ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋಕಿಯಾ 2.4 ವಿಶೇಷ: ಎರಡು ದಿನಗಳ ಬ್ಯಾಟರಿ, AI ಚಾಲಿತ ಕ್ಯಾಮೆರಾ

|
Google Oneindia Kannada News

ಬೆಂಗಳೂರು, ನವೆಂಬರ್ 26: ನೋಕಿಯಾ ಫೋನ್ ಉತ್ಪಾದನಾ ಗೃಹವಾದ ಎಚ್‍ಎಂಡಿ ಗ್ಲೋಬಲ್ ಇಂದು ವ್ಯಾಪಕವಾಗಿ ಯಶಸ್ವಿಯಾಗಿರುವ ನೋಕಿಯಾ-2 ಸರಣಿಯಲ್ಲಿ 'ನೋಕಿಯಾ 2.4' ಭಾರತದಲ್ಲಿ ಬಿಡುಗಡೆ ಮಾಡಿರುವುದಾಗಿ ಘೋಷಿಸಿದೆ.

ಮುಂದಿನ ಪೀಳಿಗೆಯ ನೋಕಿಯಾ 2, ನೈಟ್ ಮೋಡ್ ಮತ್ತು ಪೋಟ್ರ್ರೈಟ್ ಮೋಡ್‍ಗಳು ಸೇರಿದಂತೆ ಅತ್ಯಾಧುನಿಕ ಎಐ ಇಮೇಜಿಂಗ್ ವಿಶೇಷತೆಗಳನ್ನು ಹೊಂದಿದೆ. ಇದು ನೀವು ಸೆರೆ ಹಿಡಿಯುವ ಫೋಟೊವನ್ನು ಮುಂದಿನ ಸ್ತರಕ್ಕೆ ಒಯ್ಯಲು ನೆರವಾಗಲಿದೆ. ದೊಡ್ಡ ಮತ್ತು ಹೆಚ್ಚು ವಿಸ್ತಾರವಾದ ಚಿತ್ರವನ್ನು ನೋಡಬಹುದಾಗಿದ್ದು, ದೊಡ್ಡ 6.5 ಇಂಚು (16.5 ಸೆಂಟಿಮೀಟರ್) ಎಚ್‍ಡಿ+ ಪರದರೆಯಲ್ಲಿ ಗಮನಿಸಿ, ಕಲಿತು, ಬಳಿಕ ಸೃಷ್ಟಿಸುವ ಅವಕಾಶವಿರುತ್ತದೆ. ಎರಡು ದಿನಗಳ ಬ್ಯಾಟರಿ ಬಾಳಿಕೆ ಇದರ ಇನ್ನೊಂದು ವಿಶೇಷತೆಯಾಗಿದ್ದು, ನಿಮ್ಮ ಫೇವರಿಟ್ ಆ್ಯಪ್ ಮತ್ತು ಗೇಮ್‍ಗಳನ್ನು ಸುಧೀರ್ಘ ಅವಧಿಯವರೆಗೆ ಬ್ಯಾಟರಿ ಬಗ್ಗೆ ಆತಂಕ ಇಲ್ಲದೇ ವೀಕ್ಷಿಸಬಹುದಾಗಿದೆ.

ಬೆರಳಚ್ಚು ಮತ್ತು ಮುಖಮುದ್ರೆಯ ಸಹಾಯದಿಂದ ಅನ್‍ಲಾಕ್ ಆಗುವಂಥ ಅತ್ಯಾಧುನಿಕ ಅಗತ್ಯತೆಗಳನ್ನು ಹೊಂದಿದ್ದು, ನಿರಾಯಾಸದ ಲಭ್ಯತೆ ಮತ್ತು ಹೆಚ್ಚುವರಿ ಭದ್ರತಾ ವ್ಯವಸ್ಥೆಯ ಪ್ರಯೋಜನ ಪಡೆಯಬಹುದಾಗಿದೆ. ನೋಕಿಯಾ 2.4 ಆ್ಯಂಡ್ರಾಯ್ಡ್ ಭರವಸೆ ನೀಡಲಿದ್ದು, ಮೂರು ವರ್ಷಗಳ ಕಾಲ ಮಾಸಿಕ ಭದ್ರತಾ ಅಪ್‍ಡೇಟ್‍ಗಳನ್ನು ಮತ್ತು ಎರಡು ವರ್ಷಗಳ ಕಾಲ ಓಎಸ್ ಅಪ್‍ಡೇಟ್‍ಗಳನ್ನು ಉಚಿತವಾಗಿ ನೀಡಲಾಗುತ್ತದೆ.

