ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಐ ಪಾವತಿಗೆ ಹೆಚ್ಚುವರಿ ಶುಲ್ಕ ವಿಧಿಸುತ್ತಾ ಆರ್‌ಬಿಐ: ಹಣಕಾಸು ಸಚಿವಾಲಯ ಹೇಳಿದ್ದೇನು?

|
Google Oneindia Kannada News

ನವದೆಹಲಿ, ಆಗಸ್ಟ್‌ 22: ಇನ್ನು ಮುಂದೆ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಅಡಿ ಮಾಡಲಾಗುವ ಪಾವತಿಗಳಿಗೆ ಆರ್‌ಬಿಐ ಶುಲ್ಕ ವಿಧಿಸಲಾಗುತ್ತದೆ ಎಂಬ ವರದಿಗಳನ್ನಯ ಕೇಂದ್ರ ಹಣಕಾಸು ಸಚಿವಾಲಯವು ನಿರಾಕರಿಸಿದ್ದು, ಯುಪಿಐ ಅಡಿಯಲ್ಲಿ ಮಾಡಲಾಗುವ ಪಾವತಿಗಳಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಹೇಳಿದೆ.

ವೆಚ್ಚ ವಸೂಲಾತಿಗಾಗಿ ಹಣದ ಪಾವತಿ ಸೇವಾ ಪೂರೈಕೆದಾರರ ಕಾಳಜಿಯಿಂದ ಹಣದ ಪಾವತಿಗೆ ತಗಲುವ ವೆಚ್ಚವನ್ನು ಇತರ ವಿಧಾನಗಳ ಮೂಲಕ ಪೂರೈಸಬೇಕು ಎಂದು ಅದು ಹೇಳಿದೆ.

ಇನ್ನು ಯುಪಿಐ ಹಣ ವರ್ಗಾವಣೆಗೆ ಶುಲ್ಕ ಕಟ್ಟಬೇಕು ; ಯಾಕೆ?ಇನ್ನು ಯುಪಿಐ ಹಣ ವರ್ಗಾವಣೆಗೆ ಶುಲ್ಕ ಕಟ್ಟಬೇಕು ; ಯಾಕೆ?

ಈ ಬಗ್ಗೆ ಹಣಕಾಸು ಸಚಿವಾಲಯ ಟ್ವೀಟ್ ಮಾಡಿದ್ದು, ಯುಪಿಐ ಸಾರ್ವಜನಿಕರಿಗೆ ಅಪಾರ ಅನುಕೂಲತೆ ಮತ್ತು ಆರ್ಥಿಕತೆಗೆ ಉತ್ಪಾದಕತೆಯ ಲಾಭಗಳೊಂದಿಗೆ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದೆ. ಯುಪಿಐ ಸೇವೆಗಳಿಗೆ ಯಾವುದೇ ಶುಲ್ಕವನ್ನು ವಿಧಿಸಲು ಸರ್ಕಾರದಲ್ಲಿ ಯಾವುದೇ ಚಿಂತನೆ ಇಲ್ಲ. ವೆಚ್ಚ ವಸೂಲಾತಿಗಾಗಿ ಹಣದ ಪಾವತಿ ಸೇವಾ ಪೂರೈಕೆದಾರರ ಕಾಳಜಿಯಿಂದ ಹಣದ ಪಾವತಿಗೆ ತಗಲುವ ವೆಚ್ಚವನ್ನು ಇತರ ವಿಧಾನಗಳ ಮೂಲಕ ಪೂರೈಸಬೇಕು ಎಂದು ಟ್ವೀಟ್‌ ಮಾಡಿದೆ.

