ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಬಜೆಟ್ ನಂತರ ಆರ್‌ಬಿಐ ಹಣಕಾಸು ನೀತಿ

|
Google Oneindia Kannada News

ಮುಂಬೈ, ಫೆಬ್ರವರಿ, 02: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್​ಬಿಐ) ತನ್ನ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಣೆ ಮಾಡಿದೆ. ಈ ಬಾರಿ ಹಣಕಾಸು ನೀತಿ, ಮೂಲಾಂಕ ಮತ್ತು ಬಡ್ಡಿ ದರದಲ್ಲಿ ಯಾವ ಬದಲಾವಣೆಯನ್ನು ಮಾಡಲಾಗಿಲ್ಲ. ಹಿಂದಿನ ಅಂದರೆ ಶೇ. 6.75 ರ ದರವನ್ನೇ ಕಾಯ್ದುಕೊಳ್ಳಲಾಗಿದೆ.

2016-17ನೇ ಸಾಲಿನ ಕೇಂದ್ರ ಬಜೆಟ್ ಈ ತಿಂಗಳ ಅಂತ್ಯಕ್ಕೆ ಮಂಡನೆಯಾಗಲಿದೆ. ವಿತ್ತೀಯ ಕೊರತೆ, ಹಣದುಬ್ಬರ ಮತ್ತಿತರ ವಿಚಾರಗಳಿಗೆ ಸಂಬಂಧಿಸಿ ಸರ್ಕಾರ ಬಜೆಟ್​ನಲ್ಲಿ ಏನು ಕ್ರಮ ಕೈಗೊಳ್ಳಲಿದೆ ಎಂಬ ಆಧಾರದಲ್ಲಿ ಆರ್​ಬಿಐ ತನ್ನ ಮುಂದಿನ ನೀತಿಯನ್ನು ಪ್ರಕಟ ಮಾಡುವ ಸಾಧ್ಯತೆ ಹೆಚ್ಚಾಗಿದೆ.[ರೆಪೋ ದರ ಇಳಿಕೆ: ಗೃಹಸಾಲ, ವಾಹನ ಸಾಲ ಬಡ್ಡಿದರ ಇಳಿಕೆ]

No rate cut by RBI in monetary policy February 2

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬೆಳವಣಿಗೆ ಒಂದೇ ಬಗೆಯಲ್ಲಿ ಸಾಗಲಿದೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಬಂಡವಾಳ ಕೊರತೆ ಇಲ್ಲ. ಈಗ ಇರುವ ಪದ್ಧತಿಯನ್ನು ಕಾಯ್ದುಕೊಂಡು ಹೋದರೆ ಸಾಕು ಎಂದು ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ತಿಳಿಸಿದ್ದಾರೆ.

ಕಳೆದ ಅಕ್ಟೋಬರ್ ನಲ್ಲಿ ಹಣಕಾಸು ನೀತಿ ಪ್ರಕಟ ಮಾಡಿದ್ದ ವೇಳೆ ರೆಪೋ ದರ ಇಳಿಕೆ ಮಾಡಿ ಮನೆ, ವಾಹನ ಇನ್ನಿತರ ಸಾಲದ ಮೇಲಿನ ಬಡ್ಡಿದರ ಇಳಿಕೆ ಮಾಡಲಾಗಿತ್ತು. 30 ಲಕ್ಷ ರು. ಹಾಗೂ ಅದಕ್ಕಿಂತ ಕಡಿಮೆ ಮೊತ್ತದ ಗೃಹ ಸಾಲದ ಮೇಲೆ ಶೇಕಡ 90ರಷ್ಟು ಮೊತ್ತವನ್ನು ಬ್ಯಾಂಕ್​ಗಳು ಗ್ರಾಹಕರಿಗೆ ಮಂಜೂರು ಮಾಡಬಹುದು ಎಂದು ಆರ್​ಬಿಐ ತಿಳಿಸಿತ್ತು.[ಸಾಲ ಮಾಡಿ ಮನೆ ಕಟ್ಟುವವರಿಗೆ ಸಿಹಿ ಸುದ್ದಿ]

ಹಣದುಬ್ಬರ ಬದಲಾವಣೆ ಇಲ್ಲ
ಸದ್ಯ ದೇಶದ ಅರ್ಥ ವ್ಯವಸ್ಥೆಯ ಮೇಲೆ ಯಾವ ಅಂಶಗಳು ಗಮನಾರ್ಹ ಪ್ರಭಾವ ಬೀರುತ್ತಿಲ್ಲ. ಹಣದುಬ್ಬರ ಸಹ ಒಂದೆ ಬಗೆಯಲ್ಲಿ ಸಾಗುತ್ತಿದೆ. ಯಾವುದೇ ಬದಲಾವಣೆಗಳು ಇದ್ದರೂ ಕೇಂದ್ರ ಸರ್ಕಾರದ ಹಣಕಾಸು ಬಜೆಟ್ ಮಂಡಿಸಿದ ನಂತರ ಎಂದು ರಾಜನ್ ಸ್ಪಷ್ಟಪಡಿಸಿದ್ದಾರೆ.

English summary
Reserve Bank Of India [RBI] Governor Raghuram Rajan kept policy rate on hold at 6.75 percent on Tuesday, as widely expected, opting to wait until after the government's annual budget statement at the end February to decide on whether to cut interest rates further.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X