ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಜಯದ ಎಫೆಕ್ಟ್: ಸೆನ್ಸೆಕ್ಸ್, ನಿಫ್ಟಿಯಲ್ಲಿ ದಾಖಲೆಯ ಏರಿಕೆ

ಉತ್ತರ ಪ್ರದೇಶ ಚುನಾವಣಾ ಫಲಿತಾಂಶವು ದೇಶೀಯ ಷೇರು ಮಾರುಕಟ್ಟೆಯ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ ಎಂದು ಮೊದಲೇ ತಜ್ಞರು ಅಂದಾಜಿಸಿದ್ದರು. ಈಗ ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆದ್ದಿದ್ದು ಷೇರು ಪೇಟೆಯ ಹುರುಪಿಗೆ ಕಾರಣವಾಗಿದೆ.

|
Google Oneindia Kannada News

ಮುಂಬೈ, ಮಾರ್ಚ್ 14: ಇತ್ತೀಚೆಗೆ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಿರುವುದು ನಿರೀಕ್ಷೆಯಂತೆ ಷೇರು ಪೇಟೆಯ ಮೇಲೂ ಸಕಾರಾತ್ಮಕ ಪರಿಣಾಮ ಬೀರಿದೆ.

ಸತತ ಮೂರು ದಿನಗಳ ರಜೆಯ ನಂತರ ಮಂಗಳವಾರ ಆರಂಭವಾಗುತ್ತಲೇ ಷೇರುಪೇಟೆ, ಸೆನ್ಸೆಕ್ಸ್ ಸುಮಾರು 600 ಅಂಕಗಳ ಏರಿಕೆ ಕಂಡು, 29,561ಕ್ಕೆ ಮುಟ್ಟಿತು.[ಬಿಜೆಪಿಗೆ ಭರ್ಜರಿ ಗೆಲುವು, ಮಂಗಳವಾರ ತಿಳಿಯಲಿದೆ ಷೇರುಪೇಟೆಯ ಒಲವು]

Nifty Soars To Record High On BJP's Poll Wins, Rupee Near 1-Year Peak

ಇನ್ನು, ನಿಫ್ಟಿಯು 188 ಅಂಕಗಳ ದಾಖಲೆಯ ಏರಿಕೆ ಕಂಡು ದಾಖಲೆಯ 9,122ಕ್ಕೆ ಬಂದು ಮುಟ್ಟಿತು. ಇನ್ನು, ರುಪಾಯಿ ಸಹ ಡಾಲರ್ ವಿರುದ್ಧದ ಸಮರದಲ್ಲಿ 66.17ರಷ್ಟು ಸಾಮರ್ಥ್ಯ ವೃದ್ಧಿಸಿಕೊಂಡಿತು. ಇದು ಕಳೆದೊಂದು ವರ್ಷದಲ್ಲಿ ರುಪಾಯಿ ಗಳಿಸಿದ ಅತಿ ಹೆಚ್ಚಿನ ಮೌಲ್ಯವಾಗಿದೆ. ಕಳೆದ ವಾರಾಂತ್ಯದಲ್ಲಿ ರುಪಾಯಿ ಮೌಲ್ಯ 66.74ರಷ್ಟಿತ್ತು.[ಐಸಿಐಸಿಐ ಬ್ಯಾಂಕಲ್ಲಿ ಹೆಚ್ಚು ವಂಚನೆ : ಆರ್ ಬಿ ಐ]

ಇನ್ನು, ಬಿಎಸ್ ಇ ಷೇರು ಮಾರುಕಟ್ಟೆಗೆ ಸುಮಾರು 1.31 ಲಕ್ಷ ರು. ಬಂಡವಾಳ ಹರಿದುಬಂದಿದೆ ಎಂದು ಮೂಲಗಳು ತಿಳಿಸಿವೆ. ಸ್ಥಿರ ಸರ್ಕಾರಗಳು ಹಾಗೂ ಉದ್ದಿಮೆ ಸ್ನೇಹಿ ಸರ್ಕಾರಗಳಿದ್ದರೆ ಹೀಗೆ ಬಂಡವಾಳದ ಹರಿವು ಹೆಚ್ಚಿರುತ್ತದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

English summary
Cheering the BJP's landslide win in Uttar Pradesh, the Nifty soared to new all-time highs on Tuesday. The Sensex rose as much as 600 points to 29,561 while Nifty surged 188 points to record high of 9,122.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X