ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಕಾನ್ ಇಂಡಿಯಾದಿಂದ ಉಚಿತ ಆನ್ ಲೈನ್ ಫೋಟೋಗ್ರಫಿ ತರಗತಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 10: ನಿಕಾನ್ ಕಾರ್ಪೊರೇಷನ್, ಟೋಕಿಯೋದ ಸಂಪೂರ್ಣ ಅಂಗಸಂಸ್ಥೆಯಾಗಿರುವ ನಿಕಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಈ ತಿಂಗಳ ಅಂತ್ಯದವರೆಗೆ ಆನ್ ಲೈನ್ ಮೂಲಕ ಉಚಿತ ಫೋಟೋಗ್ರಫಿ ತರಗತಿಗಳನ್ನು ಆಯೋಜಿಸಿದೆ. ಖ್ಯಾತ ಛಾಯಾಗ್ರಾಹಕರಾದ Académie des beaux-arts Photography ಪುರಸ್ಕೃತ ರಘು ರೈ ಮತ್ತು ಇನ್ನೂ ಹಲವಾರು ಹೆಸರಾಂತ ಛಾಯಾಗ್ರಾಹಕರು ಈ ಆನ್ ಲೈನ್ ಫೋಟೋಗ್ರಫಿ ತರಗತಿಯನ್ನು ನಡೆಸಿಕೊಡುವ ನಿಟ್ಟಿನಲ್ಲಿ ನಿಕಾನ್ ಇಂಡಿಯಾ ಜತೆಗೆ ಕೈಜೋಡಿಸಿದ್ದಾರೆ.

ಈ ತರಗತಿ ಮೂಲಕ ಹೆಸರಾಂತ ಛಾಯಾಗ್ರಾಹಕರು ಉತ್ಸಾಹಿ ಛಾಯಾಗ್ರಾಹಕರಿಗೆ ಛಾಯಾಗ್ರಹಣದ ಕೌಶಲ್ಯಗಳನ್ನು ಹೇಳಿಕೊಟ್ಟು ಅವರನ್ನು ಪ್ರೋತ್ಸಾಹಿಸಲಿದ್ದಾರೆ. ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವ ಈ ಸಂದರ್ಭದಲ್ಲಿ ಮನೆಯಲ್ಲಿ ಸುರಕ್ಷಿತವಾಗಿರುವ ಉತ್ಸಾಹಿ ತರುಣ/ತರುಣಿಯರಿಗೆ ಸೇರಿದಂತೆ ಛಾಯಾಗ್ರಹಣದಲ್ಲಿ ಆಸಕ್ತಿ ಇರುವವರು ಈ ಆನ್ ಲೈನ್ ತರಗತಿಯಲ್ಲಿ ಭಾಗಿಯಾಗಬಹುದಾಗಿದೆ. ವಿವಾಹ, ವೈಲ್ಡ್ ಲೈಫ್, ಫೋಕಲ್ ಲೆಂತ್ ನ ಇಫೆಕ್ಟ್, ಇಂಟೀರಿಯರ್ & ಆರ್ಕಿಟೆಕ್ಚರ್, ಸ್ಟ್ರೀಟ್, ಪೋಟ್ರೇಟ್, ಫುಡ್ & ಪೆಟ್ ಫೋಟೋಗ್ರಫಿ ಸೇರಿದಂತೆ ಇನ್ನೂ ಹಲವಾರು ವಿಷಯಗಳ ಮೇಲೆ ತರಗತಿಗಳು ನಡೆಯಲಿವೆ.

ವೃತ್ತಿಪರ ಛಾಯಾಗ್ರಾಹಕರು ಫೋಟೋಗ್ರಫಿ ಬಗ್ಗೆ ಆಳವಾದ ಜ್ಞಾನವನ್ನು ತರಗತಿಗಳ ಮೂಲಕ ಶಿಬಿರಾರ್ಥಿಗಳಿಗೆ ನೀಡಲಿದ್ದಾರೆ. ಈ ಮೂಲಕ ಸ್ಟನ್ನಿಂಗ್ ಫೋಟೋಗಳು ಮತ್ತು ವಿಡಿಯೋಗಳನ್ನು ತೆಗೆಯಲು ಬಳಕೆದಾರರಿಗೆ ಅನುಕೂಲ ಮಾಡಿಕೊಡಲಿದೆ. ಕೆಲವು ತರಗತಿಗಳಲ್ಲಿ ಪ್ರಶ್ನೋತ್ತರಗಳು ಇರಲಿದ್ದು, ಶಿಬಿರಾರ್ಥಿಗಳ ಪ್ರಶ್ನೆಗಳು ಮತ್ತು ಅನುಮಾನಗಳಿಗೆ ತಜ್ಞರು ಉತ್ತರ ನೀಡಲಿದ್ದಾರೆ.

ತರಗತಿಗಳ ಶಿಬಿರಾರ್ಥಿಗಳಿಗೆ ಪರಿಣತರು ಮಾರ್ಗದರ್ಶನ ನೀಡುವುದಷ್ಟೇ ಅಲ್ಲದೇ, ಆಸಕ್ತಿ ಇರುವ ಸಮುದಾಯಕ್ಕೆ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಬಗ್ಗೆ ಕೆಲವು ಆಸಕ್ತಿದಾಯಕ ಟಿಪ್ಸ್ ಅನ್ನು ನೀಡಲಿವೆ. ತರಗತಿಗಳು ನಿಕಾನ್ ನ ಅಧಿಕೃತ ಇನ್ ಸ್ಟಾಗ್ರಾಂ, ಫೇಸ್ ಬುಕ್ ಮತ್ತು ಯೂಟ್ಯೂಬ್ ಪೇಜ್ ಗಳಲ್ಲಿ ಲೈವ್ ವಿಡಿಯೋ ಸ್ಟ್ರೀಮಿಂಗ್ ನಲ್ಲಿ ಲಭ್ಯವಿವೆ.

