• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗಿಲ್ಲ

|

ಬೆಂಗಳೂರು, ಆ. 31: ಭಾನುವಾರದಂದು ಏರಿಕೆ ಕಂಡಿದ್ದ ಪೆಟ್ರೋಲ್ ದರ ಇಂದು ಯಾವುದೇ ಬದಲಾವಣೆಯಾಗಿಲ್ಲ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 82.03 ರು ನಷ್ಟಿದ್ದರೆ, ಡೀಸೆಲ್ ದರ ಬಹುದಿನಗಳಿಂದ 73.56ರು ನಷ್ಟಿದೆ ಎಂದು ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ.

   Foreign ಹೋಗೋ ಪ್ಲಾನ್ ಇದ್ರೆ ಮರೆತುಬಿಡಿ | Oneindia Kannada

   ದೆಹಲಿಯಲ್ಲಿ ಒಟ್ಟಾರೆ ಕಳೆದ 16 ದಿನಗಳಲ್ಲಿ 13 ದಿನಗಳ ಕಾಲ ಪೆಟ್ರೋಲ್ ಏರಿಕೆ ಕಂಡು ಸುಮಾರು 1.60 ರು ಏರಿಕೆಯಾಗಿತ್ತು.

   ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಏರಿಕೆ ಕಾಣುತ್ತಿದ್ದು, ಬ್ರೆಂಟ್ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್ ಬೆಲೆ 45 ಯುಎಸ್ ಡಾಲರ್ ನಷ್ಟಿತ್ತು.

   ಆಗಸ್ಟ್ 31ರ ದರ ಪಟ್ಟಿ ಪೆಟ್ರೋಲ್ ಹಾಗೂ ಡೀಸೆಲ್ (ಪ್ರತಿ ಲೀಟರ್, ಬೆಲೆ ರು ಗಳಲ್ಲಿ)

   ನಗರ-ಪೆಟ್ರೋಲ್-ಡೀಸೆಲ್

   ದೆಹಲಿ-82.03-73.56

   ಕೋಲ್ಕತಾ-83.52-77.06

   ಮುಂಬೈ-88.68-80.11

   ಚೆನ್ನೈ-85.00-78.86

   ಬೆಂಗಳೂರು-84.39-77.60

   ಡೀಸೆಲ್ ಬೆಲೆ ಬದಲಾಗಿಲ್ಲ:

   ಕಳೆದ 20 ದಿನಗಳಿಂದ ದೆಹಲಿಯಲ್ಲಿ ಡೀಸೆಲ್ ಬೆಲೆ ಬದಲಾಗಿಲ್ಲ. ಪ್ರತಿ ಲೀಟರ್ ಗೆ 73.56 ರು ನಷ್ಟೇ ಇದೆ. ಜುಲೈ 31ರಂದು 8 ರು ಕುಸಿತ ಕಂಡಿತ್ತು. ಕೇಜ್ರಿವಾಲ್ ಸರ್ಕಾರ ವ್ಯಾಟ್ ಇಳಿಸಿದ್ದರ ಪರಿಣಾಮವಿದು. ಮಿಕ್ಕಂತೆ ಮುಂಬೈನಲ್ಲಿ ಪ್ರತಿ ಲೀಟರ್ ಬೆಲೆ 80.11 ರು , ಚೆನ್ನೈನಲ್ಲಿ 78.86ರು, ಕೋಲ್ಕತಾದಲ್ಲಿ 77.06 ರು ನಷ್ಟಿದೆ. ಬೆಂಗಳೂರಲ್ಲಿ ಮಾತ್ರ 28 ಪೈಸೆ ಇಳಿಕೆಯಾಗಿ 77.88 ರು ಇದ್ದ ದರ ಇಂದು 77.60 ರು ಆಗಿದೆ.

   English summary
   Petrol prices not changed across all metros on Monday(Aug 31). Check price on your cities.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X