ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2 ಸಾವಿರದ ತನಕದ ಡೆಬಿಟ್ ಕಾರ್ಡ್‌ ವಹಿವಾಟಿಗೆ ಎಂಡಿಆರ್‌ ಶುಲ್ಕವಿಲ್ಲ

|
Google Oneindia Kannada News

ನವದೆಹಲಿ, ಡಿಸೆಂಬರ್ 15 : ಡೆಬಿಟ್ ಕಾರ್ಡ್ ಬಳಸಿ 2 ಸಾವಿರದ ತನಕ ಮೊತ್ತ ಪಾವತಿ ಮಾಡುವವರು ಎಂಡಿಆರ್ ಶುಲ್ಕವನ್ನು ಪಾವತಿ ಮಾಡಬೇಕಾಗಿಲ್ಲ. ಎರಡು ವರ್ಷದ ತನಕ ಈ ನಿಯಮ ಜಾರಿಯಲ್ಲಿರುತ್ತದೆ.

ಡಿಜಿಟಲ್ ವಹಿವಾಟನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಈ ಶುಲ್ಕ ಕಡಿತಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಕೇಂದ್ರ ಸರ್ಕಾರವೇ ವರ್ತಕರ ರಿಯಾಯಿತಿ ದರವನ್ನು (ಎಂಡಿಆರ್‌) ಪಾವತಿ ಮಾಡಲಿದೆ. ಜನವರಿ 1ರಿಂದ ಈ ನಿಯಮ ಜಾರಿಗೆ ಬರಲಿದೆ.

ಸಣ್ಣ ವರ್ತಕರಿಗೆ ಆರ್ ಬಿಐ ಕೊಡುಗೆ: ಡೆಬಿಟ್ ಕಾರ್ಡ್ ಎಂಡಿಆರ್ ಕಡಿತಸಣ್ಣ ವರ್ತಕರಿಗೆ ಆರ್ ಬಿಐ ಕೊಡುಗೆ: ಡೆಬಿಟ್ ಕಾರ್ಡ್ ಎಂಡಿಆರ್ ಕಡಿತ

Debit

ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಈ ಕುರಿತು ಮಾಹಿತಿ ನೀಡಿದರು. 'ಡೆಬಿಟ್ ಕಾರ್ಡ್, ಭೀಮ್ ಆಪ್ಲಿಕೇಶನ್ ಅಥವ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ ಮೂಲಕ ಹಣ ಪಾವತಿಸಿದ ಶುಲ್ಕವನ್ನು ಕೇಂದ್ರ ಸರ್ಕಾರವು ಬ್ಯಾಂಕುಗಳಿಗೆ ಮರು ಪಾವತಿ ಮಾಡಲಿದೆ' ಎಂದರು.

ನೋಟ್ ಬ್ಯಾನ್ ನಂತರ 25 ಸಾವಿರ ಕೋಟಿ ರು. ಡಿಜಿಟಲ್ ವ್ಯವಹಾರ!ನೋಟ್ ಬ್ಯಾನ್ ನಂತರ 25 ಸಾವಿರ ಕೋಟಿ ರು. ಡಿಜಿಟಲ್ ವ್ಯವಹಾರ!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ. ವರ್ತಕರ ರಿಯಾಯಿತಿ ದರವನ್ನು ಕೇಂದ್ರ ಸರ್ಕಾರ ಪಾವತಿ ಮಾಡುವುದರಿಂದ ಬೊಕ್ಕಸಕ್ಕೆ 2,512 ಕೋಟಿ ಹೊರೆಯಾಗಲಿದೆ.

ಡಿಜಿಟಲ್ ಪಾವತಿ ಉತ್ತೇಜನಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದಾಗಿ 2 ಸಾವಿರ ರೂ. ತನಕ ಪಾವತಿ ಮಾಡುವ ಗ್ರಾಹಕರು ಮತ್ತು ವರ್ತಕರ ಮೇಲೆ ಎಂಡಿಆರ್ ಶುಲ್ಕದ ಹೊರೆ ಬೀಳುವುದಿಲ್ಲ.

English summary
In an effort to boost digital payment Union Cabinet has decided to waive the merchant discount rate (MDR) applicable on all debit cards, BHIM and UPI transactions up to Rs 2,000. It will come to effect from January 1, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X