ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ದಾಖಲೆಯತ್ತ ಸೆನ್ಸೆಕ್ಸ್, 13,000 ಗಡಿ ದಾಟಿದ ನಿಫ್ಟಿ: ಷೇರು ಹೂಡಿಕೆದಾರರ ಸಂಭ್ರಮ

|
Google Oneindia Kannada News

ಮುಂಬೈ, ನವೆಂಬರ್ 24: ಭಾರತೀಯ ಷೇರುಪೇಟೆಯ ನಾಗಾಲೋಟ ಮುಂದುವರಿದಿದೆ. ಮಂಗಳವಾರ ಮುಂಬೈ ಷೇರುಪೇಟೆ ಸೆನ್ಸೆಕ್ಸ್ ದಾಖಲೆಯ ಗಡಿ ತಲುಪಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಮೊದಲ ಬಾರಿಗೆ 13,000 ಪಾಯಿಂಟ್ಸ್‌ ಗಡಿ ದಾಟಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇ. 1.01ರಷ್ಟು ಅಥವಾ 445.87 ಪಾಯಿಂಟ್ಸ್‌ ಹೆಚ್ಚಳಗೊಂಡು 44,523.02ಕ್ಕೆ ವಹಿವಾಟು ಅಂತ್ಯಗೊಳಿಸಿದೆ. ಇನ್ನು ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಕೂಡ ಶೇ. 1ರಷ್ಟು ಅಥವಾ 128.7 ಪಾಯಿಂಟ್ಸ್‌ ಏರಿಕೆಯೊಂದಿಗೆ 13,055.20 ಮಂಗಳವಾರದ ವಹಿವಾಟು ಅಂತ್ಯಗೊಳಿಸಿದೆ.

ಒಂದು ವರ್ಷದಲ್ಲಿ 2.80 ರೂ.ನಿಂದ 228 ರೂಪಾಯಿಗೆ ಏರಿಕೆಗೊಂಡ ಷೇರುಒಂದು ವರ್ಷದಲ್ಲಿ 2.80 ರೂ.ನಿಂದ 228 ರೂಪಾಯಿಗೆ ಏರಿಕೆಗೊಂಡ ಷೇರು

ನಿಫ್ಟಿ 13,000 ಪಾಯಿಂಟ್ಸ್‌ಗಳ ಏರಿಕೆಯು ಮಾರ್ಚ್‌ನಿಂದ ಈಚೆಗೆ ಶೇಕಡಾ 73ರಷ್ಟು ಬೆಳವಣಿಗೆಯಾಗಿದೆ. ಕೋವಿಡ್-19 ಸಾಂಕ್ರಾಮಿಕವು ಜಾಗತಿಕವಾಗಿ ಗುರುತಿಸಿಕೊಂಡಾಗ 7,500 ಪಾಯಿಂಟ್ಸ್‌ಗಳವರೆಗೆ ಭಾರೀ ಕುಸಿತ ಕಂಡಿತ್ತು. ಇಂದಿನ ವಹಿವಾಟಿನಲ್ಲಿ 1603 ಕಂಪನಿಯ ಷೇರುಗಳು ಏರುಮುಖ ಸಾಧಿಸಿದರೆ, 1167 ಷೇರುಗಳು ಕುಸಿತಗೊಂಡಿವೆ ಮತ್ತು 175 ಷೇರುಗಳು ಯಾವುದೇ ಬದಲಾವಣೆ ಸಾಧಿಸಿಲ್ಲ.

 Nifty End Above 13K For First Time: Sensex At Record Closing High

ಎನ್‌ಎಸ್‌ಇ ಹೆಚ್ಚು ಏರಿಕೆಗೊಂಡ ಷೇರುಗಳು:

ಬಾಷ್‌, ಆರ್‌ಬಿಎಲ್ ಬ್ಯಾಂಕ್, ಶ್ರೀರಾಮ್ ಟ್ರಾನ್ಸ್‌, ಎಂ&ಎಂ ಫೈನಾನ್ಷಿಯಲ್, ಅದಾನಿ ಪೋರ್ಟ್ಸ್, ಆ್ಯಕ್ಸಿಸ್ ಬ್ಯಾಂಕ್, ಈಚರ್ ಮೋಟಾರ್ಸ್, ಹಿಂಡಾಲ್ಕೊ, ಎಂ&ಎಂ ಶೇಕಡಾ 3ಕ್ಕಿಂತ ಹೆಚ್ಚಿನ ಏರಿಕೆ ದಾಖಲಿಸಿವೆ.

English summary
Benchmark indices ended at record closing high on November 24 with Nifty above 13,000 for the first time. At close, the Sensex was up 445.87 points
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X