ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋಕಿಯಾ 3310 ಮೇ 18ಕ್ಕೆ ರಿಲೀಸ್ ನಿಮ್ಮ ಪ್ರತಿಕ್ರಿಯೆ?

ಅತ್ಯಂತ ಜನಪ್ರಿಯ ಮೊಬೈಲ್ ಹ್ಯಾಂಡ್ ಸೆಟ್ ಎಲ್ಲೋ ಚೀನಾದಲ್ಲಿ ರೀ ಲಾಂಚ್ ಆಯಿತಂತೆ ಎಂಬ ಸುದ್ದಿ ಕೇಳಿದಾಗಿನಿಂದಲೂ ಎಲ್ಲರದ್ದು ಒಂದೇ ಪ್ರಶ್ನೆ ಭಾರತದಲ್ಲಿ ಯಾವಾಗ ರಿಲೀಸ್? ರೇಟ್ ಎಷ್ಟು? ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ

By Mahesh
|
Google Oneindia Kannada News

ಬೆಂಗಳೂರು, ಮೇ 16: ನೋಕಿಯಾ 3310 ಹೆಸರು ಕೇಳಿದರೆ ಸಾಕು, ಭಾರತೀಯರಿಗೆ ಏನೋ ರೋಮಾಂಚನವಾಗುತ್ತದೆ. ಹಳೆ ನೆನಪುಗಳು ಕಣ್ಮುಂದೆ ಹಾದು ಹೋಗುತ್ತವೆ. ಅತ್ಯಂತ ಜನಪ್ರಿಯ ಮೊಬೈಲ್ ಹ್ಯಾಂಡ್ ಸೆಟ್ ಎಲ್ಲೋ ಚೀನಾದಲ್ಲಿ ರೀ ಲಾಂಚ್ ಆಯಿತಂತೆ ಎಂಬ ಸುದ್ದಿ ಕೇಳಿದಾಗಿನಿಂದಲೂ ಎಲ್ಲರದ್ದು ಒಂದೇ ಪ್ರಶ್ನೆ ಭಾರತದಲ್ಲಿ ಯಾವಾಗ ರಿಲೀಸ್? ರೇಟ್ ಎಷ್ಟು?

ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ನೋಕಿಯಾ ಸಂಸ್ಥೆಯ ಹೊಸ ಫೋನ್‌ ಹ್ಯಾಂಡ್ ಸೆಟ್ ಗಳು ಮೇ 18 ರಿಂದ ಭಾರತೀಯ ಮಾರುಕಟ್ಟೆಯಲ್ಲಿ ದೊರೆಯಲಿದೆ. ಮೊದಲಿಗೆ ಅತ್ಯಂತ ಜನಪ್ರಿಯ ಫೋನ್, ನೋಕಿಯಾ 3310 ಹ್ಯಾಂಡ್ ಸೆಟ್ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಎಚ್ ಎಂ ಡಿ ಗ್ಲೋಬಲ್ ಸಂಸ್ಥೆ ಘೋಷಿಸಿದೆ.[ನೋಕಿಯಾ ಫೋನ್ ಮಾತ್ರ ಇದೆ ಎಂದ ನೆಹ್ರಾ ಕಿಚಾಯಿಸಿದ್ರು!]

ಮೊಬೈಲ್ ವರ್ಲ್ಡ್ ಕಾಂಗ್ರೆಸ್ ನಲ್ಲಿ ಮುಂಬರುವ ಉತ್ಪನ್ನಗಳನ್ನು ಪ್ರದರ್ಶನಕ್ಕಿಟ್ಟಿದ್ದ ನೋಕಿಯಾ, ನಂತರ ಕೆಲ ಉತ್ಪನ್ನಗಳನ್ನು ಚೀನಾ ಮಾರುಕಟ್ಟೆಯಲ್ಲಿ ಮೊದಲಿಗೆ ರಿಲೀಸ್ ಮಾಡಿತ್ತು. ನೋಕಿಯಾದ ಉತ್ಪನ್ನಗಳಾದ ನೋಕಿಯಾ 3310, ನೋಕಿಯಾ 6, ನೋಕಿಯಾ 5 ಹಾಗೂ ನೋಕಿಯಾ 3 ಎಲ್ಲವೂ ಈಗ ಭಾರತದಲ್ಲಿ ಲಭ್ಯವಾಗಲಿದೆ. ನೋಕಿಯಾ 3310 ಬಗ್ಗೆ ಟ್ವಿಟ್ಟರ್ ನಲ್ಲಿ ಫಾನ್ಸ್ ಏನೆಲ್ಲ ಹೇಳುತ್ತಿದ್ದಾರೆ ಮುಂದೆ ಓದಿ...[ನೋಕಿಯಾ ಹೆಸರು ಕೈಬಿಟ್ಟ ಮೈಕ್ರೋಸಾಫ್ಟ್]

2005ರ ತನಕ ಜನಪ್ರಿಯತೆ

2005ರ ತನಕ ಜನಪ್ರಿಯತೆ

2000 ದಿಂದ 20005ರ ತನಕ ಸರಿ ಸುಮಾರು 126 ಮಿಲಿಯನ್ ಹ್ಯಾಂಡ್ ಸೆಟ್ ಮಾರಾಟ ಮಾಡಿದ ದಾಖಲೆ ಹೊಂದಿರುವ ನೋಕಿಯಾ 3310ಕ್ಕೆ ಸರಿಸಾಟಿಯಾದ ಮತ್ತೊಂದು ಹ್ಯಾಂಡ್ ಸೆಟ್ ಇರಲಿಲ್ಲ. 2005ರ ತನಕ ಜನಪ್ರಿಯತೆ ಉಳಿಸಿಕೊಂಡು ನಂತರ ಜಾಗತಿಕವಾಗಿ ಈ ಹ್ಯಾಂಡ್ ಸೆಟ್ ಮರೆಯಾಯಿತು.