ಬಳಕೆದಾರ ಸ್ನೇಹಿ ಪಾವತಿ ಪೋರ್ಟಲ್‌ಗೆ ಉತ್ತೇಜನ

ಬಳಕೆದಾರ ಸ್ನೇಹಿ ಪಾವತಿ ಪೋರ್ಟಲ್‌ಗೆ ಉತ್ತೇಜನ

ಸರ್ಕಾರವು ಕಳೆದ ವರ್ಷ ಡಿಜಿಟಲ್ ಪಾವತಿ ವ್ಯವಸ್ಥೆಗೆ ಹಣಕಾಸಿನ ನೆರವು ನೀಡಿತ್ತು ಮತ್ತು ಡಿಜಿಟಲ್‌ ಪಾವತಿ ವಿಧಾನಗಳನ್ನು ಅನ್ನು ಮತ್ತಷ್ಟು ಅಳವಡಿಸಿಕೊಳ್ಳಲು ಮತ್ತು ಆರ್ಥಿಕ ಮತ್ತು ಬಳಕೆದಾರ ಸ್ನೇಹಿ ಪಾವತಿ ಪೋರ್ಟಲ್‌ಗಳ ಪ್ರಚಾರವನ್ನು ಉತ್ತೇಜಿಸಲು ಈ ವರ್ಷವೂ ಹಣಕಾಸಿನ ನೆರವನ್ನು ಅದು ಘೋಷಿಸಿದೆ. ಯುಪಿಐ ಸೇವೆಗಳಿಗೆ ಯಾವುದೇ ಶುಲ್ಕವನ್ನು ವಿಧಿಸಲು ಸರ್ಕಾರದಲ್ಲಿ ಯಾವುದೇ ಚಿಂತನೆ ಇಲ್ಲ. ಯುಪಿಐ ಹಣದ ಪಾವತಿಗೆ ತಗಲುವ ವೆಚ್ಚದ ಮರುಪಡೆಯುವಿಕೆಗಾಗಿ ಸೇವಾ ಪೂರೈಕೆದಾರರ ಕಾಳಜಿಯನ್ನು ಇತರ ವಿಧಾನಗಳ ಮೂಲಕ ಪೂರೈಸಬೇಕು ಎಂದು ಪುರುಚ್ಚರಿಸಿದೆ.

ಯುಪಿಐ ಐಎಂಪಿಎಸ್‌ನಂತೆಯೇ ಶುಲ್ಕ ವಿಧಿಸುತ್ತದೆ

ಯುಪಿಐ ಐಎಂಪಿಎಸ್‌ನಂತೆಯೇ ಶುಲ್ಕ ವಿಧಿಸುತ್ತದೆ

ಶನಿವಾರದ ವರದಿಗಳ ಪ್ರಕಾರ ಆರ್‌ಬಿಐನ ಇತ್ತೀಚಿನ ಪ್ರಸ್ತಾವನೆಯು, ಯುಪಿಐ ವ್ಯವಸ್ಥೆಯ ಮೂಲಕ ಮಾಡುವ ಪ್ರತಿಯೊಂದು ಹಣಕಾಸು ವಹಿವಾಟಿಗೆ ಶುಲ್ಕವನ್ನು ವಿಧಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ಹೇಳಲಾಗಿತ್ತು. ಯುಪಿಐ ಮೂಲಸೌಕರ್ಯವನ್ನು ನಿರ್ಮಿಸುವ ಮತ್ತು ನಡೆಸುವ ವೆಚ್ಚವನ್ನು ಮರುಪಡೆಯುವ ಸಾಧ್ಯತೆಯನ್ನು ನಿರ್ಧರಿಸುವುದು ಇದರ ಗುರಿಯಾಗಿದೆ ಎನ್ನಲಾಗಿತ್ತು. ಆರ್‌ಬಿಐ ಪ್ರಕಾರ, ಯುಪಿಐ ಮೂಲಕ ಮಾಡಿದ ಹಣ ವರ್ಗಾವಣೆಗಳು ಐಎಂಪಿಎಸ್ (ತತ್‌ಕ್ಷಣ ಪಾವತಿ ಸೇವೆ) ಮೂಲಕ ಮಾಡಿದ ವರ್ಗಾವಣೆಗಳಿಗೆ ಸಮನಾಗಿರುತ್ತದೆ. ಆದ್ದರಿಂದ ಸೈದ್ಧಾಂತಿಕವಾಗಿ, ಯುಪಿಐ ಐಎಂಪಿಎಸ್‌ನಂತೆಯೇ ಶುಲ್ಕವನ್ನು ವಿಧಿಸಬೇಕು ಎಂದು ಹೇಳಲಾಗಿತ್ತು.

