ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಾಯ್ ಆದೇಶ: ಜಿಯೋ ಸಮ್ಮರ್ ಆಫರ್ ನಲ್ಲಿ ಬದಲಾವಣೆ

ಜಿಯೋ ವಿರುದ್ಧ ಇತರ ಟೆಲಿಕಾಂ ಕಂಪನಿಗಳು ಟ್ರಾಯ್ ಗೆ ದೂರು ನೀಡಿದ್ದವು. ಈ ಹಿನ್ನೆಲೆಯಲ್ಲಿ, ಟ್ರಾಯ್ ಸಂಸ್ಥೆಯು ಜಿಯೋ ಸಂಸ್ಥೆಗೆ ಈಗ ಚಾಲ್ತಿಯಲ್ಲಿರುವ ಮೂರು ತಿಂಗಳ ಸಮ್ಮರ್ ಆಫರ್ ನಿಲ್ಲಿಸುವಂತೆ ಸೂಚಿಸಿದೆ.

|
Google Oneindia Kannada News

ನವದೆಹಲಿ, ಏಪ್ರಿಲ್ 6: ಹೆಚ್ಚೆಚ್ಚು ಗ್ರಾಹಕರನ್ನು ಸೆಳೆಯಲು ಜಿಯೋ ಟೆಲಿಕಾಂ ಸಂಸ್ಥೆಯು ಪದೇ ಪದೇ ನೀಡುತ್ತಿದ್ದ ಆಫರ್ ಗಳ ಭರಾಟೆಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ.

ಇತ್ತೀಚೆಗೆ, ಆ ಕಂಪನಿಯು ಬಿಡುಗಡೆಗೊಳಿಸಿದ್ದ ಜಿಯೋ ಸಮ್ಮರ್ ಆಫರ್ ಅನ್ನು ಬದಲಿಸಿಕೊಳ್ಳುವಂತೆ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಆದೇಶಿದ್ದು, ಈ ಹಿನ್ನೆಲೆಯಲ್ಲಿ ತನ್ನ ಸಮ್ಮರ್ ಆಫರ್ ನಲ್ಲಿ ಕೆಲ ಬದಲಾವಣೆಗಳನ್ನು ಅದು ಮಾಡಿಕೊಂಡಿದೆ.

No more freebies: Trai forces Reliance Jio to withdraw Summer Surprise offer

ಕಳೆದ ವರ್ಷ ಜಿಯೋ ಸಂಸ್ಥೆ ಆರಂಭವಾದಾಗಿನಿಂದ ಒಂದಿಲ್ಲೊಂದು ಆಫರ್ ಗಳಲ್ಲಿ ತನ್ನ ಗ್ರಾಹಕರನ್ನು ತೇಲಾಡಿಸುತ್ತಿರುವ ಜಿಯೋ ವಿರುದ್ಧ ಇತರ ಟೆಲಿಕಾಂ ಕಂಪನಿಗಳು ಟ್ರಾಯ್ ಗೆ ದೂರು ನೀಡಿದ್ದವು. ಈ ಹಿನ್ನೆಲೆಯಲ್ಲಿ, ಟ್ರಾಯ್ ಸಂಸ್ಥೆಯು ಜಿಯೋ ಸಂಸ್ಥೆಗೆ ಈಗ ಚಾಲ್ತಿಯಲ್ಲಿರುವ ಮೂರು ತಿಂಗಳ ಸಮ್ಮರ್ ಆಫರ್ ನಿಲ್ಲಿಸುವಂತೆ ಸೂಚಿಸಿದೆ.

ಕಳೆದ ತಿಂಗಳ 31ರಂದು ಜಿಯೋ ಸಮ್ಮರ್ ಆಫರ್ ಘೋಷಿಸಿದ್ದ ಜಿಯೋ ಸಂಸ್ಥೆ, ತನ್ನಲ್ಲಿ ಪ್ರೈಮ್ ಸದಸ್ಯತ್ವ ಪಡೆದ ತನ್ನ ಗ್ರಾಹಕರು 303 ರು. ಗಳಿಗೆ ರೀಚಾರ್ಜ್ ಮಾಡಿಸಿದರೆ ಸಾಕು ಅವರು ಮೂರು ತಿಂಗಳ ಕಾಲ ಉಚಿತವಾಗಿ ಕರೆ ಹಾಗೂ ಡೇಟಾ ಸೌಕರ್ಯ ಪಡೆಯಬಹುದಾಗಿತ್ತು. ಆದರೆ, ಈ ಸೌಲಭ್ಯಕ್ಕೆ ಬ್ರೇಕ್ ಬಿದ್ದಿದ್ದು, 303 ಹಾಗೂ ಅದಕ್ಕಿಂತ ಹೆಚ್ಚು ರು.ಗಳ ರೀಚಾರ್ಜ್ ಮಾಡಿಸುವವರು, ಇತರ ನೆಟ್ ವರ್ಕ್ ಗಳಂತೆ ಕೇವಲ 30 ದಿನಗಳಿಗೆ ಮಾತ್ರ ಜಿಯೋ ಸೌಲಭ್ಯ ಪಡೆಯಲಿದ್ದಾರೆ.

ಆದರೆ, ಪ್ರೈಮ್ ಸದಸ್ಯತ್ವ ಪಡೆದು 303 ಹಾಗೂ ಅದಕ್ಕಿಂತ ಮೇಲ್ಪಟ್ಟ ದರಗಳಲ್ಲಿ ರೀಚಾರ್ಜ್ ಮಾಡಿಸಿ ಸಮ್ಮರ್ ಆಫರ್ ನಲ್ಲಿ ನೋಂದಾಯಿಸಿಕೊಂಡಿದ್ದ ಗ್ರಾಹಕರಿಗೆ ಈ ಮೊದಲು ಘೋಷಿಸಿದ್ದಂತೆ 3 ತಿಂಗಳ ಉಚಿತ ಡೇಟಾ, ಕರೆ ಆಫರ್ ಮುಂದುವರಿಯಲಿದೆ.

English summary
Reliance Jio today was forced to withdraw its Summer Surprise offer after telecom regulator Trai advised the teleco to do so. On 31st of March, Jio announced its JIO SUMMER SURPRISE.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X