India
  • search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಮುಂದೆ ಈ ವಹಿವಾಟು ನಡೆಸಲು ಒಟಿಪಿ ಅಗತ್ಯವಿಲ್ಲ: ಆರ್‌ಬಿಐ ಹೊಸ ನಿಯಮ

|
Google Oneindia Kannada News

15,000 ರುಪಾಯಿವರೆಗಿನ ಸ್ವಯಂ ಚಾಲಿತ ವಹಿವಾಟುಗಳಿಗೆ ಒನ್ ಟೈಮ್ ಪಾಸ್‌ವರ್ಡ್‌ (ಒಟಿಪಿ) ಮೂಲಕ ದೃಢೀಕರಿಸುವ ಅಗತ್ಯವಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ತಿಳಿಸಿದೆ.

ವಿಮಾ ಪ್ರೀಮಿಯಂ, ವಿವಿಧ ಚಂದಾದಾರಿಕೆಗಳು, ಶಿಕ್ಷಣ ಶುಲ್ಕ ಮುಂತಾದ ದೊಡ್ಡ ಮೌಲ್ಯದ ಪಾವತಿಗಳನ್ನು ಸುಲಭಗೊಳಿಸಲು ಮಿತಿ ಹೆಚ್ಚಳ ಮಾಡುವಂತೆ ಸೇವಾದಾರರು ಆರ್‌ಬಿಐಗೆ ಮನವಿ ಸಲ್ಲಿಸಿದ್ದರು. ಮನವಿ ಪುರಸ್ಕರಿಸಿರುವ ಆರ್‌ಬಿಐ ಈಗ ಮಿತಿ ಹೆಚ್ಚುಮಾಡಿ ನಿರ್ಧಾರ ತೆಗೆದುಕೊಂಡಿದೆ.

Fact check: 'ಕ್ಯಾನ್ಸಲ್' ಬಟನ್ ಒತ್ತಿದರೆ ಎಟಿಎಂ ಪಿನ್ ರಕ್ಷಿಸಬಹುದಾ?Fact check: 'ಕ್ಯಾನ್ಸಲ್' ಬಟನ್ ಒತ್ತಿದರೆ ಎಟಿಎಂ ಪಿನ್ ರಕ್ಷಿಸಬಹುದಾ?

"ಗ್ರಾಹಕರ ಅನುಕೂಲತೆಯನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಚೌಕಟ್ಟಿನ ಅಡಿಯಲ್ಲಿ ಲಭ್ಯವಿರುವ ಪ್ರಯೋಜನಗಳನ್ನು ಬಳಸಿಕೊಳ್ಳಲು, ಪ್ರತಿ ಪುನರಾವರ್ತಿತ ಪಾವತಿಗೆ ಮಿತಿಯನ್ನು 5,000 ರುಪಾಯಿಗಳಿಂದ 15,000 ರುಪಾಯಿಗಳಿಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ" ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಹೊಸ ನಿಯಮದ ಕುರಿತು ನಿಯಂತ್ರಕರು ಶೀಘ್ರದಲ್ಲೇ ವಿವರವಾದ ಸೂಚನೆಗಳನ್ನು ನೀಡುವ ನಿರೀಕ್ಷೆ ಇದೆ.

ಆರ್‌ಬಿಐ ಆಗಸ್ಟ್ 2019 ರಲ್ಲಿ ಪುನರಾವರ್ತಿತ ಪಾವತಿಗಳನ್ನು ಪ್ರಕ್ರಿಯೆಗೊಳಿಸಲು ಹೊಸ ನಿಯಮ ಹೊರಡಿಸಿತ್ತು. ಆರ್‌ಬಿಐನ ಹೊಸ ನಿಯಮಗಳ ಪ್ರಕಾರ ಬ್ಯಾಂಕ್‌ಗಳು ಪಾವತಿಗೆ ಕನಿಷ್ಠ 24 ಗಂಟೆಗಳ ಮೊದಲು ಗ್ರಾಹಕರಿಗೆ ಹಣ ಕಡಿತಗೊಳಿಸುವ ಬಗ್ಗೆ ಅಧಿಸೂಚನೆಯನ್ನು ಕಳುಹಿಸಿದರೆ ಮಾತ್ರ ಸ್ವಯಂ-ಡೆಬಿಟ್ ವಹಿವಾಟುಗಳನ್ನು ಪೂರ್ಣಗೊಳಿಸಬಹುದಾಗಿತ್ತು.

