ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಉಕ್ಕು ಕಾರ್ಖಾನೆಗೆ 18 ಸಾವಿರ ಕೋಟಿ ರು ಹೂಡಿಕೆ

By Mahesh
|
Google Oneindia Kannada News

ಬೆಂಗಳೂರು, ಜುಲೈ 08: ಸರ್ಕಾರಿ ಸ್ವಾಮ್ಯದ ಎನ್ ಎಂಡಿಸಿ ಈಗ ಕರ್ನಾಟಕದಲ್ಲಿ ಉಕ್ಕಿನ ಘಟಕ ಸ್ಥಾಪನೆಗೆ ಮುಂದಾಗಿದೆ. ವಾರ್ಷಿಕವಾಗಿ 3 ಮಿಲಿಯನ್ ಟನ್ ಉತ್ಪಾದನೆ ಗುರಿ ಹೊಂದಲಾಗಿದ್ದು, 18 ಸಾವಿರ ಕೋಟಿ ರು ಹೂಡಿಕೆ ಮಾಡಲಾಗುತ್ತಿದೆ ಎಂದು ಕೇಂದ್ರ ಉಕ್ಕು ಹಾಗೂ ಗಣಿ ಖಾತೆ ಸಚಿವ ನರೇಂದ್ರ ಸಿಂಗ್ ತೋಮಾರ್ ಹೇಳಿದ್ದಾರೆ.

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಈ ಯೋಜನೆಗೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದರು 2025ರ ವೇಳೆಗೆ ದೇಶದಲ್ಲಿ 300 ಮಿಲಿಯನ್ ಟನ್ ಉಕ್ಕು ಉತ್ಪಾದನೆ ಗುರಿ ಹೊಂದಲಾಗಿದೆ. ಕರ್ನಾಟಕ ಸೇರಿದಂತೆ ಒಡಿಶಾ, ಜಾರ್ಖಂಡ್ ಹಾಗೂ ಛತ್ತೀಸ್ ಗಢದಲ್ಲಿ ಘಟಕಗಳನ್ನು ಸ್ಥಾಪಿಸಲಾಗುತ್ತದೆ.

Narendra Singh Tomar

ಎನ್ ಎಂಡಿಸಿ, ಎಸ್ಎಐಎಲ್ ಹಾಗೂ ಆರ್ ಐಎನ್ ಎಲ್ ಗೆ ಸೂಚಿಸಲಾಗಿದೆ ಎಂದು ಸಚಿವ ತೋಮಾರ್ ವಿವರಿಸಿದರು.

ಕುದುರೆಮುಖ ಕಬ್ಬಿಣ ಅದಿರು ಕಾರ್ಖಾನೆ ಪುನಶ್ಚೇತನದ ಬಗ್ಗೆ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರು ತೆಗೆದುಕೊಂಡ ನಿರ್ಣಯಕ್ಕೆ ತೋಮಾರ್ ಶ್ಲಾಘನೆ ವ್ಯಕ್ತಪಡಿಸಿದರು.

ಹೊಸ ಖನಿಜಯುಕ್ತ ಪರಿಸರ ಹುಡುಕಾಟಕ್ಕಾಗಿ ಭಾರತೀಯ ಸರ್ವೇಕ್ಷಣ ಇಲಾಖೆ ಸುಮಾರು 166 ಕೋಟಿ ರು ಖರ್ಚು ಮಾಡಲಾಗಿದೆ. ಪರಿಸರ ಸಂರಕ್ಷಣೆಗಾಗಿ ಸುಅಮರು 10,000 ಕೋಟಿ ರು ಮೀಸಲಿಡಲಾಗಿದೆ ಎಂದು ತೋಮಾರ್ ಹೇಳಿದರು. (ಪಿಟಿಐ)

English summary
Public sector mining giant NMDC will establish three million tonnes per annum steel plant in Karnataka in collaboration with the state government at an estimated investment of Rs 18,000 crore, Union Steel and Mines Minister Narendra Singh Tomar said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X