ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ವರ್ಷ: ಕೇರಳದಲ್ಲಿ 96 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ: ನೂತನ ದಾಖಲೆ ಸೃಷ್ಟಿ

|
Google Oneindia Kannada News

ತಿರುವನಂತಪುರಂ, ಜನವರಿ 02: ಹೊಸ ವರ್ಷದ ಮುನ್ನಾದಿನದಂದು ಕೇರಳದಲ್ಲಿ ದಾಖಲೆಯ ಮದ್ಯ ಮಾರಾಟವಾಗಿದೆ. ಸುಮಾರು 96.86 ಕೋಟಿ ರೂಪಾಯಿ ಮೌಲ್ಯದ ಮದ್ಯವನ್ನು ಮದ್ಯ ಸಂಸ್ಥೆ (ಬೆವ್ಕೊ) ಮತ್ತು ಕನ್ಸ್ಯೂಮರ್‌ಫೆಡ್ ಚಿಲ್ಲರೆ ವ್ಯಾಪಾರಿಗಳು ಖರೀದಿ ಮಾಡಿದ್ದಾರೆ. ಹೊಸ ವರ್ಷದ ಮುನ್ನಾದಿನದಂದು ರಾಜ್ಯದಲ್ಲಿ ಅತೀ ಹೆಚ್ಚು ಮಾರಾಟವಾದ ಮದ್ಯದ ಪ್ರಮಾಣ ಇದಾಗಿದೆ.

ಬೆವ್ಕೋ ಚಿಲ್ಲರೆ ವ್ಯಾಪಾರಿಗಳು 82.26 ಕೋಟಿ ರೂ. ಮೌಲ್ಯದ ಮದ್ಯವನ್ನು ಖರೀದಿ ಮಾಡಿದ್ದರೆ, ಇದೇ ಸಂದರ್ಭದಲ್ಲಿ ಕನ್ಸೂಮರ್‌ಫೆಡ್ 14.60 ಕೋಟಿ ರೂಪಾಯಿ ಮೌಲ್ಯದ ಮದ್ಯವನ್ನು ಖರೀದಿ ಮಾಡಿದ್ದಾರೆ. ಜನವರಿ 1 ರಂದು ಹೊಸ ವರ್ಷ ಆರಂಭದ ಹಿನ್ನೆಲೆಯಾದ ಕಾರಣದಿಂದಾಗಿ ಡಿಸೆಂಬರ್ 31 ರಂದು ಒಟ್ಟು ಮಾರಾಟದಲ್ಲಿ ಭಾರೀ ಹೆಚ್ಚಳ ಕಂಡು ಬಂದಿದೆ.

ಸಂಸತ್ ಅಧಿವೇಶನದಲ್ಲೇ ಮದ್ಯದ ಬಾಟಲಿ ಎತ್ತಿ ಹಿಡಿದ ಬಿಜೆಪಿ ಸಂಸದ ಪರ್ವೇಶ್ ವರ್ಮಾ!ಸಂಸತ್ ಅಧಿವೇಶನದಲ್ಲೇ ಮದ್ಯದ ಬಾಟಲಿ ಎತ್ತಿ ಹಿಡಿದ ಬಿಜೆಪಿ ಸಂಸದ ಪರ್ವೇಶ್ ವರ್ಮಾ!

ಇನ್ನು ಕ್ರಿಸ್‌ಮಸ್ ಹಬ್ಬದ ಮುನ್ನಾದಿನದಂದು ಕೂಡಾ ಮದ್ಯ ಮಾರಾಟದಲ್ಲಿ ಹೆಚ್ಚಳ ಕಂಡು ಬಂದಿತ್ತು. ತಿರುವನಂತಪುರದ ಎನರ್ಜಿ ಹೋಮ್ ಸ್ಟ್ರೀಟ್‌ನ ಹೊರಗಿರುವ ಔಟ್‌ಲೆಟ್ ಹೊಸ ವರ್ಷದ ಮುನ್ನಾದಿನದ ಒಟ್ಟು ಮಾರಾಟದ ವಿಚಾರದಲ್ಲಿ ಅಗ್ರ ಸ್ಥಾನದಲ್ಲಿ ಇದೆ. ತಿರುವನಂತಪುರದ ಎನರ್ಜಿ ಹೋಮ್ ಸ್ಟ್ರೀಟ್‌ನ ಹೊರಗಿರುವ ಔಟ್‌ಲೆಟ್‌ನಲ್ಲಿ ಒಟ್ಟು ಸುಮಾರು 1.07 ಕೋಟಿ ರೂಪಾಯಿಗಳ ಮದ್ಯ ಮಾರಾಟ ನಡೆದಿದೆ. ಇಲ್ಲಿ ಮೊದಲ ಬಾರಿಗೆ ಒಂದು ದಿನದ ಮಾರಾಟವು 1 ಕೋಟಿ ರೂಪಾಯಿ ದಾಟಿದೆ. ಇನ್ನು ಪಲರಿವಟ್ಟಂನಲ್ಲಿನ ಔಟ್ಲೆಟ್ ಎರಡನೇ ಸ್ಥಾನದಲ್ಲಿದೆ. ಇಲ್ಲಿ ರೂ. 81.34 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ. ಇನ್ನು ಮೂರನೇ ಸ್ಥಾನದಲ್ಲಿ ಕಡವಂತ್ರ ಪ್ರದೇಶವಿದೆ. ಇಲ್ಲಿ ರೂ. 77.33 ಕೋಟಿ ಮೌಲ್ಯದ ಮದ್ಯ ಮರಾಟ ನಡೆದಿದೆ.

