲಕ್ಷ ಗ್ರಾಹಕರನ್ನು ಸೆಳೆದ ನೋಕಿಯಾ 6
ಬೆಂಗಳೂರು, ಆಗಸ್ಟ್ 10: ನೋಕಿಯಾ 6 ಸ್ಮಾರ್ಟ್ ಫೋನ್ ಗಾಗಿ ಪ್ರೀ ಬುಕ್ಕಿಂಗ್ ಮೂಲಕ 10 ಲಕ್ಷ ಗ್ರಾಹಕರು ನೋಂದಣಿ ಮಾಡಿದ್ದಾರೆ ಎಂದು ಅಧಿಕೃತ ಮಾರಾಟಗಾರ ಸಂಸ್ಥೆ ಅಮೆಜಾನ್ ಇಂಡಿಯಾವು ಗುರುವಾರದಂದು ಪ್ರಕಟಿಸಿದೆ.
ನೋಕಿಯಾ 3,5 ಹಾಗೂ 6 ಮಾರಾಟ ಯಾವಾಗ?
ಆಗಸ್ಟ್ 23ರಿಂದ ನೋಕಿಯಾ 6 ಖರೀದಿಗೆ ಲಭ್ಯವಿದ್ದು, 14,999 ರು ಬೆಲೆ ನಿಗದಿಯಾಗಿದೆ. ಭಾರತೀಯರ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ನೋಕಿಯಾ ತನ್ನ ಆಂಡ್ರಾಯ್ಡ್ ಫೋನ್ ಗಳನ್ನು ಜೂನ್ 13ರಂದು ಪರಿಚಯಿಸಿತ್ತು.
ಆದರೆ, ಎಚ್ಎಂಡಿ ಸಂಸ್ಥೆ ಹೊರ ತಂದಿರುವ ನೋಕಿಯಾ ಬ್ರ್ಯಾಂಡ್ ಫೋನ್ ಗಳು ಯಾವಾಗ ಗ್ರಾಹಕರ ಕೈ ಸೇರಲಿದೆ? ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.
ನೋಕಿಯಾ 6 ಫೋನ್
* ನೋಕಿಯಾ 6 ಫೋನ್ ಬೆಲೆ 14,999 ರೂಪಾಯಿ,
* ಮಾರಾಟ ದಿನಾಂಕ ಆಗಸ್ಟ್ 23(ಪ್ರೀ ಬುಕ್ಕಿಂಗ್ ಮೂಲಕ ನೋಂದಾಯಿಸಿರಬೇಕು).
* ಜುಲೈ 14ರಿಂದ ಮೊದಲ ಸುತ್ತಿನ ನೋಂದಣಿ ಆರಂಭ
* 16ಎಂಪಿ ಕೆಮೆರಾ, 8 ಎಂಪಿ ಕೆಮರಾ, Li Ion 3000ಎಂಎಎಚ್ ಬ್ಯಾಟರಿ.
* ಡುಯಲ್ ಸಿಮ್/ನ್ಯಾನೊ ಸಿಮ್, 4ಜಿ, ಒಟಿಜಿ, ಗೊರಿಲ್ಲಾ ಗ್ಲಾಸ್,
* 5.5 ಇಂಚ್ ಡಿಸ್ ಪ್ಲೇ, ಆಂಡ್ರಾಯ್ಡ್ 7.1.1
* ಆಕ್ಟಾ ಕೋರ್ ಪ್ರೊಸೆಸರ್, 3/4 ಜಿಬಿ RAM, 32/64 ಜಿಬಿ ಮೆಮೋರಿ
* ಕಪ್ಪು, ನೀಲಿ ಹಾಗೂ ಸಿಲ್ವರ್ ಬಣ್ಣಗಳಲ್ಲಿ ಈ ಫೋನ್ ಲಭ್ಯವಿದೆ.
ದೆಹಲಿ ಎನ್ ಸಿಆರ್, ಮುಂಬೈ, ಬೆಂಗಳೂರು, ಚೆನ್ನೈ, ಚಂಡೀಗಢ, ಜೈಪುರ, ಕೋಲ್ಕತ್ತಾ, ಲಕ್ನೋ, ಇಂದೋರ್, ಹೈದ್ರಾಬಾದ್, ಪುಣೆ, ಅಹಮದಾಬಾದ್ ಹಾಗೂ ಕ್ಯಾಲಿಕಟ್ ನಲ್ಲಿ ಪ್ರೀ ಬುಕ್ಕಿಂಗ್ ಲಭ್ಯವಿತ್ತು.