• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

10 ಬ್ಯಾಂಕುಗಳು ವಿಲೀನವಾಗಿ 4 ಬ್ಯಾಂಕ್, ಉದ್ಯೋಗ ಕಡಿತ ಭೀತಿ ಬೇಡ

|

ನವದೆಹಲಿ, ಆಗಸ್ಟ್ 30: ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಗಾಗಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಗಳ ಪೈಕಿ ಬ್ಯಾಂಕ್ ವಿಲೀನ ಪ್ರಕ್ರಿಯೆಯೂ ಸೇರಿದೆ. ದೇಶದ ಜಿಡಿಪಿ ಮೊದಲ ತ್ರೈಮಾಸಿಕದಲ್ಲೇ ಕುಸಿದು 5% ರಷ್ಟಿದೆ. ಆಟೋಮೊಬೈಲ್ ಸೇರಿ ಉತ್ಪಾದನಾ ಕ್ಷೇತ್ರಗಳಲ್ಲಿ ಉದ್ಯೋಗ ಕಡಿತ ಮುಂದುವರೆದಿದೆ. ಹೀಗಾಗಿ, ಇಂದು ಘೋಷಣೆಗೊಂಡ ಬ್ಯಾಂಕ್ ವಿಲೀನ ಪ್ರಕ್ರಿಯೆಯಿಂದ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದ ಸಿಬ್ಬಂದಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಭಯ ನೀಡಿದ್ದಾರೆ.

ವಿಲೀನದ ಬಳಿಕ ಯಾವ ಬ್ಯಾಂಕಿನ ಮಾರುಕಟ್ಟೆ ಮೌಲ್ಯ ಎಷ್ಟಾಗಲಿದೆ?ವಿಲೀನದ ಬಳಿಕ ಯಾವ ಬ್ಯಾಂಕಿನ ಮಾರುಕಟ್ಟೆ ಮೌಲ್ಯ ಎಷ್ಟಾಗಲಿದೆ?

"ಈ ಹಿಂದೆ ಬ್ಯಾಂಕ್ ಆಫ್ ಬರೋಡಾ, ವಿಜಯ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್ ವಿಲೀನವಾಗಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ವಿಲೀನದ ಬಳಿಕ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದು ಹಾಕಿಲ್ಲ, ಹೀಗಾಗಿ, ಈಗ 10 ಬ್ಯಾಂಕ್ ವಿಲೀನದ ಬಳಿಕ ಹೊರ ಹೊಮ್ಮುವ 4 ಬ್ಯಾಂಕ್ ಗಳ ಉದ್ಯೋಗಿಗಳು ಸೇರಿದಂತೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಕಡಿತದ ಭೀತಿ ಬೇಡ" ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಬ್ಯಾಂಕ್ ಗಳ ಒಟ್ಟಾರೆ NPA (ಅನುತ್ಪಾದಕ ಆಸ್ತಿ) 7.90 ಲಕ್ಷ ಕೋಟಿಬ್ಯಾಂಕ್ ಗಳ ಒಟ್ಟಾರೆ NPA (ಅನುತ್ಪಾದಕ ಆಸ್ತಿ) 7.90 ಲಕ್ಷ ಕೋಟಿ

ಬ್ಯಾಂಕಿಂಗ್ ಕ್ಷೇತ್ರಕ್ಕೆ ಉತ್ತೇಜನ:
2017ರಲ್ಲಿ ಒಟ್ಟಾರೆ 27 ಸಾರ್ವಜನಿಕ ವಲಯದ ಬ್ಯಾಂಕ್(PSB) ಗಳಿದ್ದವು ಈಗ 12ಕ್ಕಿಳಿದಿವೆ. 2018-19ರ ಆರ್ಥಿಕ ವರ್ಷದಲ್ಲಿ 65,000 ಕೋಟಿ ರು PSBಗಳ ಮರು ಮಾರುಕಟ್ಟೆ ಮೌಲ್ಯಕ್ಕೆ ಮೀಸಲಿಡಲಾಗಿತ್ತು, ಡಿಸೆಂಬರ್ 31, 2018ರ ಅವಧಿಗೆ 51,533 ಕೋಟಿ ರು ನೀಡಲಾಗಿತ್ತು. ಇದಕ್ಕೂ ಹಿಂದಿನ ಆರ್ಥಿಕ ವರ್ಷದಲ್ಲಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಉತ್ತೇಜನ ನೀಡಲು ಸರ್ಕಾರ 90,000 ಕೋಟಿ ಮೀಸಲಿಟ್ಟಿತ್ತು.

ಈಗ 10 PSBಗಳಿಗೆ ಒಟ್ಟಾರೆ, 55,250 ಕೋಟಿ ರು ತುಂಬಲಾಗುತ್ತಿದ್ದು, ಇದರಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ನೇತೃತ್ವದ ವಿಲೀನಕ್ಕೆ 16,000 ಕೋಟಿ ರು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ವಿಲೀನಕ್ಕೆ 11,700 ಕೋಟಿ ರು, ಕೆನರಾ ಬ್ಯಾಂಕ್ ನೇತೃತ್ವದ ವಿಲೀನಕ್ಕೆ 6,500 ಕೋಟಿ ರು ಹಾಗೂ ಇಂಡಿಯನ್ ಬ್ಯಾಂಕ್ ನೇತೃತ್ವದ ವಿಲೀನಕ್ಕೆ 2,500 ಕೋಟಿ ರು ಸಿಗಲಿದೆ.

English summary
Finance Minister Nirmala Sitharaman has clarified that no bank employee will lose his/her job as a result of the bank mergers announced today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X