 ಕಳೆದ ವರ್ಷ ಎಷ್ಟು ಮಾರಾಟ, ಈ ವರ್ಷ ಎಷ್ಟು?

ಕಳೆದ ವರ್ಷ ಎಷ್ಟು ಮಾರಾಟ, ಈ ವರ್ಷ ಎಷ್ಟು?

ಕಳೆದ ವರ್ಷ ಹೊಸ ವರ್ಷದ ಮುಂಚಿನ ದಿನದಂದು ಬೆವ್ಕೊದಲ್ಲಿ ಸಂಪೂರ್ಣ ಒಟ್ಟು ಮಾರಾಟವು 70.55 ಕೋಟಿ ರೂ ಆಗಿದೆ. ಈ ಕ್ರಿಸ್‌ಮಸ್ ಮುನ್ನಾದಿನದಂದು ಬೆವ್ಕೊ 65 ಕೋಟಿ ರೂ. ಮತ್ತು ಕನ್‌ಸ್ಯೂಮರ್‌ಫೆಡ್ 11.5 ಕೋಟಿ ರೂಪಾಯಿ ಮದ್ಯವನ್ನು ಖರೀದಿ ಮಾಡಿದೆ. ಕ್ರಿಸ್‌ಮಸ್ ಮುನ್ನಾದಿನದಂದು ಕೇರಳ ಸ್ಟೇಟ್ ಡ್ರಿಂಕ್ಸ್ ಕಂಪನಿ (ಬೆವ್‌ಕೊ) ಮತ್ತು ಕನ್‌ಸ್ಯೂಮರ್‌ಫೆಡ್‌ನ ಒಟ್ಟು ಮಾರಾಟವು 76.5 ಕೋಟಿ ರೂಪಾಯಿ ಆಗಿದೆ. ಬೆವ್ಕೋ 65 ಕೋಟಿ ರೂ.ಗೆ ಮದ್ಯ ಮಾರಾಟ ಮಾಡಿದ್ದರೆ, ಕನ್ಸ್ಯೂಮರ್ ಫೆಡ್ 11.5 ಕೋಟಿ ರೂ. ಮೌಲ್ಯದ ಮದ್ಯವನ್ನು ಮಾರಾಟ ಮಾಡಿದೆ. ಈ ಕ್ರಿಸ್‌ಮಸ್‌ ಅವಧಿಯಲ್ಲಿ ಬೆವ್ಕೊ ಮತ್ತು ಕನ್‌ಸ್ಯೂಮರ್‌ಫೆಡ್ ರಿಟೇಲ್‌ ಮಾರಾಟಗಾರರು ಕ್ರಮವಾಗಿ 53 ಕೋಟಿ ಮತ್ತು 8.5 ಕೋಟಿ ರೂಪಾಯಿ ಮದ್ಯವನ್ನು ಮಾರಾಟ ಮಾಡಿದ್ದಾರೆ.

