ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ 1ರಿಂದ ಹೊಸ ಡೆಬಿಟ್ ಕಾರ್ಡ್ ನಿಯಮ: ವಿವರಗಳು ಇಲ್ಲಿವೆ

|
Google Oneindia Kannada News

ನವದೆಹಲಿ, ಜೂನ್ 21: ಎಲ್ಲಾ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಹೊಂದಿರುವವರಿಗೆ ಆರ್ ಬಿಐ ಸಿಹಿ ಸುದ್ದಿ ನೀಡಿದೆ. ಜುಲೈ 1, 2022 ರಿಂದ ಆನ್‌ಲೈನ್ ವ್ಯಾಪಾರಿಗಳು ಗ್ರಾಹಕರ ಕಾರ್ಡ್ ಡೇಟಾ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಳೆದ ವರ್ಷ ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಟೋಕನೈಸೇಶನ್ ನಿಯಮಗಳನ್ನು ಹೊರಡಿಸಿತ್ತು. ನಿಯಮಗಳ ಅಡಿಯಲ್ಲಿ, ವ್ಯಾಪಾರಿಗಳು ತಮ್ಮ ಸರ್ವರ್‌ಗಳಲ್ಲಿ ಗ್ರಾಹಕರ ಕಾರ್ಡ್ ಡೇಟಾ ಸಂಗ್ರಹಿಸುವುದನ್ನು ನಿರ್ಬಂಧಿಸಲಾಗಿದೆ.

ಈ ಕಾರ್ಡ್ ಟೋಕನೈಸೇಶನ್ ನಿಯಮಗಳು ಜುಲೈ 1, 2022 ರಿಂದ ಜಾರಿಗೆ ಬರಲಿದೆ. ಆರ್‌ಬಿಐ ದೇಶೀಯ ಆನ್‌ಲೈನ್ ಖರೀದಿಗಳಿಗೆ ಕಾರ್ಡ್ ಆನ್ ಫೈಲ್ ಟೋಕನ್‌ಗಳನ್ನು ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿದೆ. ದೇಶದಾದ್ಯಂತ ಕಾರ್ಡ್ ಟೋಕನ್‌ಗಳನ್ನು ಅಳವಡಿಸಿಕೊಳ್ಳುವ ಗಡುವನ್ನು ಜನವರಿ 1, 2022 ರಿಂದ ಜುಲೈ 1, 2022 ರವರೆಗೆ ಆರು ತಿಂಗಳವರೆಗೆ ವಿಸ್ತರಿಸಲಾಗಿದೆ.

ಡಿಜಿಟಲ್ ಯುಗದಲ್ಲಿ ಹೊಸದಾಗಿ ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆಡಿಜಿಟಲ್ ಯುಗದಲ್ಲಿ ಹೊಸದಾಗಿ ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆ

ಗ್ರಾಹಕರು ಸುರಕ್ಷಿತ ವಹಿವಾಟುಗಳನ್ನು ಮಾಡಲು ಸಹಾಯ ಮಾಡಲು ಎನ್‌ಕ್ರಿಪ್ಟ್ ಮಾಡಿದ "ಟೋಕನ್" ಆಗಿ ಸಂಗ್ರಹಿಸಲಾಗುತ್ತದೆ. ಈ ಟೋಕನ್‌ಗಳು ಗ್ರಾಹಕರ ವಿವರಗಳನ್ನು ಬಹಿರಂಗಪಡಿಸದೆ ಪಾವತಿ ಮಾಡಲು ಅವಕಾಶ ನೀಡುತ್ತದೆ. ಆದ್ದರಿಂದ ಜುಲೈ 1, 2022 ರಿಂದ, ವ್ಯಾಪಾರಿಗಳು ತಮ್ಮ ದಾಖಲೆಗಳಿಂದ ಗ್ರಾಹಕರ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಡೇಟಾವನ್ನು ಅಳಿಸಬೇಕಾಗುತ್ತದೆ.

ಟೋಕನೈಸೇಶನ್‌ ನಿಯಮ ಏನು?

ಟೋಕನೈಸೇಶನ್‌ ನಿಯಮ ಏನು?

