ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈಗೆಟುಕುವ ದರದಲ್ಲಿ ನೋಕಿಯಾ 5.4 ಮತ್ತು ನೋಕಿಯಾ 3.4 ಬಿಡುಗಡೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 10: ಎಚ್‍ಎಂಡಿ ಗ್ಲೋಬಲ್ ಅಧೀನದ ನೋಕಿಯಾ ಇಂದು ನೋಕಿಯಾ 5.4ಮ ನೋಕಿಯಾ 3.5 ಮತ್ತು ನೋಕಿಯಾ ಪವರ್ ಈಯರ್ ಬಡ್ಸ್ ಲೈಟ್‍ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಕ್ವಾಲ್‍ಕಾಮ್ ಸ್ನ್ಯಾಪ್‍ಡ್ರಾಗನ್ 662 ಪ್ರೊಸೆಸರ್ ಹೊಂದಿರುವ ನೋಕಿಯಾ 5.4, ಹೆಚ್ಚು ವೇಗ, ಸುಧೀರ್ಘ ಬ್ಯಾಟರಿ ಲೈಫ್, ಉತ್ತಮ ಇಮೇಜಿಂಗ್ ಮತ್ತು ಹೆಚ್ಚಿನ ಕ್ಷಮತೆಯನ್ನು ಒದಗಿಸುತ್ತದೆ. ನೋಕಿಯಾ 5.4, 48 ಮೆಗಾಪಿಕ್ಸೆಲ್ ಕ್ವಾಡ್ ಕ್ಯಾಮೆರಾ ಮತ್ತು 16ಎಂಪಿ ಮುಂಬದಿ ಕ್ಯಾಮೆರಾ ಹೊಂದಿದ್ದು, ಇದು ವಿಶೇಷವಾಗಿ 'ಸಿನಿಮಾ' ಕಾರ್ಯನಿರ್ವಹಣೆಯ ವಿಶೇಷತೆಯನ್ನು ಹೊಂದಿದೆ. ಇದು 24ಎಫ್‍ಪಿಎಸ್ (ಚಿತ್ರೋದ್ಯಮ ಮಾನದಂಡ)ದ ಚಿತ್ರಗಳನ್ನು ಸೆರೆ ಹಿಡಿಯಲಿದ್ದು, ಇದು ಬಳಕೆದಾರರು 21:9 ಸಿನಿಮ್ಯಾಟಿಕ್ ವಿಧದಲ್ಲಿ ಚಿತ್ರಗಳನ್ನು ಕ್ಲಿಕ್ಕಿಸಲು ಅನುವು ಮಾಡಿಕೊಡುತ್ತದೆ.

 ನೋಕಿಯಾ 2.4 ವಿಶೇಷ: ಎರಡು ದಿನಗಳ ಬ್ಯಾಟರಿ, AI ಚಾಲಿತ ಕ್ಯಾಮೆರಾ ನೋಕಿಯಾ 2.4 ವಿಶೇಷ: ಎರಡು ದಿನಗಳ ಬ್ಯಾಟರಿ, AI ಚಾಲಿತ ಕ್ಯಾಮೆರಾ