Nikon India to offer free online photography classes till April 30

ಈ ಉಪಕ್ರಮದ ಬಗ್ಗೆ ಮಾತನಾಡಿದ ನಿಕಾನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಕುಮಾರ್ ಅವರು, ''ಫೋಟೋಗ್ರಫಿ ಸಮುದಾಯವನ್ನು ಸಬಲಗೊಳಿಸುವುದು ನಿಕಾನ್ ನ ಪ್ರಮುಖ ಗುರಿಯಾಗಿದೆ. ಕೊರೊನಾವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಮನೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಫೋಟೋಗ್ರಫಿ ಬಗ್ಗೆ ಉತ್ಸಾಹ ಇರುವವರಿಗೆ ನೆರವಾಗುವ ದೃಷ್ಟಿಯಿಂದ ನಿಕಾನ್ ಈ ಉಚಿತ ಆನ್ ಲೈನ್ ತರಗತಿಗಳನ್ನು ಆಯೋಜಿಸುತ್ತಿದೆ. ಈ ತರಗತಿಗಳಲ್ಲಿ ವೃತ್ತಿಪರ ಛಾಯಾಗ್ರಾಹಕರಿಂದ ಜನರು ಫೋಟೋಗ್ರಫಿಯ ಕೌಶಲ್ಯಗಳನ್ನು ಕಲಿತುಕೊಂಡು ಅವುಗಳನ್ನು ಉನ್ನತೀಕರಿಸಿಕೊಂಡು ತಮ್ಮ ಫೋಟೋಗ್ರಫಿಯನ್ನು ಉತ್ತಮಪಡಿಸಿಕೊಳ್ಳಬಹುದಾಗಿದೆ'' ಎಂದು ಅಭಿಪ್ರಾಯಪಟ್ಟರು.

''ಈ ಅನಿಶ್ಚಿತತೆಯ ಸಮಯದಲ್ಲಿ ಜನರು ಮನೆಯಲ್ಲಿ ಸುರಕ್ಷಿತವಾಗಿದ್ದುಕೊಂಡು ಆನ್ ಲೈನ್ ತರಗತಿಗಳ ಮೂಲಕ ಅವರನ್ನು ಛಾಯಾಗ್ರಹಣದ ಮೇಲೆ ಗಮನವನ್ನು ಕೇಂದ್ರೀಕರಿಸುವಂತೆ ಮಾಡುತ್ತಿದ್ದೇವೆ" ಎಂದು ಅವರು ತಿಳಿಸಿದರು.

ಇದಲ್ಲದೇ, ಬಳಕೆದಾರರು ತಾವು ಸೆರೆಹಿಡಿದ ಛಾಯಾಚಿತ್ರಗಳನ್ನು Capture with Nikon ನಲ್ಲಿ ಅಪ್ ಲೋಡ್ ಮಾಡುವ ಮೂಲಕ ಇಡೀ ಜಗತ್ತಿಗೆ ಆ ಚಿತ್ರಗಳನ್ನು ತೋರಿಸಬಹುದಾಗಿದೆ. ಇದೇ ವೇಳೆ, ಬಳಕೆದಾರರು ಪರಿಣತರೊಂದಿಗೆ ಸಂಪರ್ಕ ಸಾಧಿಸಬಹುದು, ಇತರರ ಕೆಲಸಗಳನ್ನು ಅನ್ವೇಷಿಸಬಹುದು ಮತ್ತು ಆಕರ್ಷಕ ಬಹುಮಾನಗಳು ಮತ್ತು ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ಕೊವಿಡ್-19 ಹಿನ್ನೆಲೆಯಲ್ಲಿ ನಾವು ನಮ್ಮ ಗ್ರಾಹಕರ ಮತ್ತು ಉದ್ಯೋಗಿಗಳ ಸುರಕ್ಷತೆ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ವಿಶ್ವದಾದ್ಯಂತ ಇರುವ ನಿಕಾನ್ ಕಾರ್ಪೊರೇಷನ್ ಮತ್ತು ಅದರ ಸಮೂಹ ಕಂಪನಿಗಳು ಆಯಾ ದೇಶಗಳು ಮತ್ತು ಪ್ರದೇಶದ ಸರ್ಕಾರಗಳು ಸೂಚಿಸಿರುವ ಮಾರ್ಗಸೂಚಿಗಳನ್ವಯ ಕಾರ್ಯಪ್ರವೃತ್ತವಾಗಿವೆ. ಹೆಚ್ಚಿನ ಮಾಹಿತಿ ಫೇಸ್ಬುಕ್ ಪುಟದಲ್ಲಿ (Nikon India Facebook: www.facebook.com/nikonIndia) ಪಡೆಯಬಹುದು.

English summary
Nikon India Pvt. Ltd on Friday announced that it will be introducing free online photography classes until the end of April in light of the continuing outbreak of the coronavirus pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X