• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಾಹನ ಸವಾರರೇ ಗಮನಿಸಿ! ಜೂನ್ 30ರಂದು ತೈಲ ಬೆಲೆ ಸ್ಥಿತಿಗತಿ

|

ನವದೆಹಲಿ, ಜೂನ್ 30: ಜೂನ್ 7ರಿಂದ ಪ್ರತಿದಿನದಂದು ತೈಲ ಬೆಲೆಯನ್ನು ಪರಿಷ್ಕರಿಸುತ್ತಾ ಬಂದಿದ್ದ ಸರ್ಕಾರಿ ಸ್ವಾಮ್ಯದ ಪ್ರಮುಖ ಮೂರು ತೈಲ ಕಂಪನಿಗಳು ಜೂನ್ 30ರಂದು ಬೆಲೆ ಏರಿಕೆ ಮಾಡಿಲ್ಲ. ಜೂನ್ 28ರಂದು ಕೂಡಾ ಇದೇ ರೀತಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿರಲಿಲ್ಲ.

ಸತತವಾಗಿ 22ನೇ ದಿನಗಳ ಕಾಲ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಪರಿಷ್ಕರಣೆ ಮಾಡಲಾಗಿದೆ. ಆದರೆ, ಜೂನ್ 30ರ ಮಂಗಳವಾರದಂದು ಯಾವುದೇ ಏರಿಕೆ, ಇಳಿಕೆ ಇಲ್ಲ ಎಂದು ಸಂಸ್ಥೆಗಳು ಹೇಳಿವೆ. ಸೋಮವಾರದಂದು ಡೀಸೆಲ್ ದರಲ್ಲಿ 13ಪೈಸೆ ಪ್ರತಿ ಲೀಟರ್ ನಂತೆ ಹೆಚ್ಚಳ, ಹಾಗೂ ಪೆಟ್ರೋಲ್ ದರದಲ್ಲಿ 05 ಪೈಸೆ ಏರಿಕೆಯಾಗಿತ್ತು.

ಒಂದು ದಿನದ ವಿರಾಮವಷ್ಟೇ: ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ

ದೆಹಲಿಯಲ್ಲಿ ಮಂಗಳವಾರದಂದು ಡೀಸೆಲ್ ದರ ಪ್ರತಿ ಲೀಟರ್ ಗೆ 80.53 ರು ಇದ್ದರೆ, ಪೆಟ್ರೋಲ್ ದರ ಪ್ರತಿ ಲೀಟರ್ ಗೆ 80.43ರು ನಷ್ಟಿದೆ. ಒಟ್ಟಾರೆ 22ದಿನಗಳಿಂದ ಹೆಚ್ಚು ಕಡಿಮೆ ಪೆಟ್ರೋಲ್, ಡೀಸೆಲ್ ಬೆಲೆ ತಲಾ 10 ರುನಂತೆ ಹೆಚ್ಚಳ ಕಂಡಿವೆ.

ಜೂನ್ 7ರಂದು ಸತತ 83 ದಿನಗಳ ವಿರಾಮದ ಬಳಿಕ ದೇಶಾದ್ಯಂತ ಇಂಧನ ದರ ಪರಿಷ್ಕರಣೆ ಪುನಾರಂಭಗೊಂಡಿತು. ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ಪರಿಷ್ಕರಿಸುತ್ತಾ ಬಂದಿವೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರ, ಅಮೆರಿಕ-ಚೀನಾ ನಡುವಿನ ವಹಿವಾಟು ಆರಂಭದ ಮಾತುಕತೆ, ಕೊರೊನಾವೈರಸ್ ಆರ್ಥಿಕ ಹೊಡೆತ, ಭಾರತದಲ್ಲಿ ತೈಲದ ಮೇಲೆ ಹೆಚ್ಚಿದ ಅಬಕಾರಿ ಸುಂಕ ಎಲ್ಲವೂ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ.

ಬೆಂಗಳೂರಿನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 83.04 ರು ನಷ್ಟಿದ್ದರೆ, ಡೀಸೆಲ್ ದರ ಪ್ರತಿ ಲೀಟರ್ ಗೆ 76.58 ರು ನಷ್ಟಿದೆ.

English summary
Delhi: Delhi: No change in the price of petrol or diesel in the national capital today. Price of petrol stands at Rs 80.43 and that of diesel at Rs 80.53.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X