ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2,000 ನೋಟು ಮುದ್ರಣವನ್ನ ನಿಲ್ಲಿಸಲ್ಲ: ಅನುರಾಗ್ ಠಾಕೂರ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 19: ಎರಡು ಸಾವಿರ ಮುಖಬೆಲೆಯ ನೋಟುಗಳ ಮುದ್ರಣವನ್ನು ನಿಲ್ಲಿಸುವ ನಿರ್ಧಾರವನ್ನು ಸರ್ಕಾರ ಹೊಂದಿಲ್ಲ ಎಂದು ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ.

ಲೋಕಸಭೆಗೆ ಲಿಖಿತ ಉತ್ತರದ ಮೂಲಕ ತಿಳಿಸಿರುವ ಅನುರಾಗ್ ''ಲಾಕ್‌ಡೌನ್ ಕಾರಣಕ್ಕಾಗಿ ತಾತ್ಕಾಲಿಕವಾಗಿ ನಿಲ್ಲಿಸುವಂತೆ ಆರ್‌ಬಿಐಗೆ ಸೂಚನೆ ನೀಡಲಾಗಿತ್ತು''ಎಂದಿದ್ದಾರೆ.

ಇದರ ಜೊತೆಗೆ 2019-20 ಮತ್ತು 2020-21ರ ಅವಧಿಯಲ್ಲಿ ಒಂದೇ ಒಂದು ಎರಡು ಸಾವಿರ ಮುಖಬೆಲೆಯ ನೋಟು ಮುದ್ರಣವಾಗಿಲ್ಲ ಎಂದು ತಿಳಿಸಿದ್ದಾರೆ.

Rs 2000 notes

"ಆದಾಗ್ಯೂ, ಸರ್ಕಾರವು 2,000 ರೂ ಮುಖಬೆಲೆಯ ನೋಟುಗಳ ಮುದ್ರಣವನ್ನು ನಿಲ್ಲಿಸುವ ಯಾವುದೇ ನಿರ್ಧಾರವಿಲ್ಲ" ಎಂದು ಸಚಿವರು ಹೇಳಿದರು.

2019 ರ ಮಾರ್ಚ್ 31 ರಂದು 32,910 ಲಕ್ಷ ನೋಟುಗಳ ಮುಖಬೆಲೆಗೆ ಹೋಲಿಸಿದರೆ 2020 ರ ಮಾರ್ಚ್ 31 ರ ವೇಳೆಗೆ 27,398 ಲಕ್ಷ ತುಣುಕುಗಳ 2,000 ರೂ . ನೋಟುಗಳು ಚಲಾವಣೆಯಲ್ಲಿವೆ ಎಂದು ಠಾಕೂರ್ ಮಾಹಿತಿ ನೀಡಿದರು.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ದೃಷ್ಟಿಯಿಂದ, ನೋಟುಗಳ ಮುದ್ರಣವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ ಎಂದು ಅವರು ಹೇಳಿದರು.

English summary
The Finance ministry on Saturday informed the lok sabha that no decision has been taken to discontinue the printing of Rs 2,000 denomination currency notes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X