ವ್ಯಾಪಾರಿ ಪಾವತಿ ವ್ಯವಸ್ಥೆ

ವ್ಯಾಪಾರಿ ಪಾವತಿ ವ್ಯವಸ್ಥೆ

ಆರ್‌ಬಿಐ ಯುಪಿಐ ಪಾವತಿಗಳು ವಿವಿಧ ಮೊತ್ತದ ಹಣದ ಪಾವತಿಗಳ ಆಧಾರದ ಮೇಲೆ ಶ್ರೇಣೀಕೃತ ಶುಲ್ಕಕ್ಕೆ ಒಳಪಟ್ಟಿರಬಹುದು ಎಂದು ಪ್ರಸ್ತಾಪಿಸಲಾಗಿತ್ತು. ಯುಪಿಐ ಒಂದು ನಿಧಿ ವರ್ಗಾವಣೆ ವ್ಯವಸ್ಥೆಯಾಗಿದ್ದು, ಅದು ಕೇಂದ್ರೀಯ ಬ್ಯಾಂಕ್ ಪ್ರಕಾರ ರಿಯಲ್‌ ಟೈಮ್‌(ನೈಜ ಸಮಯ) ಹಣದ ಚಲನೆಯನ್ನು ಸಕ್ರಿಯಗೊಳಿಸುತ್ತದೆ. ಡಿಬಿಟ್‌ ಕಾರ್ಡ್‌ಗಳಿಗೆ ಟಿ+ಎನ್‌ ಚಲನೆಗೆ ವ್ಯತಿರಿಕ್ತವಾಗಿ ಇದು ವ್ಯಾಪಾರಿ ಪಾವತಿ ವ್ಯವಸ್ಥೆಯಾಗಿ ನೈಜ ಸಮಯದಲ್ಲಿ ಹಣದ ಪಾವತಿಯನ್ನು ಅನ್ನು ಸಕ್ರಿಯಗೊಳಿಸುತ್ತದೆ ಎಂದು ವರದಿಗಳು ತಿಳಿಸಿದ್ದವು.

ಭಾರತದ ಹೊರಗೂ ಕಾರ್ಯನಿರ್ವಹಣೆ

ಭಾರತದ ಹೊರಗೂ ಕಾರ್ಯನಿರ್ವಹಣೆ

ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ಅಥವಾ UPI ಭಾರತದಲ್ಲಿ ಭಾರೀ ಜನಪ್ರಿಯತೆಯನ್ನು ಗಳಿಸಿದೆ. ಡಿಬಿಟ್‌ ಕಾರ್ಡ್ ಪಾವತಿಗಳಿಗೆ ಪರ್ಯಾಯವಾಗಿ ಮತ್ತು ಡಿಜಿಟಲ್ ಪಾವತಿಗಳಿಗೆ ಮತ್ತೊಂದು ಆಯ್ಕೆಯಾಗಿ ಪರಿಚಯಿಸಲಾದ ಯುಪಿಐ ಈಗ ಭಾರತದ ಹೊರಗೂ ಕಾರ್ಯನಿರ್ವಹಿಸಬಹುದಾಗಿದೆ. ತ್ವರಿತ ಪಾವತಿ ವಿಧಾನದ ಪರಿಹಾರದ ಕಾರಣದಿಂದಾಗಿ ಇದು ಶೀಘ್ರವಾಗಿ ಯಶಸ್ವಿಯಾಯಿತು. ಇದರ ಯಶಸ್ಸಿಗೆ ಮತ್ತೊಂದು ಕಾರಣಾಂಶವೆಂದರೆ ಬಳಕೆದಾರರಿಗೆ ಇದನ್ನು ಬಳಸಿಕೊಳ್ಳಲು ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂಬುದಾಗಿದೆ. ಆದಾಗ್ಯೂ, ಈ ನಿಯಮವು ಶೀಘ್ರದಲ್ಲೇ ಬದಲಾಗಬಹುದು ಎನ್ನಲಾಗಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಯುಪಿಐ ಪಾವತಿಗಳಿಗೆ ಶುಲ್ಕವನ್ನು ಸೇರಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ಶನಿವಾರದ ವರದಿಗಳು ಹೇಳಿದ್ದವು.

Recommended Video

Sourav Ganguli ತಲೆ & ಪಕ್ಕೆಲುಬು ಮುರಿಯಲು ಪಾಕಿಸ್ತಾನ ಮಾಡಿದ ಭಯಾನಕ ಪ್ಲ್ಯಾನ್ ರಿವೀಲ್ | *Cricket | OneIndia

English summary
The Union Finance Ministry has denied reports that the RBI will charge a fee for payments made under the Unified Payments Interface (UPI) henceforth, saying that no fee will be charged for payments made under UPI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X