ಓಝೆಡ್‍ಓ ಸ್ಪೇಷಿಯಲ್ ಆಡಿಯೊದೊಂದಿಗೆ ನೋಕಿಯಾ 5.4, ಪ್ರೀತಿಯ ಪ್ರಾಜೆಕ್ಟ್‍ಗಳನ್ನು ಸೆರೆಹಿಡಯಲು ಅಥವಾ ಅಮೂಲ್ಯ ಫಿಲ್ಮಿ ಕ್ಷಣಗಳ ಸುಲಲಿತ ಚಿತ್ರೀಕರಣದ ಅನುಭವಕ್ಕಾಗಿ ಉದಯೋನ್ಮುಖ ವಿಡಿಯೊಗ್ರಾಫರ್ ಗಳಿಗೆ ಪರಿಪೂರ್ಣ ಪಾಲುದಾರ ಎನಿಸಲಿದೆ. ಇದರ ಜತೆಗೆ ತಲ್ಲೀನಗೊಳಿಸುವಂಥ 6.39 ಇಂಚುಗಳು (16.23 ಸೆಂಟಿಮೀಟರ್) ಎಚ್‍ಡಿ+ ಪಂಚ್‍ಹೋಲ್ ಪ್ರದರ್ಶಕ ವ್ಯವಸ್ಥೆಯು ದೊಡ್ಡ ಪರದೆಯನ್ನು ಆಸ್ವಾದಿಸಲು ಅನುವು ಮಾಡಿಕೊಡುತ್ತದೆ. ಕೇವಲ ಈ ಫೋನ್ ಸಾಧನದ ಮೂಲಕ ಹೆಚ್ಚು ಹೆಚ್ಚು ಮಂದಿ ತಮ್ಮ ಒಲವನ್ನು ನಗದಾಗಿ ಪರಿವರ್ತಿಸಿಕೊಳ್ಳಲು ಅಥವಾ ತಮ್ಮ ಕುಟುಂಬ ಕ್ಷಣಗಳನ್ನು ಸೆರೆ ಹಿಡಿಯಲು ಸಾಧ್ಯವಾಗಲಿದ್ದು, ಇದಕ್ಕೆ ನೋಕಿಯಾ 5.4 ಪರಿಪೂರ್ಣ ಪಾಲುದಾರ ಎನಿಸಲಿದೆ.

Nokia 5.4, Nokia 3.4 affordable smartphones launched in India

ನೋಕಿಯಾ 3.4 ಅತ್ಯಂತ ಶಕ್ತಿಶಾಲಿ ಪ್ರೊಸೆಸರ್ ಎನಿಸಿದ ಹೊಚ್ಚಹೊಸ ಕ್ವಾಲ್‍ಕಾಮ್ ಸ್ನ್ಯಾಪ್‍ಡ್ರಾಗನ್ 460 ವ್ಯವಸ್ಥೆಯನ್ನು ಒಳಗೊಂಡಿದ್ದು, ಹೆಚ್ಚು ಕೈಗೆಟುಕುವ ಬೆಲೆಯ ಮಟ್ಟದಲ್ಲಿ ಪ್ರಬಲ ಕ್ಷಮತೆಯ ಮೇಲ್ದರ್ಜೆಯ ಸೌಲಭ್ಯವನ್ನು ಒಳಗೊಂಡಿದೆ. 6.39 ಇಂಚುಗಳ (16.23 ಸೆಂಟಿಮೀಟರ್) ಎಚ್‍ಡಿ+ ಪ್ರದರ್ಶಕ ವ್ಯವಸ್ಥೆಯನ್ನು ಹೊಂದಿದೆ. ಈ ಸರಣಿಯಲ್ಲೇ ಪಂಚ್‍ಹೋಲ್ ಪ್ರದರ್ಶಕ ವ್ಯವಸ್ಥೆಯನ್ನು ಹೊಂದಿರುವ ಮೊಟ್ಟಮೊದಲ ಸ್ಮಾರ್ಟ್‍ಫೋನ್ ಎನಿಸಿದೆ. ಶಕ್ತಿಶಾಲಿ ಹಿಂಬದಿ ತ್ರಿವಳಿ ಕ್ಯಾಮೆರಾವನ್ನೂ ಒಳಗೊಂಡಿದೆ. ಹೆಚ್ಚು ವಿಶಾಲವಾದ ಮಸೂರ ಮತ್ತು ಎಐ ಇಮೇಜಿಂಗ್ ಸೌಲಭ್ಯ ಹೊಂದಿದೆ. ಗೂಗಲ್ ಪಾಡ್‍ಕ್ಯಾಸ್ಟ್ ಜೊತೆಗೆ ನೋಕಿಯಾ 3.4 ಹೊಂದಾಣಿಕೆ ಇದೆ.

