ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಭಾರತೀಯ ನೋಟಿನಲ್ಲಿ ಗಾಂಧಿ ಜೊತೆ ಟ್ಯಾಗೋರ್, ಕಲಾಂ ಫೋಟೋ ಹಾಕಲ್ಲ

|
Google Oneindia Kannada News

ನವದೆಹಲಿ, ಜೂನ್ 6: ಭಾರತದಲ್ಲಿ ಅಸ್ತಿತ್ವದಲ್ಲಿರುವ ಕರೆನ್ಸಿ ನೋಟುಗಳು ಮತ್ತು ನಾಣ್ಯಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆ ನೀಡಿದೆ.

ದೇಶದ ಕರೆನ್ಸಿಗಳ ಮೇಲೆ ಮಹಾತ್ಮ ಗಾಂಧಿಯವರ ಭಾವಚಿತ್ರವನ್ನು ಬದಲಾಯಿಸುವ ಕುರಿತು ಸಾಕಷ್ಟು ವದಂತಿಗಳು ಹರಡಿದ ಬೆನ್ನಲ್ಲೇ ಆರ್‌ಬಿಐ ಈ ಸ್ಪಷ್ಟನೆ ನೀಡಿದ್ದು, ಎಲ್ಲ ವದಂತಿಗಳನ್ನು ತಳ್ಳಿ ಹಾಕಿದೆ.

 RBI ಮಹತ್ವದ ನಿರ್ಧಾರ: ಕರೆನ್ಸಿ ನೋಟಿನಲ್ಲಿ ಗಾಂಧಿ ಜೊತೆ ಮತ್ತಿಬ್ಬರ ಚಿತ್ರ? RBI ಮಹತ್ವದ ನಿರ್ಧಾರ: ಕರೆನ್ಸಿ ನೋಟಿನಲ್ಲಿ ಗಾಂಧಿ ಜೊತೆ ಮತ್ತಿಬ್ಬರ ಚಿತ್ರ?

ಭಾರತೀಯ ರಿಸರ್ವ್ ಬ್ಯಾಂಕ್ ಕರೆನ್ಸಿ ನೋಟಿನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯ ಚಿತ್ರದ ಜೊತೆಗೆ, ಮತ್ತಿಬ್ಬರು ದೇಶದ ಗಣ್ಯರ ಚಿತ್ರವನ್ನೂ ಹಾಕಲು ಚಿಂತನೆ ನಡೆಸಿದೆ ಎಂದು ವರದಿಯಾಗಿತ್ತು.

No Change in Existing Banknotes and Coins in India: RBI

ಗಾಂಧೀಜಿ ಜೊತೆ ಟ್ಯಾಗೋರ್, ಕಲಾಂ ಫೋಟೋ:

ದೇಶದ ಕರೆನ್ಸಿ ನೋಟುಗಳಲ್ಲಿ ಬಹು ಅಂಕಿಗಳ ವಾಟರ್‌ ಮಾರ್ಕ್‌ ಅನ್ನು ಬಳಸುವ ಉದ್ದೇಶದಿಂದ ಮಹಾತ್ಮ ಗಾಂಧೀಜಿ ಭಾವಚಿತ್ರದ ಜೊತೆಗೆ ರವೀಂದ್ರನಾಥ ಟ್ಯಾಗೋರ್ ಮತ್ತು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಚಿತ್ರವನ್ನೂ ಮುಂದಿನ ದಿನಗಳಲ್ಲಿ ಕರೆನ್ಸಿ ನೋಟಿನಲ್ಲಿ ಬರುವ ಸಾಧ್ಯತೆಯಿದೆ ಎನ್ನುವ ಬಗ್ಗೆ ವರದಿಗಳು ಹರಿದಾಡಿದ್ದವು.

No Change in Existing Banknotes and Coins in India: RBI

ಎರಡು ವಿಭಿನ್ನ ಸೆಟ್ ಕರೆನ್ಸಿ ನೋಟುಗಳ ಪೈಕಿ ಒಂದನ್ನು ಅಂತಿಮಗೊಳಿಸಿ ಕೇಂದ್ರ ವಿತ್ತ ಸಚಿವಾಲಯಕ್ಕೆ ಕಳುಹಿಸಿಕೊಡುವಂತೆ ಐಐಟಿ ಪ್ರಾಧ್ಯಾಪಕ ಶಹಾನಿರಿಗೆ ಸೂಚಿಸಲಾಗಿದೆ. ಉನ್ನತ ಮಟ್ಟದ ಸಭೆಯ ನಂತರ ಈ ಬಗ್ಗೆ ಅಂತಿಮ ನಿರ್ಧಾರವನ್ನು ಕ್ಯಾಬಿನೆಟ್‌ನಲ್ಲಿ ತೆಗೆದುಕೊಳ್ಳಲಾಗುವುದು.

ರಿಸರ್ವ್ ಬ್ಯಾಂಕಿನ ಆಂತರಿಕ ಸಮಿತಿಯು ಎರಡು ವರ್ಷದ ಕೆಳಗೆಯೇ ಮಹಾತ್ಮ ಗಾಂಧಿ ಜೊತೆ ಟ್ಯಾಗೋರ್ ಮತ್ತು ಕಲಾಂ ಅವರ ಚಿತ್ರವನ್ನು ಸೇರಿಸುವಂತೆ ಪ್ರಸ್ತಾಪಿಸಲಾಗಿತ್ತು. ಈ ಹಿನ್ನಲೆ ವಿನ್ಯಾಸವನ್ನು ಸಿದ್ದ ಪಡಿಸುವಂತೆ ಮೈಸೂರು ಮತ್ತು ಹೊಶಂಗಾಬಾದ್ ನಲ್ಲಿರುವ ಕರೆನ್ಸಿ ನೋಟ್ ಮುದ್ರಣಾಲಯಕ್ಕೆ ಸೂಚನೆ ನೀಡಲಾಗಿತ್ತು ಎಂದು ವರದಿಯಾಗಿತ್ತು.

English summary
No Change in Existing Banknotes and Coins in india: RBI Clarifies and Dismisses Rumours about Changing Mahatma Gandhi's Face on Currencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X