• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏಪ್ರಿಲ್ 1 ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಮತ್ತೆ ದುಬಾರಿ!?

|

ನವದೆಹಲಿ, ಮಾರ್ಚ್ 17: ದೇಶಾದ್ಯಂತ ಎಲ್ಲ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಡ್ಡಾಯ ಫಾಸ್ಟ್ಯಾಗ್ ಜಾರಿಯಾಗಿದೆ. ವಾಹನಗಳಲ್ಲಿ ಫಾಸ್ಟ್ಯಾಗ್ ಬಳಸದ ವಾಹನ ಸವಾರರು ದುಪ್ಪಟ್ಟು ಹಣ ನೀಡಬೇಕಾಗಿದೆ. ಆದರೆ ಫಾಸ್ಟ್ಯಾಗ್ ಇದ್ದವರಿಗೂ ಏಪ್ರಿಲ್ 1ರ ಬಳಿಕ ರಾಷ್ಟ್ರೀಯ ಹೆದ್ದಾರಿಗಳ ಪ್ರಯಾಣ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ತನ್ನ ಟೋಲ್‌ಗಳಲ್ಲಿನ ಸುಂಕದ ದರವನ್ನು ಶೇ 5ರಷ್ಟು ಹೆಚ್ಚಿಸಲು ಚಿಂತನೆ ನಡೆಸಿದೆ. ಇದೇ ವೇಳೆ ಮಾಸಿಕ ಪಾಸ್‌ಗಳ ದರದಲ್ಲಿಯೂ 10 ರಿಂದ 20 ರೂಪಾಯಿ ಏರಿಕೆ ಸಂಭವವಿದೆ ಎಂದು 'ಹಿಂದೂಸ್ತಾನ್ ಟೈಮ್ಸ್' ವರದಿ ಮಾಡಿದೆ.

 ಫಾಸ್‌ಟ್ಯಾಗ್‌ನಿಂದ ತೈಲದ ಮೇಲೆ ವರ್ಷಕ್ಕೆ 20,000 ಕೋಟಿ ರೂ ಉಳಿತಾಯ: ಗಡ್ಕರಿ ಫಾಸ್‌ಟ್ಯಾಗ್‌ನಿಂದ ತೈಲದ ಮೇಲೆ ವರ್ಷಕ್ಕೆ 20,000 ಕೋಟಿ ರೂ ಉಳಿತಾಯ: ಗಡ್ಕರಿ

ಪ್ರತಿ ಹಣಕಾಸು ವರ್ಷದಲ್ಲಿಯೂ ಎನ್‌ಎಚ್‌ಎಐ ಟೋಲ್ ತೆರಿಗೆಗಳನ್ನು ಹೆಚ್ಚಿಸುತ್ತಿದೆ. ಫಾಸ್ಟ್ಯಾಗ್ ಅಳವಡಿಕೆ ಕಡ್ಡಾಯವಾದ ಬಳಿಕ ವಾಹನ ಸವಾರರು ಅನಿವಾರ್ಯವಾಗಿ ಫಾಸ್ಟ್ಯಾಗ್ ಖರೀದಿಗಾಗಿ ಹಣ ವ್ಯಯಿಸಬೇಕಾಗಿದೆ. ಅದರ ಜತೆಗೆ ಈಗ ಮತ್ತೆ ತೆರಿಗೆ ಹೆಚ್ಚಳದ ನಿರ್ಧಾರವು ಜನಸಾಮಾನ್ಯರಿಗೆ ಮತ್ತಷ್ಟು ಹೊರೆ ಹೆಚ್ಚಿಸಲಿದೆ. ಪ್ರತಿ ವರ್ಷ ತೆರಿಗೆ ಹೆಚ್ಚಳ ಸಾಮಾನ್ಯವಾಗಿದ್ದರೂ, ಈ ಬಾರಿ ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಸಾಮಾನ್ಯರಿಗೆ ಇದು ಮತ್ತೊಂದು ಆಘಾತ ನೀಡಿದೆ. ಮುಂದೆ ಓದಿ.

