ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಫಿ ಡೇ ಸಂಸ್ಥೆಯ ನೂತನ ಸಿಒಒ ಆಗಿ ನಿತಿನ್ ಬಾಗ್ಮನೆ ನೇಮಕ

|
Google Oneindia Kannada News

Recommended Video

V G Siddhartha : ಕಾಫಿ ಡೇ ಸಂಸ್ಥೆಯ ನೂತನ ಸಿಒಒ ನೇಮಕ | Oneindia Kannada

ಬೆಂಗಳೂರು, ಜುಲೈ 31: ಕೆಫೆ ಕಾಫಿ ಡೇ ಸಂಸ್ಥಾಪಕ, ಮಾಲೀಕ ವಿ.ಜಿ ಸಿದ್ದಾರ್ಥ ಅವರ ನಿಧನದಿಂದ ಕಾಫಿ ಡೇ ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ ಎಂಬ ಪ್ರಶ್ನೆಗೆ ತಕ್ಷಣಕ್ಕೆ ಉತ್ತರ ಕಂಡುಕೊಳ್ಳಲಾಗಿದೆ.

ಕಾಫಿ ಡೇ ಎಂಟರ್ ಪ್ರೈಸರ್ಸ್ ಲಿಮಿಟೆಡ್ ಸಮಿತಿ ಸಭೆಯಲ್ಲಿಂದು ನೂತನ ಕಾರ್ಯಕಾರಿ ಅಧಿಕಾರಿ(ಸಿಒಒ), ಮಧ್ಯಂತರ ಚೇರ್ಮನ್ ಆಯ್ಕೆ ಮಾಡಲಾಗಿದೆ.

VG Siddhartha Death LIVE: ಹೆಣವಾಗಿ ತವರಿಗೆ ಬಂದ ಸಿದ್ಧಾರ್ಥ, ಶೋಕದಲ್ಲಿ ಮಲೆನಾಡುVG Siddhartha Death LIVE: ಹೆಣವಾಗಿ ತವರಿಗೆ ಬಂದ ಸಿದ್ಧಾರ್ಥ, ಶೋಕದಲ್ಲಿ ಮಲೆನಾಡು

ನಿರ್ದೇಶಕರ ಮಂಡಳಿ ಮಧ್ಯಂತರ ಅಧ್ಯಕ್ಷರಾಗಿ ಎಸ್. ವಿ ರಂಗನಾಥ್(ಸ್ವತಂತ್ರ ನಿರ್ದೇಶಕರಾಗಿದ್ದಾರೆ) ಹಾಗೂ ನಿತಿನ್ ಬಾಗ್ಮನೆ ಅವರನ್ನು ಮಧ್ಯಂತರ ಚೀಫ್ ಆಪರೇಟಿಂಗ್ ಆಫೀಸರ್(ಸಿಒಒ) ಆಗಿ ನೇಮಿಸಲಾಗಿದೆ. ಸಬ್ಸಿಡಿ ಸಂಸ್ಥೆ ಟ್ಯಾಗ್ಲಿನ್ ನ ನಿರ್ದೇಶಕರಾಗಿರುವ ಬಾಗ್ಮನೆ ಅವರು ಸದ್ಯ ದೈನಂದಿನ ಕಾರ್ಯಕಾರಿ ವ್ಯವಹಾರಗಳನ್ನು ನೋಡಿಕೊಳ್ಳಲಿದ್ದಾರೆ.2011ರಲ್ಲಿ ಟ್ಯಾಗ್ಲಿನ್ ಮೂಲಕ ಸಿಕಾಲ್ ಲಾಜಿಸ್ಟಿಕ್ ಕಂಪನಿ ಖರೀದಿಸಲಾಯಿತು. ಸಿಕಾಲ್ ಸಂಸ್ಥೆಗೆ ಸದ್ಯ ಆರ್ ರಾಮ್ ಮೋಹನ್ ಚೇರ್ಮನ್ ಆಗಿದ್ದಾರೆ.

