ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾ ಡಾಲರ್ ಮೌಲ್ಯ ಕುಸಿತ : ಗೋಲ್ಡ್ ಗುರು ವಿಶ್ಲೇಷಣೆ :

|
Google Oneindia Kannada News

ಬೆಂಗಳೂರು, ಮಾರ್ಚ್ 10: ಚಿನ್ನದ ಮೇಲೆ ಹೂಡಿಕೆ ಮಾಡುವ ಆಲೋಚನೆ ಇದ್ದರೆ ನಾಲ್ಕು ದಿನದೊಳಗೆ ವಹಿವಾಟು ಮುಗಿಸಿ. ನಾಲ್ಕು ದಿನದ ನಂತರ ಚಿನ್ನದ ಬೆಲೆ ಜಾಸ್ತಿಯಾಗುವ ಸಾಧ್ಯತೆಯಿದೆ ! ಅಂತಹ ಬೆಳವಣಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಣುತ್ತಿವೆ. ನಾಲ್ಕು ದಿನದ ನಂತರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚಾಗುವ ಲಕ್ಷಣ ಗೋಚರಿಸುತ್ತಿದೆ. ಇದಕ್ಕೆ ವೈಜ್ಞಾನಿಕ ಕಾರಣವನ್ನು ಗೋಲ್ಡ್ ಗುರು ರೇಖಾ ಅಂಜನ್ ತಿಳಿಸಿದ್ದಾರೆ.

ತಜ್ಞರ ಅಭಿಪ್ರಾಯದಂತೆ ಪ್ರಸ್ತುತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಗ್ರಾಂ ಚಿನ್ನದ ದರ (24 ಕ್ಯಾರೆಟ್ ) 4018 ರೂ. ಇದೆ. ಮುಂದಿನ ಮೂರ್ನಾಲ್ಕು ದಿನದಲ್ಲಿ ಇನ್ನೂ ಸ್ವಲ್ಪ ಕುಸಿಯಲಿದ್ದು, ಕನಿಷ್ಠ 3980 ರೂ.ನಿಂದ 4048 ರೂ. ನಡುವೆ ವಹಿವಾಟು ನಡೆಯಲಿದೆ. ಈ ವಾರಾಂತ್ಯದ ಬಳಿಕ ಸಹಜವಾಗಿ ಅಮೆರಿಕಾ ಡಾಲರ್ ಬೆಲೆ ಜಾಸ್ತಿಯಾಗಲಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕೂಡ ಜಾಸ್ತಿಯಾಗಲಿದೆ. ಹೀಗಾಗಿ ಚಿನ್ನ ಖರೀದಿ ಮಾಡುವುದಿದ್ದರೆ, ಇಲ್ಲವೇ ಚಿನ್ನದ ಮೇಲೆ ಹೂಡಿಕೆ ಮಾಡುವಂತಿದ್ದರೆ ಮುಂದಿನ 5 ದಿನ ಸೂಕ್ತವಾಗಿರಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Next five days good time for gold Buying : Expert Gold guru says

ಚಿನ್ನ, ಬೆಳ್ಳಿ ಬೆಲೆ ಇಳಿಕೆ: ಮಾರ್ಚ್ 05ರಂದು ಬೆಲೆ ಎಷ್ಟಿದೆ?ಚಿನ್ನ, ಬೆಳ್ಳಿ ಬೆಲೆ ಇಳಿಕೆ: ಮಾರ್ಚ್ 05ರಂದು ಬೆಲೆ ಎಷ್ಟಿದೆ?

ಇನ್ನು ಬೆಂಗಳೂರಿನಲ್ಲಿ ಚಿನ್ನದ ಒಂದು ಗ್ರಾಂ ಬೆಲೆ 4601 ರೂ. (24 ಕ್ಯಾರೆಟ್ ) ಬೆಲೆ ಇರಲಿದೆ. ಜಿಎಸ್‌ಟಿ ಮತ್ತು ಸ್ಥಳೀಯ ತೆರಿಗೆ ಸೇರಿ ಸುಮಾರು ಆರು ನೂರು ರೂಪಾಯಿ ಹೆಚ್ಚುವರಿ ಶುಲ್ಕ ಬೀಳಲಿದೆ. ಅಂದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿಕೆ ನೋಡಿದರೆ ಒಂದು ಗ್ರಾಂ ಚಿನ್ನದ ಮೇಲೆ ಒಂದು ನೂರು ರೂಪಾಯಿ ಕಡಿಮೆ ಆಗುವ ಸಾಧ್ಯತೆಯಿದೆ. ಆದರೆ ನಾಲ್ಕೈದು ದಿನಗಳ ನಂತರ ಸಹಜವಾಗಿ ಅಮೆರಿಕ ಡಾಲರ್ ಮೌಲ್ಯ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಚಿನ್ನದ ದರ ಕೂಡ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮುಂದಿನ ವಾರದ ನಂತರ ಜಾಸ್ತಿಯಾಗಲಿದೆ ಎಂದೇ ಹೇಳಲಾಗುತ್ತಿದೆ.