 ಎಚ್‍ಎಂಡಿ ಗ್ಲೋಬಲ್‍ನ ಉಪಾಧ್ಯಕ್ಷ ಸನ್ಮೀತ್ ಸಿಂಗ್

ಎಚ್‍ಎಂಡಿ ಗ್ಲೋಬಲ್‍ನ ಉಪಾಧ್ಯಕ್ಷ ಸನ್ಮೀತ್ ಸಿಂಗ್

ವಿನೂತನ ಉತ್ಪನ್ನದ ಬಗ್ಗೆ ವಿವರ ನೀಡಿದ ಎಚ್‍ಎಂಡಿ ಗ್ಲೋಬಲ್‍ನ ಉಪಾಧ್ಯಕ್ಷ ಸನ್ಮೀತ್ ಸಿಂಗ್ ಕೊಚಾರ್, "ನೋಕಿಯಾದ 2- ಸರಣಿಯು ಅಭಿಮಾನಿಗಳ ಫೇವರಿಟ್ ಉತ್ಪನ್ನವಾಗಿದ್ದು, ಭಾರತದಲ್ಲಿ ಅತ್ಯಂತ ಯಶಸ್ವಿ ಸರಣಿಯಾಗಿದೆ. ಇದು ಅತ್ಯಂತ ಪ್ರೀತಿಪಾತ್ರ ವಿಶೇಷತೆಗಳೆನಿಸಿದ ಎರಡು ದಿನಗಳ ಬ್ಯಾಟರಿ ಬಾಳಿಕೆ, ಎಐ ಚಾಲಿತ ಕ್ಯಾಮೆರಾ ಮತ್ತು ಪರಿಶುದ್ಧ, ಸುರಕ್ಷಿತ ಮತ್ತು ಅಪ್‍ಟೂಡೇಟ್ ಆ್ಯಂಡ್ರಾಯ್ಡ್ ಸೌಲಭ್ಯವನ್ನು ಹೊಂದಿದೆ. ಇದು ಎಲ್ಲ ವಿಶೇಷತೆಗಳನ್ನೂ ಒಳಗೊಂಡಿರುವ ಕೈಗೆಟಕುವ ಮತ್ತು ಆಕರ್ಷಕ ಸೊಬಗಿನ ಪ್ಯಾಕೇಜ್ ಆಗಿದೆ. ""

ನೋಕಿಯಾ 2.4ನಲ್ಲಿ ನಾವು ಅತ್ಯುನ್ನತ ವಿಶೇಷತೆಗಳನ್ನು ಅಳವಡಿಸಿದ್ದು, ಇದರಲ್ಲಿ ಮುಖ್ಯವಾಗಿ ನೈಟ್ ಮೋಡ್ ಮತ್ತು ಪೋಟ್ರೈಟ್ ಮೋಡ್ ಒಳಗೊಂಡ ಎಐ ಕ್ಯಾಮೆರಾ ಒಳಗೊಂಡಿದೆ. ಫೋನ್‍ನ ದೊಡ್ಡ ಪರದೆಯು, ತಲ್ಲೀನವಾಗು ದೃಶ್ಯಾನುಭವವನ್ನು ಹೊಂದಲು ಸಹಕಾರಿಯಾಗಲಿದೆ. ಹೆಚ್ಚುವರಿ ಸುರಕ್ಷತೆ ದೃಷ್ಟಿಯಿಂದ ಬಯೋಮೆಟ್ರಿಕ್ ಬೆರಳಚ್ಚು ಸೆನ್ಸಾರ್ ಅಳವಡಿಸಲಾಗಿದ್ದು, ಈ ಸರಣಿಯಲ್ಲಿ ಇದು ಮೊದಲು. ಈ ಎಲ್ಲ ವಿಶೇಷತೆಗಳನ್ನು ಹೊಂದಿರುವ ಅನಿಯಮಿತ ಫಿನ್ನಿಶ್ ವಿನ್ಯಾಸವು ನೋಕಿಯಾ 2.4 ವರ್ಣಮಯ ಪ್ಯಾಲೆಟ್‍ನಲ್ಲಿ ಪ್ರತಿಫಲಿತವಾಗಿದೆ" ಎಂದು ಹೇಳಿದರು.

