ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೋರ್ಬ್ಸ್ 2020ರ ವಿಶ್ವದ 100 ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿ: ನಿರ್ಮಲಾ ಸೀತಾರಾಮನ್, ಕಿರಣ್ ಮಜೂಂದಾರ್‌ಗೆ ಸ್ಥಾನ

|
Google Oneindia Kannada News

ನವದೆಹಲಿ, ಡಿಸೆಂಬರ್ 08: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಅಮೆರಿಕಾದ ಉಪಾಧ್ಯಕ್ಷ ಚುನಾಯಿತಕಮಲಾ ಹ್ಯಾರಿಸ್, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜೂಂದಾರ್‌ ಹಾಗೂ ಹೆಚ್‌ಸಿಎಲ್ ಎಂಟರ್‌ಪ್ರೈಸಸ್ ಸಿಇಒ ರೋಷಿಣಿ ನಡಾರ್ ಮಲ್ಹೋತ್ರಾರವರು ಫೋರ್ಬ್ಸ್ 2020ರ ವಿಶ್ವದ 100 ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಫೋರ್ಬ್ಸ್‌ ವಿಶ್ವದ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆರ್ ಸತತ 10ನೇ ವರ್ಷ ನಂಬರ್ 1 ಸ್ಥಾನ ಪಡೆದಿದ್ದಾರೆ. ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥೆ ಕ್ರಿಸ್ಟೀನ್ ಲಾಗರ್ಡ್ ಸತತ ಎರಡನೇ ವರ್ಷ ಎರಡನೇ ಸ್ಥಾನದಲ್ಲಿದ್ದಾರೆ. ಯುಎಸ್ ಉಪಾಧ್ಯಕ್ಷ ಚುನಾಯಿತ ಕಮಲಾ ಹ್ಯಾರಿಸ್ ಮೊದಲ ಬಾರಿಗೆ ಫೋರ್ಬ್ಸ್‌ ಪಟ್ಟಿಯಲ್ಲಿ ಸ್ಥಾನ ಪಡೆದು ಮೂರನೇ ಸ್ಥಾನ ಅಲಂಕರಿಸಿದ್ದಾರೆ.

ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ 9ನೇ ಸ್ಥಾನಕ್ಕೆ ಕುಸಿತಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ 9ನೇ ಸ್ಥಾನಕ್ಕೆ ಕುಸಿತ

ಕೇಂದ್ರ ಹಣಕಾಸು ಮಂತ್ರಿ 61 ವರ್ಷದ ನಿರ್ಮಲಾ ಸೀತಾರಾಮನ್ ಈ ಪಟ್ಟಿಯಲ್ಲಿ 41 ನೇ ಸ್ಥಾನ ಪಡೆದಿದ್ದು, ಹೆಚ್‌ಸಿಎಸ್‌ಎಲ್‌ ಸಿಇಒ ರೋಷಿಣಿ ನಡಾರ್ 55ನೇ ಸ್ಥಾನ, ಬಯೋಕಾನ್‌ನ ಕಿರಣ್ ಮಜೂಂದಾರ್‌ 68ನೇ ಸ್ಥಾನ ಗಿಟ್ಟಿಸಿದ್ದಾರೆ.

Nirmala Sitharaman, Kiran Mazumdar Shaw in Forbes 2020 list of 100 most powerful women

ಪ್ರತಿವರ್ಷವು ಫೋರ್ಬ್ಸ್‌ ಜಗತ್ತಿನ ಅಗ್ರ 100 ಶಕ್ತಿಶಾಲಿ ಮಹಿಳೆಯರ ಪಟ್ಟಿಯನ್ನು ಬಿಡುಗಡೆ ಮಾಡುತ್ತಾ ಬಂದಿದೆ. ಈ ಬಾರಿ 17 ನೇ ವಾರ್ಷಿಕ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮಹಿಳೆಯರು 30 ದೇಶಗಳಿಂದ ಆಯ್ಕೆಯಾದವರಾಗಿದ್ದಾರೆ. ಇವರಲ್ಲಿ 10 ರಾಷ್ಟ್ರಗಳ ಮುಖ್ಯಸ್ಥರು, 38 ಕಂಪನಿಗಳ ಸಿಇಒಗಳು ಸೇರಿದ್ದಾರೆ.

English summary
Union Finance Minister Nirmala Sitharaman is among the Forbes' ranking of 100 most powerful women in the world. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X