ಇ-ಮ್ಯಾಂಡೇಟ್ ಆಧಾರಿತ ಮರುಕಳಿಸುವ ಪಾವತಿಗಳ ಪ್ರಕ್ರಿಯೆಗೆ, 5000 ರುಪಾಯಿಗಳಿಗಿಂದ ಹೆಚ್ಚಿನ ಪಾವತಿ ಮಾಡಲು ದೃಢೀಕರಣಕ್ಕೆ ಹೆಚ್ಚುವರಿ ಅಂಶದ (ಎಎಫ್‌ಎ) ಅಗತ್ಯವಿತ್ತು. ಗ್ರಾಹಕರು ಅಂತಹ ಪಾವತಿಗಳನ್ನು ಒಟಿಪಿ ಮೂಲಕ ದೃಢೀಕರಿಸುವ ಅಗತ್ಯವಿದೆ.

No Need to Input OTP For Auto-Transactions Up To Rs 15,000: RBI

ಇಲ್ಲಿಯವರೆಗೆ, ಈ ಚೌಕಟ್ಟಿನ ಅಡಿಯಲ್ಲಿ 3,400 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ವ್ಯಾಪಾರಿಗಳನ್ನು ಒಳಗೊಂಡಂತೆ 6.25 ಕೋಟಿ ಆದೇಶಗಳನ್ನು ನೋಂದಾಯಿಸಲಾಗಿದೆ. ಉದ್ಯಮದ ಅಂದಾಜುಗಳು ಪುನರಾವರ್ತಿತ ವಹಿವಾಟುಗಳ ಮೂಲಕ ಅಂತಹ ಪಾವತಿಯ ಪರಿಮಾಣಗಳನ್ನು ವಾರ್ಷಿಕ ಒಟ್ಟು ವಹಿವಾಟು ಮೌಲ್ಯದಲ್ಲಿ (GTV) 2 ಶತಕೋಟಿ ಡಾಲರ್ ಮೊತ್ತವನ್ನು ಸೂಚಿಸುತ್ತವೆ.

RBI ಮಹತ್ವದ ನಿರ್ಧಾರ: ಕರೆನ್ಸಿ ನೋಟಿನಲ್ಲಿ ಗಾಂಧಿ ಜೊತೆ ಮತ್ತಿಬ್ಬರ ಚಿತ್ರ?RBI ಮಹತ್ವದ ನಿರ್ಧಾರ: ಕರೆನ್ಸಿ ನೋಟಿನಲ್ಲಿ ಗಾಂಧಿ ಜೊತೆ ಮತ್ತಿಬ್ಬರ ಚಿತ್ರ?

ಇಷ್ಟೇ ಅಲ್ಲದೆ ಯುಪಿಐ ಪ್ಲಾಟ್‌ಫಾರ್ಮ್‌ಗೆ ಕ್ರೆಡಿಟ್ ಕಾರ್ಡ್‌ಗಳನ್ನು ಲಿಂಕ್ ಮಾಡಲು ಅವಕಾಶ ನೀಡುವ ಪ್ರಸ್ತಾಪವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊಂದಿದೆ ಎಂದು ಗವರ್ನರ್ ಶಕ್ತಿಕಾಂತ್‌ ದಾಸ್‌ ಬುಧವಾರ ಹೇಳಿದ್ದಾರೆ. ಸಹಕಾರ ಬ್ಯಾಂಕ್‌ಗಳಲ್ಲಿನ ಗೃಹ ಸಾಲದ ಗರಿಷ್ಠ ಮಿತಿ ಹೆಚ್ಚಳದಂತಹ ಮಹತ್ವದ ಘೋಷಣೆಗಳನ್ನೂ ಮಾಡಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
The RBI on Wednesday said auto-transactions up to Rs 15,000 no longer require customers to authenticate such payments manually with a OTP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X