 ಎಐ ಇಮೇಜಿಂಗ್‍ನಿಂದ ಶಕ್ತಿ ಪಡೆದ ವಿಸ್ತೃತ ರಾತ್ರಿ ಮತ್ತು ಭಾವಚಿತ್ರಗಳು

ಎಐ ಇಮೇಜಿಂಗ್‍ನಿಂದ ಶಕ್ತಿ ಪಡೆದ ವಿಸ್ತೃತ ರಾತ್ರಿ ಮತ್ತು ಭಾವಚಿತ್ರಗಳು

ಸೆರೆಹಿಡಿಯಬಹುದಾದ ಅಪೂರ್ವ ಕ್ಷಣ ಅಥವಾ ಘಟನೆಗಳು ಹಗಲಿನ ವೇಳೆಯಲ್ಲಷ್ಟೇ ಸಂಭವಿಸುವುದಿಲ್ಲ. ನೈಟ್‍ಮೋಡ್‍ನ ಅತ್ಯಾಧುನಿಕ ಇಮೇಜ್ ಫ್ಯೂಷನ್ ಮತ್ತು ಎಕ್ಸ್‍ಪೋಶರ್ ಸ್ಟ್ಯಾಕಿಂಗ್ ಸೌಲಭ್ಯವು ನೋಕಿಯಾ 2.4 ಮೂಲಕ ನೀವು ಆಕರ್ಷಕ, ವಿಸ್ತೃತ ವಿವರಣಾತ್ಮಕ ಕ್ಷಣಗಳನ್ನು ಕಡು ಕತ್ತಲಲ್ಲೂ ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ. ಅಂತೆಯೇ ಪೋಟ್ರೈಟ್ ಮೋಡ್‍ನಲ್ಲಿ ನಿಮ್ಮ ಸೃಜನಶೀಲತೆಯನ್ನು ಬಳಸಿಕೊಂಡು ವಿಶೇಷ ಅಗತ್ಯತೆಯ ಆಕೃತಿಗಳನ್ನು ಮತ್ತು ಮಬ್ಬು ಹಿನ್ನೆಲೆಯ ಭಾವಚಿತ್ರವನ್ನು ಕೂಡಾ ಸೆರೆ ಹಿಡಿಯಬಹುದಾಗಿದೆ. ಹೊಸ ಪೋಟ್ರೈಟ್ ಎಡಿಟರ್ ಸಾಧನದ ಮೂಲಕ ನೀವು ಸೆರೆ ಹಿಡಿದ ಚಿತ್ರಗಳನ್ನು ಚಿತ್ರ ಸೆರೆಹಿಡಿದ ಧೀರ್ಘಕಾಲದ ಬಳಿಕವೂ ಮರುಫೋಕಸ್ ಮಾಡಲು ಮತ್ತು ಎಡಿಟ್ ಮಾಡಲು ಅವಕಾಶವಿರುತ್ತದೆ. ಈ ಮೂಲಕ ಚಿತ್ರವನ್ನು ಇನ್‍ಸ್ಟಂಟ್ ಶೇರ್ ಮಾಡಲು ಮತ್ತು ವಿಶಿಷ್ಟ ಚಿತ್ರವಾಗಿ ಪರಿವರ್ತಿಸಬಹುದಾಗಿದೆ.

