ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

22 ಗಂಟೆ ಬ್ಯಾಟರಿ ಲೈಫ್ ನೊಂದಿಗೆ ನೋಕಿಯಾ 3310 ರೀ ಎಂಟ್ರಿ!

ಫಿನ್ಲೆಂಡ್ ಮೂಲದ ಮೊಬೈಲ್ ಸಂಸ್ಥೆ ನೋಕಿಯಾ ಮತ್ತೆ ಬಂದಿದೆ. ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ನೋಕಿಯಾ ತನ್ನ ನೆಚ್ಚಿನ 3310 ಮಾಡೆಲ್ ಫೋನನ್ನು ಮತ್ತೆ ಮಾರುಕಟ್ಟೆಗೆ ತಂದಿದೆ.

By Mahesh
|
Google Oneindia Kannada News

ಬೆಂಗಳೂರು, ಫೆಬ್ರವರಿ 27: ಫಿನ್ಲೆಂಡ್ ಮೂಲದ ಮೊಬೈಲ್ ಸಂಸ್ಥೆ ನೋಕಿಯಾ ಮತ್ತೆ ಬಂದಿದೆ. ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ನೋಕಿಯಾ ತನ್ನ ನೆಚ್ಚಿನ 3310 ಮಾಡೆಲ್ ಫೋನನ್ನು ಮತ್ತೆ ಮಾರುಕಟ್ಟೆಗೆ ತಂದಿದೆ.

ಸುಮಾರು 17 ವರ್ಷಗಳ ಬಳಿಕ ಬಂದಿರುವ 3310 ಹ್ಯಾಂಡ್ ಸೆಟ್ ಈಗ 22 ಗಂಟೆಗಳ ಕಾಲ ಬ್ಯಾಟರಿ ಲೈಫ್ ಹೊಂದಿರುತ್ತದೆ ಎಂದು ನೋಕಿಯಾ ಸಂಸ್ಥೆ ಪ್ರಕಟಿಸಿದೆ.[ನೋಕಿಯಾ ಫೋನ್ ಮಾತ್ರ ಇದೆ ಎಂದ ನೆಹ್ರಾ ಕಿಚಾಯಿಸಿದ್ರು!]

Nokia 3310 makes a comeback with 22 hours of battery

ನೋಕಿಯಾ 3310 ಹೊಸ ಹ್ಯಾಂಡ್ ಸೆಟ್ ಬೆಲೆ ಸರಿ ಸುಮಾರು 3,500 ರು ಆಗಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಸದ್ಯಕ್ಕೆ ಭಾರತಕ್ಕೆ ಇನ್ನೂ ಎಂಟ್ರಿ ಕೊಟ್ಟಿಲ್ಲ. ಮೊಬೈಲ್ ವರ್ಲ್ಡ್ ಕಾಂಗ್ರೆಸ್ ನಲ್ಲಿ ಮುಂಬರುವ ಉತ್ಪನ್ನಗಳನ್ನು ನೋಕಿಯಾ ಪ್ರದರ್ಶನಕ್ಕಿಟ್ಟಿದೆ.

ನೋಕಿಯಾದ ಉತ್ಪನ್ನಗಳಾದ ನೋಕಿಯಾ 3310, ನೋಕಿಯಾ 6, ನೋಕಿಯಾ 5 ಹಾಗೂ ನೋಕಿಯಾ 3 ಎಲ್ಲವೂ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಭಾರತದಲ್ಲಿ ಲಭ್ಯವಾಗಲಿದೆ.[ನೋಕಿಯಾ ಹೆಸರು ಕೈಬಿಟ್ಟ ಮೈಕ್ರೋಸಾಫ್ಟ್]

Nokia 3310

ಜಾಗತಿಕವಾಗಿ ನೋಕಿಯಾ 3310 ಮಾರಾಟದ ಬೆಲೆ 49 ಯುರೋನಷ್ಟಿರಲಿದೆ ಎಂದು ಎಚ್ ಎಂಡಿ ಗ್ಲೋಬಲ್ ಮುಖ್ಯ ಮಾರ್ಕೆಟಿಂಗ್ ಆಫೀಸರ್ ಪೆಕ್ಕಾ ರಂಟಾಲ ಅವರು ಹೇಳಿದ್ದಾರೆ.

2000 ದಿಂದ 20005ರ ತನಕ ಸರಿ ಸುಮಾರು 126 ಮಿಲಿಯನ್ ಹ್ಯಾಂಡ್ ಸೆಟ್ ಮಾರಾಟ ಮಾಡಿದ ದಾಖಲೆ ಹೊಂದಿರುವ ನೋಕಿಯಾ 3310ಕ್ಕೆ ಸರಿಸಾಟಿಯಾದ ಮತ್ತೊಂದು ಹ್ಯಾಂಡ್ ಸೆಟ್ ಇರಲಿಲ್ಲ. 2005ರ ತನಕ ಜಾಗತಿಕವಾಗಿ ಈ ಹ್ಯಾಂಡ್ ಸೆಟ್ ಮರೆಯಾಯಿತು.

ಹೊಸ ನೋಕಿಯಾ 3310ನಲ್ಲಿ ಡುಯಲ್ ಸಿಮ್ 2.5ಜಿ, 1200 mAH ಬ್ಯಾಟರಿ, 22 ಗಂಟೆಗಳ ಕಾಲ ನಿರಂತರ ಟಾಕ್ ಟೈಮ್(ಫುಲ್ ಚಾರ್ಜ್ ಆದ ಮೊಬೈಲ್) 2.4 ಇಂಚಿನ ಡಿಸ್ ಪ್ಲೇ, 2 ಮೆಗಾ ಪಿಕ್ಸಲ್ ಕೆಮರಾ( ಎಲ್ ಇಡಿ ಫ್ಲಾಶ್ ಸಹಿತ), ಬ್ಲೂಟೂತ್, ಯುಎಸ್ ಬಿ ಕನೆಕ್ಷನ್, 16 ಎಂಬಿ ಆಂತರಿಕ ಮೆಮೊರಿ ಹಾಗೂ ಬಾಹ್ಯ ಮೆಮೋರಿ 32 ಜಿಬಿ ತನಕ ವಿಸ್ತರಣೆ ಸೌಲಭ್ಯ ಹೊಂದಿದೆ.

English summary
Finnish mobile device player Nokia is in reboot mode as it gets ready to bring to India its 17-year-old iconic Nokia 3310 handset for about Rs 3,500, along with its Android smartphones, next quarter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X