 5 ವರ್ಷದಲ್ಲಿ 46,546.13 ಕೋಟಿ ರೂಪಾಯಿ ಮದ್ಯ ತೆರಿಗೆ ಸಂಗ್ರಹ

5 ವರ್ಷದಲ್ಲಿ 46,546.13 ಕೋಟಿ ರೂಪಾಯಿ ಮದ್ಯ ತೆರಿಗೆ ಸಂಗ್ರಹ

ಕೇರಳ ಸರ್ಕಾರವು ಕಳೆದ ಐದು ವರ್ಷಗಳಲ್ಲಿ 46,546.13 ಕೋಟಿ ರೂಪಾಯಿಗಳನ್ನು ಮದ್ಯದ ತೆರಿಗೆ ರೂಪದಲ್ಲಿ ಸಂಗ್ರಹ ಮಾಡಿದೆ. ರಾಜ್ಯದಲ್ಲಿ ಪ್ರತಿ ದಿನ 25.53 ಕೋಟಿ ರೂ. ಮದ್ಯದ ತೆರಿಗೆಯನ್ನು ಸಂಗ್ರಹ ಮಾಡಲಾಗುತ್ತಿದೆ. ಪ್ರತಿ ತಿಂಗಳಿಗೆ ಕೇರಳ ರಾಜ್ಯದಲ್ಲಿ 766 ಕೋಟಿ ರೂ ಮದ್ಯ ತೆರಿಗೆಯನ್ನು ಸಂಗ್ರಹ ಮಾಡಲಾಗುತ್ತದೆ. 2019-20ರಲ್ಲಿ ಅತಿ ಹೆಚ್ಚು ಮದ್ಯದ ತೆರಿಗೆ ಸಂಗ್ರಹಿಸ ಮಾಡಲಾಗಿದೆ. ಅಂದರೆ 2019-20ರಲ್ಲಿ 10,332.39 ಕೋಟಿ ರೂಪಾಯಿ ಮದ್ಯದ ತೆರಿಗೆ ಸಂಗ್ರಹ ಮಾಡಲಾಗಿದೆ.

 ಮದ್ಯ ಸೇವನೆಯಲ್ಲಿ ಆಲಪ್ಪುಳ ಜಿಲ್ಲೆ ಅಗ್ರಸ್ಥಾನ

ಮದ್ಯ ಸೇವನೆಯಲ್ಲಿ ಆಲಪ್ಪುಳ ಜಿಲ್ಲೆ ಅಗ್ರಸ್ಥಾನ

ಭಾರತದಲ್ಲಿ ತಯಾರಾಗುವ ವಿದೇಶಿ ಮದ್ಯಕ್ಕೆ ಶೇ.247 ಮತ್ತು ಶೇ.237ರಷ್ಟು ಮದ್ಯದ ತೆರಿಗೆ ವಿಧಿಸಲಾಗಿದೆ. 2016 ಮತ್ತು 2021 ರ ನಡುವೆ, ಸುಮಾರು 42,23,86,768.35 ಲೀಟರ್ ಬಿಯರ್ ಮತ್ತು ಸುಮಾರು 55,57,065.53 ಲೀಟರ್ ವೈನ್ ಅನ್ನು ಮದ್ಯ ಪ್ರಿಯರು ಸೇವನೆ ಮಾಡಿದ್ದಾರೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ವರದಿಯ ಪ್ರಕಾರ, ಮದ್ಯ ಸೇವನೆಯಲ್ಲಿ ರಾಜ್ಯದಲ್ಲಿ ಆಲಪ್ಪುಳ ಜಿಲ್ಲೆ ಅಗ್ರಸ್ಥಾನದಲ್ಲಿದ್ದು, ಕೊಟ್ಟಾಯಂ ಜಿಲ್ಲೆ ನಂತರದ ಸ್ಥಾನದಲ್ಲಿದೆ.

 ಮಲ್ಲಪುರಂ ಜಿಲ್ಲೆಯಲ್ಲಿ ಅತಿ ಕಡಿಮೆ ಮದ್ಯ ಸೇವನೆ

ಮಲ್ಲಪುರಂ ಜಿಲ್ಲೆಯಲ್ಲಿ ಅತಿ ಕಡಿಮೆ ಮದ್ಯ ಸೇವನೆ

ಸಮೀಕ್ಷೆಯ ವರದಿ ಪ್ರಕಾರ, ಕೇರಳದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶೇ.18.7 ಪುರುಷರು ಮತ್ತು ನಗರಗಳಲ್ಲಿ ಶೇ.21 ಪುರುಷರು ಮದ್ಯ ಸೇವಿಸುತ್ತಾರೆ. ಮಲ್ಲಪುರಂ ಜಿಲ್ಲೆಯಲ್ಲಿ ಅತಿ ಕಡಿಮೆ ಮದ್ಯ ಸೇವನೆ ಸಂಖ್ಯೆ ಇದೆ. ಅಂದರೆ ಈ ಜಿಲ್ಲೆಯಲ್ಲಿ ಕೇವಲ ಶೇಕಡಾ 7.7 ಪುರುಷರು ಮಾತ್ರ ಮದ್ಯ ಸೇವಿಸುತ್ತಾರೆ. (ಒನ್‌ಇಂಡಿಯಾ ಸುದ್ದಿ)

Recommended Video

South Africa vs India: ಭಾರತದ ಐತಿಹಾಸಿಕ ಜಯ ನೋಡಿ ಪಾಕಿಸ್ತಾನ ಹೇಳಿದ್ದೇನು | Oneindia Kannada

English summary
New Year: Keralites chug down liquor worth Rs 96 crore, sets another record.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X