• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒನಿಡಾದಿಂದ ಬ್ರಿಸ್ಟೆಲ್ ವಾಷ್ ಹೊಸ ಸರಣಿ ವಾಷಿಂಗ್ ಮಷಿನ್

|

ಬೆಂಗಳೂರು, ನವೆಂಬರ್ 15: ಭಾರತದ ಅಗ್ರಗಣ್ಯ ಕನ್ಸ್ಯೂಮರ್ ಡ್ಯೂರೇಬಲ್ ಉತ್ಪಾದಕ ಕಂಪನಿ ಒನಿಡಾ, ತನ್ನ ಫ್ಯಾಬ್ರಿಕ್ ಕೇರ್ ಸರಣಿಯಲ್ಲಿ ಬ್ರಿಸ್ಟೆಲ್ ವಾಷ್ ಮತ್ತು ಅಲ್ಟ್ರಾ ವಾಶ್ ಎಂಬ ಎರಡು ಹೊಸ ಶ್ರೇಣಿಯ ವಾಷಿಂಗ್ ಮಷಿನ್‍ಗಳನ್ನು ಬಿಡುಗಡೆ ಮಾಡಿದೆ. ಎರಡೂ ಮಾಡೆಲ್‍ಗಳು ಸೆಮಿ ಅಟೋಮ್ಯಾಟಿಕ್ ಮತ್ತು ಟಾಪ್ ಲೋಡಿಂಗ್ ವಾಷಿಂಗ್ ಮಷಿನ್‍ಗಳಾಗಿವೆ.

ಬ್ರಿಸ್ಟೆಲ್ ವಾಷ್ ವಾಷಿಂಗ್ ಮಷಿನ್‍ (7.2 ಕೆಜಿ ಮತ್ತು 8 ಕೆಜಿಗಳಲ್ಲಿ ಲಭ್ಯ), ಉದ್ಯಮದಲ್ಲೇ ಮೊದಲ ಬಾರಿಗೆ ಸೆಮಿ ಅಟೋಮ್ಯಾಟಿಕ್ ವರ್ಗದಲ್ಲಿ ಬ್ರಿಸ್ಟೆಲ್ ವಾಶ್ ತಂತ್ರಜ್ಞಾನವನ್ನು ಬಳಸಿಕೊಂಡಿದೆ.

ಸಹಸ್ರಮಾನದ ಗ್ರಾಹಕರಿಗೆ ಒನಿಡಾದ ಐಜಿಓದಿಂದ ಸ್ಮಾರ್ಟ್ ಟಿವಿ

ಈ ಮಷಿನ್‍ನ ವಿಶೇಷಣೆಗಳೆಂದರೆ ಜಾಣ್ಮೆಯ ಬ್ರಷ್ ಮತ್ತು ವಾಷಿಂಗ್ ಮಷಿನ್ ಟಬ್‍ನೊಳಗೆ ಬಿಡಿಸಿಕೊಂಡು ಕಲೆಗಳನ್ನು ಹಾಗೂ ಕೊಳೆಯನ್ನು ಉಜ್ಜಿ ತೆಗೆಯುವ ಮತ್ತು ಕಾಲರ್ ಗಳನ್ನು ಸ್ವಚ್ಛಗೊಳಿಸುವ ವಿಶೇಷ ವ್ಯವಸ್ಥೆಯನ್ನು ಹೊಂದಿದೆ. ಕೈಯಲ್ಲಿ ಫ್ಯಾಬ್ರಿಕ್ ತೊಳೆಯುವ ಮಾದರಿಯಲ್ಲೇ ಇದು ಸ್ವಚ್ಛಗೊಳಿಸುತ್ತದೆ. ಇದರ ಮತ್ತೊಂದು ವಿಶೇಷವೆಂದರೆ, ಟ್ರೈ ಸ್ಟಾರ್ಮ್ ಪಲ್‍ಸ್ಟರ್'. ಇದು ಗಾಳಿಯ ರೀತಿಯ ಪರಿಣಾಮವನ್ನು ಮೂರೂ ಕಡೆಗಳಲ್ಲಿ ಸೃಷ್ಟಿಸುತ್ತದೆ ಹಾಗೂ ಕಠಿಣವಾದ ಕಲೆಗಳನ್ನು ಕೂಡಾ ಅಪೇಕ್ಷಿತ ರೀತಿಯಲ್ಲಿ ಉಜ್ಜಿ ಸ್ವಚ್ಛಗೊಳಿಸುತ್ತದೆ.