Nitin Bagmane appointed as COO Coffee Day Enterprises

ಹೊಸ ನೇಮಕಾತಿಗಳಿಗೆ ವಿ.ಜಿ ಸಿದ್ದಾರ್ಥ ಅವರ ಪತ್ನಿ ಮಾಲವಿಕಾ ಹೆಗ್ಡೆ ಅವರು ಸಮ್ಮತಿಸಿದ್ದಾರೆ. ಕಾಫಿ ಡೇ ಮಂಡಳಿಯಲ್ಲಿ ನಾನ್ ಎಕ್ಸಿಕ್ಯೂಟಿವ್ ನಿರ್ದೇಶಕಿಯಾಗಿದ್ದಾರೆ. ಸಿದ್ದಾರ್ಥ ಬರೆದಿದ್ದರು ಎನ್ನಲಾದ ಕೊನೆಯ ಪತ್ರದ ಬಗ್ಗೆ ನಿರ್ದೇಶಕರ ಮಂಡಳಿಯಲ್ಲಿ ಚರ್ಚೆ ನಡೆಸಲಾಗಿದ್ದು, ಈ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲು ಆಗಸ್ಟ್ 08ರಂದು ಮತ್ತೊಮ್ಮೆ ಸಭೆ ಸೇರಲಿದ್ದಾರೆ.

ಸಿದ್ಧಾರ್ಥ ಕನಸಿನ ಕೂಸು ಕೆಫೆ ಕಾಫಿ ಡೇ ಮುಂದುವರೆಸಲು ನಿರ್ದೇಶಕರ ತೀರ್ಮಾನಸಿದ್ಧಾರ್ಥ ಕನಸಿನ ಕೂಸು ಕೆಫೆ ಕಾಫಿ ಡೇ ಮುಂದುವರೆಸಲು ನಿರ್ದೇಶಕರ ತೀರ್ಮಾನ

ಕೆಫೆ ಕಾಫಿ ಡೇ ಸಂಸ್ಥಾಪಕ, ಮಾಲೀಕ ವಿಜಿ ಸಿದ್ದಾರ್ಥ ಸಾವಿನ ಸುದ್ದಿಯಿಂದ ಷೇರುಪೇಟೆಯಲ್ಲಿ ಕಾಫಿ ಡೇ ಷೇರುಗಳಿಗೆ ಭಾರಿ ಹೊಡೆತ ಬಿದ್ದಿದೆ. ಕಾಫಿ ಡೇ ಸೇರಿದಂತೆ ವಿಜಿ ಸಿದ್ದಾರ್ಥ ಅವರ ಮಾಲೀಕತ್ವದ ಸಂಸ್ಥೆಗಳು ಬುಧವಾರದಂದು ಬಂದ್ ಆಗಿವೆ. ಈ ನಡುವೆ ಷೇರುಪೇಟೆಯಲ್ಲಿ ಕಾಫಿ ಡೇ ಸಂಸ್ಥೆ ಷೇರುಗಳು ನೆಲಕಚ್ಚಿವೆ.

ಸಿದ್ದಾರ್ಥ ಸಾವಿನ ನಂತರ ನೆಲಕಚ್ಚಿದ ಕಾಫಿ ಡೇ ಷೇರುಗಳುಸಿದ್ದಾರ್ಥ ಸಾವಿನ ನಂತರ ನೆಲಕಚ್ಚಿದ ಕಾಫಿ ಡೇ ಷೇರುಗಳು

ಷೇರುಪೇಟೆಯಲ್ಲಿ ಕಾಫಿ ಡೇ : ಬುಧವಾರದಂದು ಕೂಡಾ ದಿನದ ಆರಂಭದ ವಹಿವಾಟಿನಲ್ಲಿ ಶೇ20ರಷ್ಟು ಕುಸಿತ ಕಂಡ ಕಾಫಿ ಡೇ ಷೇರುಗಳು 52 ವಾರಗಳಲ್ಲೇ ಅತ್ಯಧಿಕ ಕಳಪೆ ಸಂಖ್ಯೆಯನ್ನು ಕಂಡಿದೆ. ಸುಮಾರು 2,494,013 ಷೇರು ಮಾರಾಟಕ್ಕಿದ್ದರೂ ಖರೀದಿದಾರಲಿಲ್ಲ.

English summary
Nitin Bagmane has been appointed as COO.S V Ranganath appointed as the interim chairman of the Coffee Day Enterprises; next meeting of the Board of Directors scheduled to be held on August 8.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X