5-30 ರೂವರೆಗೂ ಹೆಚ್ಚಳ

5-30 ರೂವರೆಗೂ ಹೆಚ್ಚಳ

ಈ ದರ ಏರಿಕೆಯು ದೇಶಾದ್ಯಂತ ಟೋಲ್‌ಗಳಲ್ಲಿ ಜಾರಿಯಾಗುವ ಸಾಧ್ಯತೆ ಇದೆ. ಟೋಲ್ ಪ್ಲಾಜಾಗಳಲ್ಲಿನ ಟೋಲ್ ಸಂಗ್ರಹದ ಪ್ರಮಾಣದ ಆಧಾರದಲ್ಲಿ 5 ರೂಪಾಯಿಯಿಂದ 30 ರೂಪಾಯಿಯವರೆಗೆ ತೆರಿಗೆ ಹೆಚ್ಚಬಹುದು ಎಂದು ಗೋರಖ್‌ಪುರ ವಲಯದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸಿಎಂ ದ್ವಿವೇದಿ ತಿಳಿಸಿದ್ದಾರೆ.

ತೈಲದ ಉಳಿತಾಯ

ತೈಲದ ಉಳಿತಾಯ

ಫಾಸ್ಟ್ಯಾಗ್ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯು ಟೋಲ್ ಪ್ಲಾಜಾಗಳಲ್ಲಿ ವಾಹನಗಳು ಕಾಯುವ ಸಮಯವನ್ನು ಸಾಕಷ್ಟು ತಗ್ಗಿಸಲಿದೆ. ಇದರಿಂದ ಭಾರಿ ಪ್ರಮಾಣದಲ್ಲಿ ತೈಲ ಬಳಕೆ ಕಡಿಮೆಯಾಗಲಿದೆ ಎಂದು ಸರ್ಕಾರ ಹೇಳಿದೆ. ಎನ್‌ಎಚ್‌ಗಳಲ್ಲಿ ಫಾಸ್ಟ್ಯಾಗ್ ಬಳಸುವುದು ಸಂಪೂರ್ಣವಾಗಿ ಜಾರಿಯಾದರೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ವಿನಿಯೋಗಿಸುವ ವೆಚ್ಚದಲ್ಲಿ ಪ್ರತಿ ವರ್ಷ 20,000 ಕೋಟಿ ರೂ ಉಳಿತಾಯವಾಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದರು.

ಫಾಸ್ಟ್ಯಾಗ್: ಒಂದೇ ದಿನ ದಾಖಲೆಯ 104 ಕೋಟಿ ಟೋಲ್ ಸಂಗ್ರಹಫಾಸ್ಟ್ಯಾಗ್: ಒಂದೇ ದಿನ ದಾಖಲೆಯ 104 ಕೋಟಿ ಟೋಲ್ ಸಂಗ್ರಹ