ಇನ್ನೊಂದು ಉತ್ಪನ್ನವಾದ ಅಲ್ಟ್ರಾ ವಾಶ್ ವಾಷಿಂಗ್ ಮಷಿನ್, ಗರಿಷ್ಠ ಹಾಗೂ ಪರಿಣಾಮಕಾರಿ ಸ್ವಚ್ಛತೆಯನ್ನು ಸಾಂಪ್ರದಾಯಿಕ ವಿಧಾನದಲ್ಲಿ ಮಾಡುತ್ತದೆ. ಈ ಉತ್ಪನ್ನವು ವಿಶೇಷವಾಗಿ ವಿನ್ಯಾಸಗೊಳಿಸಲಾದ ಪ್ಲಗಿಟೇಟರ್ ಹೊಂದಿದ್ದು, ಇದು ನಿರಂತರ ನೀರಿನ ಪ್ರವಾಹವನ್ನು ಟಬ್‍ನ ಒಳಗಡೆ ಸೃಷ್ಟಿಸುವ ಮೂಲಕ, ಕೊಳೆ ಹಾಗೂ ಕಲೆಗಳನ್ನು ಸ್ವಚ್ಛಗೊಳಿಸುತ್ತದೆ. ಇದು 8 ಕೆಜಿ ಅವತರಣಿಕೆಯಲ್ಲಿ ಲಭ್ಯ.

ಇದು ಬಟ್ಟೆಗಳು ಸಿಕ್ಕುಗಟ್ಟದಂತೆ ತಡೆಯುತ್ತದೆ. 7.2 ಕೆ.ಜಿ. ಅವತರಣಿಕೆಯು ಹೆಕ್ಸಾಫಿನ್ ಪಲ್‍ಸ್ಟರ್ ಹೊಂದಿದ್ದು, ಇದು ಆರು ನಳಿಕೆಗಳನ್ನು ಹೊಂದಿ, ಬಿರುಗಾಳಿಯಂಥ ಪರಿಣಾಮವನ್ನು ವಾಶ್ ಟಬ್‍ನಲ್ಲಿ ಒದಗಿಸುತ್ತದೆ. ಇದರಿಂದಾಗಿ ಅತ್ಯುನ್ನತ ಗುಣಮಟ್ಟದ ಸ್ವಚ್ಛತೆಯನ್ನು ಬಟ್ಟೆಯ ಕಾಳಜಿಯ ಮೂಲಕ ಪಡೆಯಬಹುದಾಗಿದೆ.

ಹೊಸ ಸರಣಿಯ ವಾಷಿಂಗ್ ಮಿಷನ್ ಬೆಲೆ ವಿವರ:

ಬ್ರಿಸ್ಟೆಲ್ ವಾಷ್ ವಾಷಿಂಗ್ ಮಿಷನ್: 7.2 ಕೆಜಿ - Rs 15,990/-

ಬ್ರಿಸ್ಟೆಲ್ ವಾಷ್ ವಾಷಿಂಗ್ ಮಿಷನ್: 8.0 ಕೆಜಿ - Rs 17,990/-

ಅಲ್ಟ್ರಾ ವಾಶ್ ವಾಷಿಂಗ್ ಮಷಿನ್: 7.2 ಕೆಜಿ - Rs 14,990/-

ಅಲ್ಟ್ರಾ ವಾಶ್ ವಾಷಿಂಗ್ ಮಷಿನ್: 8.0 ಕೆಜಿ - Rs 16,990/-

ಇದಲ್ಲದೇ, ಎರಡೂ ಮಷಿನ್‍ಗಳು ಹೆವಿ ಡ್ಯೂಟಿ 400 ಡಬ್ಲ್ಯು ಮತ್ತು 460 ಡಬ್ಲ್ಯು ವಾಶ್ ಮೋಟರ್ (ಕ್ರಮವಾಗಿ 7.2 ಕೆ.ಜಿ ಮತ್ತು 8 ಕೆಜಿ) ಮತ್ತು 160 ಡಬ್ಲ್ಯು ಸ್ಪಿನ್ ಮೋಟರ್ ಜೋಡಣೆಯನ್ನು ಹೊಂದಿದೆ. ಇದು ಹೈಡ್ರಾಲಿಕ್ ಡ್ಯಾಂಪೆನರ್ ಗ್ಲಾಸ್ ಮುಚ್ಚಳದೊಂದಿಗೂ ಲಭ್ಯವಿದೆ.

ಮಿರ್ಕ್ ಎಲೆಕ್ಟ್ರಾನಿಕ್ಸ್ ನ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಮನ್‍ಸುಖಾನಿ ಹೇಳುವಂತೆ, "ತಾಂತ್ರಿಕವಾಗಿ ಸುಧಾರಿತ ವಾಷಿಂಗ್ ಮಷಿನ್ ಮಾದರಿಗಳನ್ನು ಬಿಡುಗಡೆ ಮಾಡಲು ನಮಗೆ ಅತೀವ ಸಂತಸವಾಗುತ್ತಿದೆ. ಇದು ಉತ್ತಮ ಹಬ್ಬದ ಅವಧಿಯ ಆಫರ್ ಗಳನ್ನು ಕೂಡಾ ಹೊಂದಿದೆ"

English summary
Onida, a leading Indian consumer durable manufacturer, has launched two new range of washing machines - Bristle Wash and Ultra Wash – under the fabric care series and both models are semi-automatic and top loading washing machines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X