Next five days good time for gold Buying : Expert Gold guru says

ಡಾಲರ್ ಬೆಲೆ ಕುಸಿತದ ಲಾಭ: ಅಮೆರಿಕಾದ ಡಾಲರ್ ಮೌಲ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿದಿದೆ. ಮಾರ್ಚ್‌ 09 ರಂದು ಭಾರತೀಯ ರೂಪಾಯಿ ಮೌಲ್ಯದಲ್ಲಿ 72.90 ಪೈಸೆಗೆ ವಹಿವಾಟು ಅಂತ್ಯಗೊಂಡಿದ್ದು, 33 ಪೈಸೆ ಕುಸಿದಿದೆ. ಭಾರತೀಯ ರೂಪಾಯಿ ಗಟ್ಟಿಯಾಗಿ ನಿಂತಿದೆ. ಈ ಕಾರಣಕ್ಕಾಗಿ ಚಿನ್ನದ ಬೆಲೆ ಕೂಡ ಕುಸಿದಿದೆ. ಪೆಟ್ರೋಲಿಯಂ ಉತ್ಪನ್ನಗಳು ಜಾಸ್ತಿಯಾಗಲಿವೆ. ಇನ್ನು ಒಂದು ವಾರದಲ್ಲಿ ಮತ್ತೆ ಅಮೆರಿಕಾ ಡಾಲರ್ ಮೌಲ್ಯ ಹೆಚ್ಚಾಗಲಿದ್ದು ಆನಂತರ ಚಿನ್ನದ ಬೆಲೆ ಏರಿಕೆಯಾಗಲಿದೆಯಾ? ಕಡಿಮೆಯಾಗಲಿದಾ ಕಾದು ನೋಡಬೇಕು.

Next five days good time for gold Buying : Expert Gold guru says

Recommended Video

ಅಬ್ಬಾ ! ಬೆಲೆ ಎಷ್ಟು ಕಡಿಮೆ ಆಗಿದೆ ಗೊತ್ತಾ !! | Oneindia Kannada

ಯುಎಸ್‌ಡಿ ಮೌಲ್ಯ ಹೆಚ್ಚಾಗುತ್ತೆ: ಅಮೆರಿಕಾದ ಡಾಲರ್ ಮೌಲ್ಯ ಕುಸಿದರೆ ಸಾಮಾನ್ಯವಾಗಿ ಪೆಟ್ರೋಲಿಯಂ ಉತ್ಪನ್ನಗಳನ್ನು ಹೆಚ್ಚಾಗಿ ಪೂರೈಕೆ ಅರಬ್ ರಾಷ್ಟ್ರಗಳು ಉತ್ಪಾದಿಸಬೇಕು. ಅಮೆರಿಕಾ ಡಾಲರ್‌ನಲ್ಲೇ ಪೆಟ್ರೋಲಿಯಂ ಉತ್ಪನ್ನಗಳ ವಹಿವಾಟು ನಡೆಯುವ ಕಾರಣದಿಂದ ನಷ್ಟ ಆಗುತ್ತದೆ ಎಂಬ ಕಾರಣಕ್ಕೆ ಪೆಟ್ರೋಲಿಯಂ ಉತ್ಪನ್ನಗಳ ಹೆಚ್ಚು ಪೂರೈಕೆ ಸ್ಥಗಿತಗೊಳಿಸಿವೆ. ಹೀಗಾಗಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಜಾಸ್ತಿಯಾಗಲಿದೆ. ಯಾವಾಗ ಪೆಟ್ರೋಲಿಯಂ ಉತ್ಪನ್ನಗಳು ಬೆಲೆ ಜಾಸ್ತಿಯಾಗುತ್ತದೆಯೋ ಅಮೆರಿಕಾ ಡಾಲರ್ ಗೆ ಬೇಡಿಕೆ ಹೆಚ್ಚಾಗುತ್ತದೆ. ಅಮೆರಿಕಾ ಡಾಲರ್ ಮೌಲ್ಯ ಹೆಚ್ಚಾದರೆ ರೂಪಾಯಿ ಮೌಲ್ಯ ಕುಸಿಯಲಿದ್ದು, ಚಿನ್ನದ ಬೆಲೆ ಭಾರತೀಯರಿಗೆ ಜಾಸ್ತಿಯಾಗಲಿದೆ. ಸದ್ಯದ ಅಂತಾರಾಷ್ಟ್ರೀಯ ಬೆಳವಣಿಗೆ ಗಮನಿಸಿದಾಗ ನಾಲ್ಕೈದು ದಿನದಲ್ಲಿ ಚಿನ್ನ ಖರೀದಿ, ಚಿನ್ನದ ಮೇಲಿನ ಹೂಡಿಕೆ ಮಾಡುವುದು ಸೂಕ್ತಕಾಲ ಅಂತ ಭಾವಿಸಬಹುದು ಎಂದು ಗೋಲ್ಡ್‌ ಗುರು ರೇಖಾ ಅಂಜನ್ ವಿಶ್ಲೇಷಣೆ ಮಾಡಿದ್ದಾರೆ. ಒಂದು ವೇಳೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಏನಾದರೂ ಬದಲಾವಣೆ ಆದಲ್ಲಿ, ವಿಶ್ಲೇಷಣೆಯಲ್ಲಿ ಬದಲಾವಣೆ ಆಗಬಹುದು ಎಂದು ಇದೇ ವೇಳೆ ಹೇಳಿದ್ದಾರೆ.

English summary
Next five days is best time for buying gold: Gold expert gold guru says know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X