ಸಂಚಾರ ದಟ್ಟಣೆಗೆ ಅನುಗುಣವಾಗಿ ಸುಂಕ

ಸಂಚಾರ ದಟ್ಟಣೆಗೆ ಅನುಗುಣವಾಗಿ ಸುಂಕ

ಪ್ರಮುಖ ಅವಧಿಗಳಲ್ಲಿ (ಪೀಕ್ ಅವರ್) ಟೋಲ್ ಪ್ಲಾಜಾಗಳಲ್ಲಿನ ಸಂಚಾರ ದಟ್ಟಣೆಯನ್ನು ತಗ್ಗಿಸುವ ಸಲುವಾಗಿ ದಟ್ಟಣೆ ಅವಧಿ ಹಾಗೂ ದಟ್ಟಣೆ ಇಲ್ಲದ ಅವಧಿಗೆ ಪ್ರತ್ಯೇಕ ಟೋಲ್ ದರ ವಿಧಿಸುವ ಪ್ರಸ್ತಾವವೂ ಇದೆ. ಪೀಕ್ ಅವರ್‌ಗಳಲ್ಲಿ ಪ್ರಯಾಣಿಸುವ ವಾಹನ ಸವಾರರು ಅಧಿಕ ಟೋಲ್ ಪಾವತಿಸಬೇಕಾಗುತ್ತದೆ. ಕಡಿಮೆ ದಟ್ಟಣೆ ಇರುವ ಸಮಯಗಳಲ್ಲಿ ವಾಹನಗಳಿಗೆ ಕಡಿಮೆ ಟೋಲ್ ವಿಧಿಸುವ ಪ್ರಸ್ತಾಪವಿದೆ.

ಕಡಿಮೆ ದಟ್ಟಣೆ ಅವಧಿಯಲ್ಲಿ ರಿಯಾಯಿತಿ

ಕಡಿಮೆ ದಟ್ಟಣೆ ಅವಧಿಯಲ್ಲಿ ರಿಯಾಯಿತಿ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ದಟ್ಟಣೆ ಅವಧಿಯ ಸಮಯವನ್ನು ನಿಗದಿಪಡಿಸಲಿದ್ದು, ಆ ಅವಧಿಯ 20 ನಿಮಿಷ ಮುನ್ನ ಹಾಗೂ ನಂತರದ ಅವಧಿಯಲ್ಲಿ ಟೋಲ್ ಪ್ಲಾಜಾ ಪ್ರವೇಶಿಸುವ ವಾಹನ ಸವಾರರಿಗೆ ಶೇ 10ರಷ್ಟು ರಿಯಾಯಿತಿ, ಹಾಗೆಯೇ 45 ನಿಮಿಷ ಮುನ್ನ ಹಾಗೂ ನಂತರ ಪ್ರವೇಶಿಸಿದರೆ ಶೇ 25ರಷ್ಟು ರಿಯಾಯಿತಿ ನೀಡುವ ಉದ್ದೇಶವಿದೆ. ಆದರೆ ದಟ್ಟಣೆ ಅವಧಿಯಲ್ಲಿ ಪ್ರವೇಶಿಸುವ ವಾಹನಗಳು ಹೆಚ್ಚಿನ ಸುಂಕ ತೆರಬೇಕಾಗಬಹುದು.

ಕನಿಷ್ಠ ಬ್ಯಾಲೆನ್ಸ್ ಅಗತ್ಯ

ಕನಿಷ್ಠ ಬ್ಯಾಲೆನ್ಸ್ ಅಗತ್ಯ

ಫಾಸ್ಟ್ಯಾಗ್‌ನಲ್ಲಿ ಕನಿಷ್ಠ ಬ್ಯಾಲೆನ್ಸ್ ಇನ್ನು ಅಗತ್ಯವಿರುವುದಿಲ್ಲ. ಒಂದು ವೇಳೆ ಟೋಲ್ ದಾಟಿದ ಬಳಿಕ ಫಾಸ್ಟ್ಯಾಗ್ ಖಾತೆಯಲ್ಲಿ ಬ್ಯಾಲೆನ್ಸ್ ಖಾಲಿಯಾದರೆ ಭದ್ರತಾ ಠೇವಣಿಯ ಮೊತ್ತವನ್ನು ಬಳಸಿಕೊಳ್ಳಲಾಗುತ್ತದೆ. ಬಳಕೆದಾರರು ಬಳಿಕ ಅದಕ್ಕೆ ಅಗತ್ಯವಿರುವಷ್ಟು ಹಣವನ್ನು ರೀಚಾರ್ಜ್ ಮಾಡಬೇಕಾಗುತ್ತದೆ.

English summary
The National Highway Authority of India (NHAI) is set to increase toll rates by 5 percent across national highways from April 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X