ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್ ಉದ್ಯೋಗಿಗಳಿಗೆ 'ವಸ್ತ್ರ ಸ್ವಾತಂತ್ರ್ಯ' ಕೊಟ್ಟ ಸಿಕ್ಕಾ

By Mahesh
|
Google Oneindia Kannada News

ಬೆಂಗಳೂರು, ಜೂ.2: ಉದ್ಯೋಗಿಗಳಿಗೆ ಪ್ರತ್ಯೇಕ ಇಮೇಲ್ ಕಳಿಸಿ ಕಾಳಜಿ ತೋರುವ ಮೂಲಕ ಗಮನ ಸೆಳೆದಿದ್ದ ಇನ್ಫೋಸಿಸ್ ಸಿಇಒ ವಿಶಾಲ್ ಸಿಕ್ಕಾ ಅವರು ಮತ್ತೊಂದು ದಿಟ್ಟ ಕ್ರಮಕ್ಕೆ ಮುಂದಾಗಿದ್ದಾರೆ. ಇನ್ಫೋಸಿಸ್ ಎಂದರೆ ಸ್ಕೂಲ್, ಕಾಲೇಜಿನ ರೀತಿ ಡ್ರೆಸ್ ಕೋಡ್ ಎಂಬ ಮಾತನ್ನು ತುಂಡರಿಸಿದ್ದಾರೆ.

ಡ್ರೆಸ್ ಕೋಡ್ ಇನ್ಮುಂದೆ ಇರಲ್ಲ, ಜೀನ್ಸ್, ಟೀಶರ್ಟ್ ಹಾಕಿಕೊಂಡು ಬನ್ನಿ ಪರ್ವಾಗಿಲ್ಲ ಎಂದು ಇನ್ಫೋಸಿಸ್ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಇ ಮೇಲ್ ಕಳಿಸಿದೆ. ಜೂ,1ರಿಂದಲೇ ಈ ವ್ಯವಸ್ಥೆ ಜಾರಿಗೆ ಬರಲಿದೆ.ನಿಮ್ಮ ನೆಚ್ಚಿನ ಟೀ ಶರ್ಟ್, ಜೀನ್ಸ್ ಪ್ಯಾಂಟ್ ಹಾಕಿಕೊಂಡು ಪ್ರತಿದಿನ ಉದ್ಯೋಗಕ್ಕೆ ಬನ್ನಿ, ನಿಮ್ಮ ಅಗತ್ಯಕ್ಕೆ ತಕ್ಕಂತೆ ನಿಯಮ ಬದಲಾಯಿಸಲು ನಾವು ಸಿದ್ಧ ಎಂದು ಇ ಮೇಲ್ ಕಳಿಸಲಾಗಿದೆ. [ಐಫೋನ್ ಕೊಡುಗೆ ನೀಡಿದ ಸಿಕ್ಕಾ]

No dress code at Infosys, employees can flaunt smart casuals all week long

ಕಳೆದ ಒಂದು ವಾರದಿಂದ ಡ್ರೆಸ್ ಕೋಡ್, ಟೈ, ಸೂಟು ಬೂಟು ಎಲ್ಲವೂ ಇನ್ಮುಂದೆ ಇರಲ್ವಂತೆ ಎಂಬ ಸುದ್ದಿ ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಹರಿದಾಡುತ್ತಿತ್ತು. ಈಗ ಇದು ಜಾರಿಗೊಂಡಿದೆ. ಇದಕ್ಕೂ ಮುನ್ನ ಇತರೆ ಕೆಲವು ಐಟಿ ಕಂಪನಿಗಳಂತೆ ಇನ್ಫೋಸಿಸ್ ನಲ್ಲಿ ಶುಕ್ರವಾರ ಮಾತ್ರ ಕ್ಯಾಷುಯಲ್ ಡ್ರೆಸ್ ಹಾಕಿಕೊಂಡು ಕಚೇರಿಗೆ ಹೋಗಬಹುದಿತ್ತು. [ಸಿಕ್ಕಾ ಸಿಕ್ಕಾಪಟ್ಟೆ ಸಂಬಳ ಏರಿಸ್ತಾರಪ್ಪ!]

ಎಷ್ಟೋ ಸಂದರ್ಭಗಳಲ್ಲಿ ಟೈ ಕಟ್ಟಿಕೊಳ್ಳದಿದ್ದರೆ ಮುಖ್ಯದ್ವಾರದಿಂದ ಒಳಗ್ಗೆ ಪ್ರವೇಶವೇ ಸಿಗುತ್ತಿರಲಿಲ್ಲ. ಈ ಬಗ್ಗೆ ಸಾಕಷ್ಟು ಅಪಸ್ವರಗಳು ಕೇಳಿ ಬಂದ ಮೇಲೆ ಕಳೆದ ವರ್ಷ ಟೈ ಕಡ್ಡಾಯವನ್ನು ಇನ್ಫಿ ಹಿಂದೆ ಪಡೆದಿತ್ತು.

ಈಗ ಸಿಕ್ಕಾರಂತೆ ಕಪ್ಪು ಟೀ ಶರ್ಟ್ ಜೀನ್ಸ್ ಪ್ಯಾಂಟ್ ಧರಿಸಿ ಇನ್ಫಿ ಉದ್ಯೋಗಿಗಳು ಕಾರ್ಯ ನಿರ್ವಹಿಸಬಹುದಾಗಿದೆ. ಇದೆಲ್ಲವೂ ಆಟ್ರಿಷನ್ ರೇಟ್ ತಗ್ಗಿಸಿ, ಉದ್ಯೋಗಿಗಳನ್ನು ಕಂಪನಿಯಲ್ಲೇ ಉಳಿಸಿಕೊಳ್ಳಲು ಸಿಕ್ಕಾ ಕೈಗೊಂಡ ಕ್ರಮ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

English summary
Employees at IT major Infosys can now wear business casuals on all working days starting from Monday, as the company has decided to do away with its dress code. The move is considered an attempt by the country's second largest IT services firm to better engage with its employees and arrest attrition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X