 ದೊಡ್ಡ ಎಚ್‍ಡಿ+ ಪ್ರದರ್ಶಕ ವ್ಯವಸ್ಥೆ ಪರದೆ

ದೊಡ್ಡ ಎಚ್‍ಡಿ+ ಪ್ರದರ್ಶಕ ವ್ಯವಸ್ಥೆ ಪರದೆ

6.5 ಇಂಚು (16.5 ಸೆಂಟಿಮೀಟರ್) ಪರದೆ ಮೂಲಕ ವೀಕ್ಷಣೆ, ಕಲಿಕೆ ಮತ್ತು ಸೃಷ್ಟಿಯೊಂದಿಗೆ ಧೀರ್ಘಬಾಳ್ವಿಕೆಯ ಮನೋರಂಜನೆ ಸೆಲ್ಫಿ ಸೌಲಭ್ಯ ಹೊಂದಿದ ದೊಡ್ಡ ಎಚ್‍ಡಿ+ ಪ್ರದರ್ಶಕ ವ್ಯವಸ್ಥೆ ಪರದೆಯನ್ನು ವಿಸ್ತಾರಗೊಳಿಸಲು ಸಹಕಾರಿಯಾಗಿದ್ದು, ಕೈಗೆಟುಕುವ ಬೆಲೆಯಲ್ಲಿ ಉನ್ನತ ದೃಶ್ಯಾನುಭವವನ್ನು ನಿಮಗೆ ಒದಗಿಸುತ್ತದೆ. ಇದರ ಜತೆಗೆ ವಿಶಿಷ್ಟವೆನಿಸಿದ ಎರಡು ದಿನಗಳ ಬ್ಯಾಟರಿ ಬಾಳಿಕೆಯನ್ನು ನೀವು ನೋಕಿಯಾ 2 ಶ್ರೇಣಿಯಲ್ಲಿ ನಿರೀಕ್ಷಿಸಬಹುದಾಗಿದ್ದು, ನೋಕಿಯಾ 2.4ನಲ್ಲಿ ದೊಡ್ಡ 4500 ಎಂಎಎಚ್ ಬ್ಯಾಟರಿ ಅಂತರ್ಗತವಾಗಿರುತ್ತದೆ. ಇದು ಒಮ್ಮೆ ಚಾರ್ಜ್ ಮಾಡಿದ ಬಳಿಕ ಎರಡು ದಿನಗಳವರೆಗೂ ನಿಶ್ಚಿಂತೆಯಿಂದ ಇರಬಹುದಾಗಿದೆ. ಎಐ ನೆರವಿನ ಅಡಾಪ್ಟಿವ್ ಬ್ಯಾಟರಿಯಿಂದಾಗಿ ನೀವು ನಿಮ್ಮ ಫೋನ್ ರಿಚಾರ್ಜ್ ಮಾಡಲು ಸಮಯ ಕಳೆಯುವ ಬದಲು ನಿಮ್ಮನ್ನೇ ರೀಚಾರ್ಜ್ ಮಾಡಿಕೊಳ್ಳಲು ಅವಕಾಶವಾಗಲಿದೆ.

 ಫಿನ್ಲೆಂಡ್ ಮೂಲದಿಂದ ಸ್ಫೂರ್ತಿ ಪಡೆದ ಅಪರಿಮಿತ ವಿನ್ಯಾಸ

ಫಿನ್ಲೆಂಡ್ ಮೂಲದಿಂದ ಸ್ಫೂರ್ತಿ ಪಡೆದ ಅಪರಿಮಿತ ವಿನ್ಯಾಸ

ನೋಕಿಯಾ 2.4 ಅತ್ಯಾಧುನಿಕ ಅಗತ್ಯತೆಗಳನ್ನು ಹೊಂದಿದ್ದು, ಅನುಕೂಲಕರ ಬೆರಳಚ್ಚು ಸೆನ್ಸಾರ್ ಮತ್ತು ಎಐ ಫೇಸ್ ಅನ್‍ಲಾಕ್ ಸೌಲಭ್ಯದೊಂದಿಗೆ ನಿಮ್ಮ ಸಾಧನವನ್ನು ತ್ವರಿತವಾಗಿ ಮತ್ತು ಸುಲಭವಾಗಿ ಬಳಸಲು ಅನುವು ಮಾಡಿಕೊಡುತ್ತದೆ. ಇದು ನಿಮ್ಮ ಫೋನನ್ನು ಹೇಗೆ ಬಳಸಬಹುದು ಎನ್ನುವುದಕ್ಕೆ ವಿಶಿಷ್ಟ ವೈವಿಧ್ಯತೆಯನ್ನು ತಂದುಕೊಡುತ್ತದೆ.

