• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜರ್ಮನಿಯ ಜನಪ್ರಿಯ ಕಾರು ಕಂಪನಿ ಮೇಲೆ 500 ಕೋಟಿ ರು ದಂಡ

|

ನವದೆಹಲಿ, ಮಾರ್ಚ್ 07: ಜರ್ಮನಿಯ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆ ಫೋಕ್ಸ್ ವ್ಯಾಗನ್ ಮೇಲೆ 500 ಕೋಟಿ ರು ದಂಡ ವಿಧಿಸಿ ರಾಷ್ಟ್ರೀಯ ಹಸಿರು ಪ್ರಾಧಿಕಾರ(ಎನ್ ಜಿಟಿ) ಆದೇಶ ಹೊರಡಿಸಿದೆ. ಫೋಕ್ಸ್ ವ್ಯಾಗನ್ ಕಾರುಗಳಲ್ಲಿರುವ ಸಾಧನವು emission ಪರೀಕ್ಷೆ ಮಾಡುವಾಗ ಮೋಸ ಮಾಡುತ್ತಿರುವುದು ಕಂಡು ಬಂದಿದೆ. ಈ ಮೂಲಕ ಈ ಸಂಸ್ಥೆಯು ವಂಚನೆ ಮಾಡಿದೆ ಎಂದು ಎನ್ ಜಿಟಿ ಹೇಳಿದೆ. ಫೋಕ್ಸ್ ವಾಗನ್ ಸಂಸ್ಥೆಗೆ ಈ ಮೊತ್ತವನ್ನು ಕಟ್ಟಲು ಎರಡು ತಿಂಗಳುಗಳ ಕಾಲ ಗಡುವು ನೀಡಲಾಗಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 16, 2018ರಂದು ಆದೇಶ ನೀಡಿದ್ದ ಎನ್ ಜಿಟಿ, ಜನವರಿ 18, 2019ಕ್ಕೆ ಹೊಂದುವಂತೆ 24ಗಂಟೆಯೊಳಗೆ 100 ಕೋಟಿ ರು ದಂಡ ಪಾವತಿಸುವಂತೆ ಜರ್ಮನ್ ಆಟೋಮೊಬೈಲ್ ಸಂಸ್ಥೆಗೆ ಆದೇಶ ನೀಡಿತ್ತು. ಆದರೆ, ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಕೆಯಾಗಿತ್ತು.

ಫೋಕ್ಸ್‌ವ್ಯಾಗನ್ 'ಮಹಾ' ಮಾಲಿನ್ಯ ಮೋಸ; ಆಗಿದ್ದೇನು?

ಫೋಕ್ಸ್ ವ್ಯಾಗನ್ ಡೀಸೆಲ್ ಆವೃತ್ತಿ ಕಾರುಗಳಲ್ಲಿ 'ವಂಚಕ ಸಾಧನ' ಗಳನ್ನು ಬಳಸಲಾಗುತ್ತಿದ್ದು, ಇದರಿಂದ ಮಾಲಿನ್ಯ ಪರೀಕ್ಷೆ ಸಂದರ್ಭದಲ್ಲಿ ದೋಷಗಳು ಪತ್ತೆಯಾಗದಂತೆ ಮಾಡಲಾಗಿದೆ. ಇದರಿಂದ ಪರಿಸರಕ್ಕೆ ಭಾರಿ ಹಾನಿಯುಂಟಾಗಿದ್ದು, ಇದಕ್ಕೆ ಪರಿಹಾರ ರೂಪವಾಗಿ ಕೇಂದ್ರ ಪರಿಸರ ನಿಯಂತ್ರಣ ಮಂಡಳಿ(ಸಿಪಿಸಿಬಿ)ಗೆ 100 ಕೋಟಿ ರು ದಂಡ ಕಟ್ಟುವಂತೆ ಎನ್ ಜಿಟಿ ನೋಟಿಸ್ ನೀಡಿತ್ತು..

ಇದೇನು ಹೊಸ ಪ್ರಕರಣವಲ್ಲ: 2015ರಲ್ಲಿ ಮೊದಲ ಬಾರಿಗೆ ಫೋಕ್ಸ್ ವ್ಯಾಗನ್ ಸಂಸ್ಥೆಯ ಮಾಲಿನ್ಯ ತಪಾಸಣೆ ವಂಚನೆ ಪ್ರಕರಣ ಬಯಲಿಗೆ ಬಂದಿತ್ತು. ಭಾರತದಲ್ಲಿ ಐವರು ತಜ್ಞರ ಸಮಿತಿ ತನಿಖೆ ನಡೆಸಿತ್ತು. ಸುಮಾರು 78 ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 11 ಮಿಲಿಯನ್ ಗೂ ಅಧಿಕ ವಾಹನಗಳಲ್ಲಿರುವ ತಂತ್ರಾಂಶದ ಲೋಪ ದೋಷ ಈಗ ಜರ್ಮನಿ ಹಾಗೂ ಫೋಕ್ಸ್ ವ್ಯಾಗನ್ ಸಂಸ್ಥೆಯ ಘನತೆ, ಗೌರವ ಮಣ್ಣುಪಾಲು ಮಾಡಿತ್ತು.

34 ವರ್ಷಗಳ ಬಳಿಕ ಮಾರುತಿ ಸುಜುಕಿ ಓಮ್ನಿ ಉತ್ಪಾದನೆ ಬಂದ್!

ವೆಸ್ಟ್ ವರ್ಜೀನಿಯಾ ವಿಶ್ವವಿದ್ಯಾಲಯದ ಐವರು (ಭಾರತೀಯ ಮೂಲದ ಒಬ್ಬ ಇಂಜಿನಿಯರ್ ಅರವಿಂದ ಸೇರಿದಂತೆ) ಇಂಜಿನಿಯರ್​ಗಳ ತಂಡ ಫೋಕ್ಸ್​ವ್ಯಾಗನ್ ಎಮಿಷನ್ ವಂಚನೆ ಬಯಲಿಗೆಳೆದಿದ್ದರು. ಯುಎಸ್ ನಲ್ಲಿ ಸುಮಾರು 18 ಬಿಲಿಯನ್ ಡಾಲರ್ ನಷ್ಟು ದಂಡ ಹೊತ್ತುಕೊಂಡಿದ್ದ ಫೋಕ್ಸ್ ವ್ಯಾಗನ್ ಗೆ ಇದ್ದ 'ಮೇಡ್ ಇನ್ ಜರ್ಮನಿ' ಟ್ಯಾಗ್ ಗೆ ತಾನೇ ಕಪ್ಪು ಮಸಿ ಬಳೆದುಕೊಂಡಿತ್ತು. ಭಾರತವಲ್ಲದೆ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ ಅನೇಕ ದೇಶಗಳು ಕೂಡಾ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದವು. ಈಗ ಮತ್ತೊಮ್ಮೆ ಫೋಕ್ಸ್ ವಾಗನ್ ಗೆ ಎಮಿಷನ್ ಟೆಸ್ಟ್ ಕಾಡುತ್ತಿದೆ. (ಪಿಟಿಐ)

English summary
The National Green Tribunal (NGT) has slammed a Rs 500 Crore penalty on Volkswagen for installing 'Cheat Devices' in their cars which helped the company cheat through emission tests. NGT has directed Volkswagen to pay the penalty in a matter of two months time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X