ನೋಕಿಯಾ 5.4 ಫೆಬ್ರವರಿ 17ರಿಂದ ನೋಕಿಯಾ ವೆಬ್ ತಾಣ ಹಾಗೂ ಫ್ಲಿಫ್‍ಕಾರ್ಟ್‍ನಲ್ಲಿ ಲಭ್ಯ.ನೋಕಿಯಾ 3.4 ಫೋನ್ ಫೆಬ್ರವರಿ 10ರಿಂದ ಸಿಗಲಿದೆ.

ಭಾರತದ ಮಾರುಕಟ್ಟೆಗೆ ನೊಕಿಯಾ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದ ಫ್ಲಿಪ್‌ಕಾರ್ಟ್ಭಾರತದ ಮಾರುಕಟ್ಟೆಗೆ ನೊಕಿಯಾ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದ ಫ್ಲಿಪ್‌ಕಾರ್ಟ್

ಜಿಯೊ ಸಂಪರ್ಕ ಹೊಂದಿರುವ ನೋಕಿಯಾ 3.4 ಗ್ರಾಹಕರು 4000 ರೂಪಾಯಿ ಮೌಲ್ಯದ ವಿಶೇಷ ಲಾಭಗಳಿಗೆ ಅರ್ಹರಾಗಿರುತ್ತಾರೆ. ಈ ಪ್ರಯೋಜನಗಳಲ್ಲಿ 349 ರೂಪಾಯಿ ಪ್ಲಾನ್‍ನ ಪ್ರಿಪೆಯ್ಡ್ ರೀಚಾರ್ಜ್ ಮೇಲೆ 2000 ರೂಪಾಯಿ ಇನ್‍ಸ್ಟಂಟ್ ಕ್ಯಾಶ್‍ಬ್ಯಾಕ್ ಮತ್ತು ಪಾಲುದಾರರಿಂದ 2000 ರೂಪಾಯಿ ಮೌಲ್ಯದ ವೋಚರ್‍ಗಳು ಸೇರಿರುತ್ತವೆ. ಈ ಆಫರ್‍ಗಳು ಹೊಸ ಹಾಗೂ ಹಾಲಿ ಇರುವ ಜಿಯೊ ಗ್ರಾಹಕರಿಗೆ ಅನ್ವಯವಾಗುತ್ತವೆ.

ನೋಕಿಯಾ ಪವರ್ ಈಯರ್‍ಬಡ್ ಲೈಟ್, ಪ್ರಿಮಿಯಮ್ ನೊರ್ಯಾಡಿಕ್ ವಿನ್ಯಾಸವನ್ನು ಹೊಂದಿದ್ದು, ಜೇಬಿನ ಗಾತ್ರದ ಚಾಜಿರ್ಂಗ್ ಕೇಸ್‍ಗಳನ್ನು ಹೊಂದಿರುತ್ತದೆ. 35 ಗಂಟೆಗಳ ನಿರಂತರ ಪ್ಲೇಟೈಮ್ ಹೊಂದಿದ್ದು, ಐಪಿಎಕ್ಸ್7 ನೀರು ನಿರೋಧಕ ರೇಟಿಂಗ್ ಹೊಂಇದ್ದು, ಇದು ಬೆವರು ಮತ್ತು ನೀರಿನ ನಿರೋಧಕ ಶಕ್ತಿಯನ್ನು ಹೊಂದಿದ್ದು, 30 ನಿಮಿಷಗಳವರೆಗೆ ಒಂದು ಮೀಟರ್ ನೀರನ್ನು ಕೂಡಾ ತಡೆದುಕೊಳ್ಳಬಹುದಾಗಿದೆ.

English summary
The much-awaited, accessible Nokia 5.4 and Nokia 3.4 launch in India, alongside Nokia Power Earbuds Lite.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X