22 ಗಂಟೆಗಳ ಕಾಲ ಬ್ಯಾಟರಿ ಲೈಫ್

ಫಿನ್ಲೆಂಡ್ ಮೂಲದ ಮೊಬೈಲ್ ಸಂಸ್ಥೆ ನೋಕಿಯಾ ಮತ್ತೆ ಬಂದಿದೆ. ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ನೋಕಿಯಾ ತನ್ನ ನೆಚ್ಚಿನ 3310 ಮಾಡೆಲ್ ಫೋನನ್ನು ಮತ್ತೆ ಮಾರುಕಟ್ಟೆಗೆ ತಂದಿದೆ. ಈಗ 22 ಗಂಟೆಗಳ ಕಾಲ ಬ್ಯಾಟರಿ ಲೈಫ್ ಹೊಂದಿರುತ್ತದೆ ಎಂಬ ಸುದ್ದಿ ತಿಳಿದ ಬಳಿಕ ಬಂದ ಟ್ವೀಟ್ ನೋಡಿ

ಹಳೆ ಹಾಗೂ ಹೊಸ ನೋಕಿಯಾ

ನೋಕಿಯಾ 3310 ಹಳೆ ಹಾಗೂ ಹೊಸ ಹ್ಯಾಂಡ್ಸೆಟ್ ಹೋಲಿಕೆ ಮಾಡಲಾಗುತ್ತಿದೆ. ಜನಕ್ಕೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಬಾಲಿವುಡ್ ತಾರೆಗಳನ್ನು ಬಳಸಿಕೊಂಡು ತಮಾಷೆ ಮಾಡಲಾಗುತ್ತಿದೆ. ಈ ಚಿತ್ರದಲ್ಲಿ ರಣವೀರ್ ಸಿಂಗ್ ಅವತಾರ ನೋಡಿ

ವೋಟ್ ಮಾಡಿ ತಿಳಿಸಿ

ನೋಕಿಯಾ 3310 ಹೊಸ ಹ್ಯಾಂಡ್ ಸೆಟ್ ಬೆಲೆ ಸರಿ ಸುಮಾರು 3,500 ರು ಆಗಬಹುದು ಎಂದು ಅಂದಾಜಿಸಲಾಗಿತ್ತು. ಜಾಗತಿಕವಾಗಿ ನೋಕಿಯಾ 3310 ಮಾರಾಟದ ಬೆಲೆ 49 ಯುರೋನಷ್ಟಿದೆ. ಮೇ 18 ರಿಂದ ಮಳಿಗೆಗಳಲ್ಲಿ(ಆನ್ ಲೈನ್ ಇನ್ನೂ ಬಂದಿಲ್ಲ) ಖರೀದಿಗೆ ಲಭ್ಯವಿದೆ. ನೀವು ಏನ್ ಮಾಡ್ತೀರಾ? ವೋಟ್ ಮಾಡಿ ತಿಳಿಸಿ

ನೋಕಿಯಾ 3310 ಇಸ್ ಕಿಂಗ್

ನೋಕಿಯಾ 3310 ಹ್ಯಾಂಡ್ ಸೆಟ್ ಅನ್ನು ಕಿಂಗ್ ಆಫ್ ಮೊಬೈಲ್ ಎಂದು ಏಕೆ ಕರೆಯಲಾಗುತ್ತದೆ. ಏನೆಲ್ಲ ಮಾಡ್ಬಹುದು ಎಂಬುದನ್ನು ವಿವರಿಸಿರುವ ಟ್ವೀಟ್.

ಹೊಸ ನೋಕಿಯಾ 3310

ಹೊಸ ನೋಕಿಯಾ 3310ನಲ್ಲಿ ಡುಯಲ್ ಸಿಮ್ 2.5ಜಿ, 1200 mAH ಬ್ಯಾಟರಿ, 22 ಗಂಟೆಗಳ ಕಾಲ ನಿರಂತರ ಟಾಕ್ ಟೈಮ್(ಫುಲ್ ಚಾರ್ಜ್ ಆದ ಮೊಬೈಲ್) 2.4 ಇಂಚಿನ ಡಿಸ್ ಪ್ಲೇ, 2 ಮೆಗಾ ಪಿಕ್ಸಲ್ ಕೆಮರಾ( ಎಲ್ ಇಡಿ ಫ್ಲಾಶ್ ಸಹಿತ), ಬ್ಲೂಟೂತ್, ಯುಎಸ್ ಬಿ ಕನೆಕ್ಷನ್, 16 ಎಂಬಿ ಆಂತರಿಕ ಮೆಮೊರಿ ಹಾಗೂ ಬಾಹ್ಯ ಮೆಮೋರಿ 32 ಜಿಬಿ ತನಕ ವಿಸ್ತರಣೆ ಸೌಲಭ್ಯ ಹೊಂದಿದೆ.

English summary
HMD Global, a Finish manufacturer with the exclusive rights to market the Nokia brand, is releasing the Nokia 3310 in India on May 18. Here are the twitter reaction about te iconic phone handset.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X