ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಯಾಯಿತಿ ಮಾರಾಟ ಮಾಡುವಾಗ ವ್ಯಾಟ್, ಟ್ಯಾಕ್ಸ್ ಹಾಕುವಂತಿಲ್ಲ!

|
Google Oneindia Kannada News

ನವದೆಹಲಿ, ಫೆಬ್ರವರಿ 3: ಯಾವುದೇ ಅಂಗಡಿಯಲ್ಲಿ ಶೇ 40ರಷ್ಟು ರಿಯಾಯಿತಿ ದರದಲ್ಲಿ ವಸ್ತುಗಳನ್ನು ಮಾರುವಾಗ ಅದರ ಮೇಲೆ ವ್ಯಾಟ್ ಅಥವಾ ಮತ್ತ್ಯಾವುದೇ ತೆರಿಗೆ ವಿಧಿಸಲು ಸಾಧ್ಯವಿಲ್ಲ ಎಂಬ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ ಹೇಳಿದೆ.

ರಿಯಾಯಿತಿಯನ್ನು ಎಂಆರ್ ಪಿ ಮೇಲೆ ನೀಡಲಾಗಿರುತ್ತದೆ. ಗ್ರಾಹಕ ವಸ್ತುಗಳ ಕಾಯ್ದೆ 2(d) ಪ್ರಕಾರ ಎಂಆರ್ ಪಿ ಅಂದರೆ ಎಲ್ಲ ತೆರಿಗೆ ಮತ್ತು ಸೆಸ್ ಹಾಕಿದ ನಂತರದ ಬೆಲೆ ಎಂದು ಹೇಳಿದೆ. ಆಯೋಗದ ಈ ಆದೇಶವು ಕಳೆದ ತಿಂಗಳು ಬಂದಿದೆ. ಚಂಡೀಗಢ ಹಾಗೂ ದೆಹಲಿಯಲ್ಲಿ ವುಡ್ ಲ್ಯಾಂಡ್ ಕಂಪನಿಯ ಫ್ರಾಂಚೈಸಿ ಪಡೆದವರು ಗ್ರಾಹಕರಿಗೆ ವ್ಯಾಟ್ ಮೊತ್ತ ಹಿಂತಿರುಗಿಸಲು ನಿರಾಕರಿಸಿದ್ದರು.[ಕಾಪಿ ರೈಟ್ ಉಲ್ಲಂಘನೆ: ಫೇಸ್ ಬುಕ್ ಗೆ 3 ಸಾವಿರ ಕೋಟಿ ರು. ದಂಡ!!!]

No VAT on items sold at discount

ಗ್ರಾಹಕರೊಬ್ಬರಿಗೆ ಶೇ 40ರಷ್ಟು ರಿಯಾಯಿತಿ ನೀಡಿ, ಎಂಆರ್ ಪಿ 3,995ಕ್ಕೆ ಜಾಕೆಟ್ ವೊಂದನ್ನು ಮಾರಿದ್ದರು. ಅದರಲ್ಲಿ ವ್ಯಾಟ್ ಮೊತ್ತ 119.85 ಹಿಂತಿರುಗಿಸಬೇಕು ಎಂಬುದು ಗ್ರಾಹಕರ ವಾದವಾಗಿತ್ತು. ಆಯೋಗದ ಅಧ್ಯಕ್ಷ ನ್ಯಾ.ಡಿಕೆ ಜೈನ್ ಆದೇಶ ನೀಡಿ, ಈ ರೀತಿ ಜಾಹೀರಾತು ನೀಡಿ, ಕಡಿಮೆ ಬೆಲೆಗೆ ವಸ್ತು ಸಿಗುತ್ತದೆ ಎಂದು ಗ್ರಾಹಕರಿಗೆ ಆಮಿಷ ಒಡ್ಡುವಂಥದ್ದು ಸರಿಯಲ್ಲ. ಜೊತೆಗೆ ಇದು ಸರಿಯಾದ ಚೌಕಾಶಿ ದರವಲ್ಲ. ಆದ್ದರಿಂದ ಇದು ನ್ಯಾಯಸಮ್ಮತ ಮಾರಾಟ ವಿಧಾನವಲ್ಲ ಎಂದಿದ್ದಾರೆ.

ಕಾನೂನಿನ ಪ್ರಕಾರ ವ್ಯಾಟ್ ಹಾಕಿದ್ದಾರೆ ಅದು ಸಮಸ್ಯೆಯಲ್ಲ. ಆದರೆ ದಾರಿ ತಪ್ಪಿಸುವ ಜಾಹೀರಾತುಗಳು ನ್ಯಾಯಸಮ್ಮತವಲ್ಲದ ವ್ಯಾಪಾರಕ್ಕೆ ಕಾರಣವಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ. ಇದೇ ವೇಳೆ ಜಿಲ್ಲಾ ಹಾಗೂ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ತೀರ್ಪನ್ನು ಎತ್ತಿಹಿಡಿಯಲಾಗಿದೆ.[ಬೆಂಗಳೂರಿನಲ್ಲಿ ಶೀಘ್ರ ಆ್ಯಪಲ್ ಐ ಫೋನ್ ತಯಾರಿಕಾ ಘಟಕ]

ಯಾವುದೇ ಎಂಆರ್ ಪಿ ಮೇಲೆ FLAT 40% ರಿಯಾಯಿತಿ ಎಂಬುದು ನ್ಯಾಯಸಮ್ಮತ ವ್ಯಾಪಾರವಲ್ಲ. ಹೆಚ್ಚುವರಿ ಮೊತ್ತವನ್ನು ದೂರುದಾರರಿಗೆ ಹಿಂತಿರುಗಿಸಬೇಕು. ಜತೆಗೆ ಪರಿಹಾರವನ್ನು ನೀಡಬೇಕು ಮತ್ತು ವ್ಯಾಜ್ಯದ ಸಲುವಾಗಿ ಮಾಡಿದ ಖರ್ಚನ್ನು ವಾಪಸ್ ನೀಡಬೇಕು ಎಂದು ಸೂಚಿಸಲಾಗಿದೆ.

English summary
The National Consumer Disputes Redressal Commission has held that shops selling goods at 40% discount cannot charge VAT or any other duty on the discounted price. It said that the rebate was on the MRP, which includes all taxes and cess as per Section 2(d) of Consumer Goods Act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X