ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

50 ಉದ್ಯೋಗಿಗಳಿಗೆ 1,731 ಕೋಟಿ ಮೌಲ್ಯದ ಷೇರುಗಳನ್ನ ಗಿಫ್ಟ್‌ ನೀಡಿದ ಕಂಪನಿ ಮಾಲೀಕ

|
Google Oneindia Kannada News

ನವದೆಹಲಿ, ಆಗಸ್ಟ್‌ 27: ನಿಕೋಲಾ ಮೋಟಾರ್ಸ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಟ್ರೆವರ್ ಮಿಲ್ಟನ್ ಅವರು ಎಲೆಕ್ಟ್ರಿಕ್ ಟ್ರಕ್ ಸ್ಟಾರ್ಟ್ಅಪ್‌ನ ಮೊದಲ 50 ಉದ್ಯೋಗಿಗಳಿಗೆ 6 ಮಿಲಿಯನ್ ಸ್ವಂತ ಷೇರುಗಳನ್ನು ನೀಡಿದ್ದಾರೆ.

ಫೀನಿಕ್ಸ್ ಮೂಲದ ಕಂಪನಿಯಲ್ಲಿ ಅವರು ಹಸ್ತಾಂತರಿಸುತ್ತಿರುವ ಷೇರುಗಳು, ಪ್ರಸ್ತುತ ಸುಮಾರು 233 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ್ದಾಗಿದೆ. ಅಂದರೆ ಭಾರತದ ರುಪಾಯಿಗಳಲ್ಲಿ ಸುಮಾರು 1,731 ಕೋಟಿ ಮೌಲ್ಯದ ಷೇರುಗಳನ್ನ ಗಿಫ್ಟ್‌ ನೀಡಿದ್ದಾರೆ.

25,000 ಉದ್ಯೋಗಿಗಳನ್ನು ವಜಾಗೊಳಿಸಲಿದೆ ಅಕ್ಸೆಂಚರ್25,000 ಉದ್ಯೋಗಿಗಳನ್ನು ವಜಾಗೊಳಿಸಲಿದೆ ಅಕ್ಸೆಂಚರ್

ಕಂಪನಿಯು ತನ್ನ ಮೊದಲ ವಾಹನವನ್ನು ಇನ್ನೂ ಉತ್ಪಾದಿಸದಿದ್ದರೂ ಸಹ, ನಿಕೋಲಾ ಜೂನ್ ಆರಂಭದಲ್ಲಿ ರಿವರ್ಸ್ ವಿಲೀನದ ಮೂಲಕ ನಾಸ್ಡಾಕ್‌ನಲ್ಲಿ ವಹಿವಾಟು ಪ್ರಾರಂಭಿಸಿದಾಗಿನಿಂದ ಈ ಷೇರು ಮೌಲ್ಯ ಹೆಚ್ಚಾಗಿದೆ.

Nicola Corp Founder Giving First 50 Staff 233 Million Dollar Of His Shares

"ನಾವು ಎಂದಾದರೂ ಯಶಸ್ವಿಯಾಗುವ ಸಾಧ್ಯತೆಯು ಸದ್ಯಕ್ಕಿರಲಿಲ್ಲ ಆದರೆ, ಅದೃಷ್ಟವಶಾತ್ ಮೊದಲ ದಿನದಿಂದ ನನ್ನೊಂದಿಗೆ ಪ್ರಾರಂಭವಾದ ಅದ್ಭುತ ಉದ್ಯೋಗಿಗಳ ಗುಂಪನ್ನು ನಾನು ಕಂಡುಕೊಂಡೆ. " ಎಂದು ಟ್ರೆವರ್ ಮಿಲ್ಟನ್ ಹೇಳಿದ್ದಾರೆ.

ಪ್ರೌಢಶಾಲೆಗೆ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿದ ನಂತರ ಮಿಲ್ಟನ್, ಸಾಮಾನ್ಯ ಶೈಕ್ಷಣಿಕ ಅಭಿವೃದ್ಧಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನಂತರ ತಮ್ಮದೇ ಆದ ಎಲೆಕ್ಟ್ರಿಕ್ ಟ್ರಕ್ ಸ್ಟಾರ್ಟ್ಅಪ್‌ನ್ನು ಪ್ರಾರಂಭಿಸಿದರು. ವಿಶ್ವದ 500 ಶ್ರೀಮಂತ ಜನರ ಶ್ರೇಯಾಂಕದ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, 37 ವರ್ಷದ ಮಿಲ್ಟನ್ ಸಂಪತ್ತಿನ ಮೌಲ್ಯ 4.6 ಬಿಲಿಯನ್ ಆಗಿದೆ. ಷೇರು ವರ್ಗಾವಣೆ ಪೂರ್ಣಗೊಂಡ ನಂತರ ಆ ಅಂಕಿ ಅಂಶವು ಕುಸಿಯುತ್ತದೆ.

English summary
Trevor Milton, the founder and chairman of Nikola Corp., is giving the first 50 employees of the electric-truck startup 6 million of his own shares after making a promise when he hired them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X