ಫಿನ್ಲೆಂಡ್ ಮೂಲದಿಂದ ಸ್ಫೂರ್ತಿ ಪಡೆದಿದ್ದಕ್ಕೆ ಅನುಗುಣವಾಗಿ, ನೋಕಿಯಾ 2.4 ಧೀರ್ಘಕಾಲ ಬಾಳಿಕೆ ಬರುವ ವಿನ್ಯಾಸದಿಂದ ಕೂಡಿದೆ. ಇದನ್ನು ಚೆನ್ನಾಗಿ ಕಾಣುವಂತೆ ನಿರ್ಮಿಸಿರುವುದು ಮಾತ್ರವಲ್ಲದೇ ಧೀರ್ಘಕಾಲಿಕ ಬಾಳಿಕೆಗೂ ಒತ್ತು ನೀಡಲಾಗಿದೆ. 3ಡಿ ನ್ಯಾಸೊ ಟೆಕ್ಸ್‍ಚರ್ ಹೊಂದಿರುವ ಹೊದಿಕೆಯು, ನಿಮ್ಮ ಕೈಯಲ್ಲಿ ಸುರಕ್ಷಿತವಾಗಿ ಹಿಡಿಯಲ್ಪಡುತ್ತದೆ ಹಾಗೂ ನೊರ್ಯಾಡಿಕ್‍ನಿಂದ ಸ್ಫೂರ್ತಿ ಪಡೆದ ಬಣ್ಣಗಳಲ್ಲಿ ಕಣ್ಣೋಟ ಸೆಳೆಯುವಂಥ ಪರಿಪೂರ್ಣತೆಯೊಂದಿಗೆ ಲಭ್ಯ. ಇದರ ಡೈ ಎರಕ ಹೊಡೆದ ಲೋಹದ ಚೌಕಟ್ಟು, ಪಾಲಿ ಕಾರ್ಬೊನೇಟ್ ಕವಚವನ್ನು ಹೊಂದಿದ್ದು, ಇದು ನಿಮ್ಮ ಫೋನ್‍ಗೆ ಕಠಿಣತೆಯ ನಡುವೆಯೂ ನೋಕಿಯಾ ಫೋನ್‍ನಿಂದ ನೀವು ನಿರೀಕ್ಷಿಸುವ ಆರಾಮದಾಯಕ ಅನುಭವವನ್ನು ನೀಡುತ್ತದೆ.

 ಆ್ಯಂಡ್ರಾಯ್ಡ್ 11 ಮತ್ತು 12ಗೆ ಸಜ್ಜಾದ ಸ್ಮಾರ್ಟ್‍ಫೋನ್ ಪ್ರಯೋಜನಗಳು

ಆ್ಯಂಡ್ರಾಯ್ಡ್ 11 ಮತ್ತು 12ಗೆ ಸಜ್ಜಾದ ಸ್ಮಾರ್ಟ್‍ಫೋನ್ ಪ್ರಯೋಜನಗಳು

ನೋಕಿಯಾ 2.4 ಸಾಧನವು ನಮ್ಮ ಪರಿಶುದ್ಧ, ಸುರಕ್ಷಿತ ಮತ್ತು ಅಪ್‍ಡೇಟ್ ಭರವಸೆಯನ್ನು ಹೊಂದಿದ್ದು, ಸ್ಟ್ರೀಮ್‍ಲೈನ್ಡ್ ಇಂಟರ್‍ಫೇಸ್‍ನೊಂದಿಗೆ ಯಾವುದೇ ಬ್ಲಾಟ್‍ವೇರ್ ಇಲ್ಲದೇ ನಿಮಗೆ ಅದ್ಭುತ ಸಾಫ್ಟ್‍ವೇರ್ ಅನುಭವವನ್ನು ಒದಗಿಸುತ್ತದೆ. ಇದರ ಆ್ಯಂಡ್ರಾಯ್ಡ್ ಪ್ರೋಗ್ರಾಂನ ಭಾಗವಾಗಿ, ನೋಕಿಯಾ 2.4 ನಿಮಗೆ ಇತ್ತೀಚಿನ ಆ್ಯಂಡ್ರಾಯ್ಡ್ ಲಕ್ಷಣವನ್ನು ಆಸ್ವಾದಿಸಲು ಅನುವು ಮಾಡಿಕೊಡುತ್ತದೆ ಹಾಗೂ ಮೂರು ವರ್ಷಗಳ ಕಾಲ ಪ್ರತಿ ತಿಂಗಳು ಭದ್ರತಾ ಅಪ್‍ಡೇಟ್‍ಗಳನ್ನು ಹಾಗೂ ಎರಡು ವರ್ಷಗಳ ಕಾಲ ಸಾಫ್ಟ್‍ವೇರ್ ಅಪ್‍ಗ್ರೇಡ್‍ನ ಭರವಸೆಯನ್ನೂ ನೀಡುತ್ತದೆ. ಇದರೊಂದಿಗೆ ನಿಮ್ಮ ಫೋನ್‍ನಿಂದ ನೀವು ಹೆಚ್ಚಿನದನ್ನು ಪಡೆಯಲು ಅನುವಾಗಲಿದೆ. ಜತೆಗೆ ಗೂಗಲ್ ಅಸಿಸ್ಟೆಂಟ್ ಸಹಾಯದಿಂದ ಮಾಹಿತಿಯ ಲಭ್ಯತೆ ಮತ್ತಷ್ಟು ಸರಳವಾಗಿರುತ್ತದೆ. ಇದು ಧ್ವನಿ ಅಥವಾ ವಿಶೇಷ ಬಟನ್‍ನಿಂದ ಚಾಲಿತವಾಗುತ್ತದೆ.

 ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ನೋಕಿಯಾ 2.4, ಮಂದಬೆಳಕು, ಸಾಗರಕಿನಾರೆ (ಡಸ್ಕ್ ಮತ್ತು ಫೋರ್ಡ್) ಮತ್ತು ಕಲ್ಲಿದ್ದಲು ಬಣ್ಣಗಳಲ್ಲಿ ಲಭ್ಯ ಹಾಗೂ 3ಜಿಬಿ/ 64ಜಿಬಿ ಅವತರಣಿಕೆಗೆ ಶಿಫಾರಸ್ಸು ಮಾಡಲಾದ ಅತ್ಯುತ್ತಮ ಖರೀದಿ ದರ ರೂ 10,399 ಆಗಿರುತ್ತದೆ.

ನೋಕಿಯಾ 2.4 ವಿಶೇಷವಾಗಿ ನಲ್ಲಿ 2020ರ ನವೆಂಬರ್ 26ರಿಂದ ಲಭ್ಯ. ನೋಕಿಯಾ ವೆಬ್ ತಾಣದಲ್ಲಿ ಭಾರತೀಯ ಕಾಲಮಾನದ ಪ್ರಕಾರ ನವೆಂಬರ್ 26ರಂದು ಮಧ್ಯಾಹ್ನ 12 ಗಂಟೆ ಹಾಗೂ 4ನೇ ಡಿಸೆಂಬರ್ ರಾತ್ರಿ 11.59 ನಿಮಿಷದ ಒಳಗೆ ಯಶಸ್ವಿಯಾಗಿ ಖರೀದಿ ಮಾಡುವ ಮೊಟ್ಟಮೊದಲ 100 ಗ್ರಾಹಕರು 007 ಮರ್ಕೆಂಡೈಸ್ ಹ್ಯಾಂಪರ್‍ಗಳನ್ನು ಪಡೆಯಲಿದ್ದು, ಇದರಲ್ಲಿ 007 ವಿಶೇಷ ಆವೃತ್ತಿಯ ಬಾಟಲಿ, ಮುಚ್ಚಳ ಮತ್ತು ಲೋಹದ ಕೀಚೈನ್‍ಗಳಿರುತ್ತವೆ.

 ಆನ್ ಲೈನ್ ನಲ್ಲಿ ಮಾರಾಟ

ಆನ್ ಲೈನ್ ನಲ್ಲಿ ಮಾರಾಟ

2020ರ ಡಿಸೆಂಬರ್ 4ರಿಂದ ನೋಕಿಯಾ 2.4 ಫೋನ್ ಆನ್‍ಲೈನ್‍ನಲ್ಲಿ ಅಮೆಜಾನ್.ಇನ್ ಹಾಗೂ ಫ್ಲಿಪ್‍ಕಾರ್ಟ್‍ನಲ್ಲಿ ಮತ್ತು ಮುಂಚೂಣಿ ಚಿಲ್ಲರೆ ಮಳಿಗೆಗಳಲ್ಲಿ ಭಾರತದಾದ್ಯಂತ ಲಭ್ಯವಾಗಲಿದೆ.

ನೋಕಿಯಾ 2.4 ಗ್ರಾಹಕರು ಜಿಯೊದಲ್ಲಿ 3500 ರೂಪಾಯಿಗಳ ಲಾಭ ಪಡೆಯಬಹುದಾಗಿದೆ. ಈ ಪ್ರಯೋಜನಗಳಲ್ಲಿ 349 ರೂಪಾಯಿಗಳ ಪ್ರಿಪೆಯ್ಡ್ ರೀಚಾರ್ಜ್‍ನ ಮೇಲೆ 2000 ರೂಪಾಯಿಗಳ ಇನ್‍ಸ್ಟಂಟ್ ಕ್ಯಾಶ್‍ಬ್ಯಾಕ್ ಮತ್ತು 1500 ರೂಪಾಯಿಗಳ ಪಾಲುದಾರ ಕಂಪನಿಗಳ ವೋಚರ್‍ಗಳು ಸೇರಿವೆ. ಈ ಆಫರ್ ಹೊಸ ಹಾಗೂ ಹಾಲಿ ಇರುವ ಜಿಯೊ ಗ್ರಾಹಕರಿಗೆ ಅನ್ವಯವಾಗುತ್ತದೆ.

English summary
HMD Global, the home of Nokia phones, today announces the launch of Nokia 2.4, the latest addition to the widely successful Nokia 2-series in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X