ಅಮೆಜಾನ್‌, ಸ್ವಿಗ್ಗಿಯಂತಹ ಆನ್‌ಲೈನ್ ತಾಣಗಲ್ಲಿ ಖರೀದಿ ಮಾಡಿದ ಬಳಿಕ ಪಾವತಿ ಮಾಡಲು ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಉಪಯೋಗಿಸಿದರೆ, ಅದರಲ್ಲಿ 'ಸೇವ್‌ ದಿಸ್‌ ಕಾರ್ಡ್‌' ಎನ್ನುವ ಆಯ್ಕೆ ನೀಡಲಾಗುತ್ತಿತ್ತು, ಇದಕ್ಕೆ ನೀವು ಒಪ್ಪಿಗೆ ಕೊಟ್ಟರೆ ನಿಮ್ಮ ಕಾರ್ಡ್‌ ಮಾಹಿತಿ ಆ್ಯಪ್‌ನಲ್ಲಿ ಸೇವ್‌ ಆಗುತ್ತದೆ.

ಭವಿಷ್ಯದಲ್ಲಿ ಅದೇ ತಾಣದಲ್ಲಿ ಖರೀದಿಗೆ ಮತ್ತೊಮ್ಮೆ ಕಾರ್ಡ್ ಮಾಹಿತಿಗಳನ್ನು ನಮೂದಿಸುವ ಅಗತ್ಯ ಇರಲಿಲ್ಲ. ಈಗಾಗಲೇ ಸೇವ್‌ ಆಗಿರುವ ಕಾರ್ಡ್ ಮಾಹಿತಿಗೆ ಕ್ಲಿಕ್‌ ಕೊಟ್ಟು, ಸಿವಿವಿ ನಮೂದಿಸಿ ಬಳಿಕ, ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಹಾಕಿದರೆ ಪಾವತಿ ಆಗುತ್ತಿತ್ತು.

ಇನ್ಮುಂದೆ ಈ ವಹಿವಾಟು ನಡೆಸಲು ಒಟಿಪಿ ಅಗತ್ಯವಿಲ್ಲ: ಆರ್‌ಬಿಐ ಹೊಸ ನಿಯಮಇನ್ಮುಂದೆ ಈ ವಹಿವಾಟು ನಡೆಸಲು ಒಟಿಪಿ ಅಗತ್ಯವಿಲ್ಲ: ಆರ್‌ಬಿಐ ಹೊಸ ನಿಯಮ

ಗ್ರಾಹಕರ ಮಾಹಿತಿ ಭದ್ರತೆ

ಗ್ರಾಹಕರ ಮಾಹಿತಿ ಭದ್ರತೆ

ಆದರೆ ಆರ್‌ಬಿಐನ ಹೊಸ ನಿಯಮದನ್ವಯ ಗ್ರಾಹಕರ ಕಾರ್ಡ್‌ ಮಾಹಿತಿಗಳನ್ನು ಸಂಗ್ರಹಿಸಿಡಲು ಕಂಪನಿಗಳಿಗೆ ಅವಕಾಶ ಇರುವುದಿಲ್ಲ. ಇದರನ್ವಯ ಪ್ರತೀ ಬಾರಿ ವಹಿವಾಟು ಮಾಡುವಾಗ ಕಾರ್ಡ್‌ ಮಾಹಿತಿಗಳನ್ನು ಹೊಸದಾಗಿ ನಮೂದು ಮಾಡಬೇಕು. ಪದೇ ಪದೇ ಹೊಸದಾಗಿ ಕಾರ್ಡ್‌ ಮಾಹಿತಿ ನಮೂದಿಸುವ ಬದಲು, ಪ್ರತೀ ಕಾರ್ಡ್‌ಗೆ ಟೋಕನ್‌ ಮಾದರಿಯ ಸಂಖ್ಯೆ ಕೊಡುವುದೇ ಆರ್‌ಬಿಐನ ಟೋಕನೈಸೇಶನ್‌ ನಿಯಮ. ಗ್ರಾಹಕರ ಹಣಕಾಸು ಮಾಹಿತಿ ಕಂಪನಿಗಳಿಗೆ ಸಿಗದಂತೆ ಮಾಡಲು ಆರ್‌ಬಿಐ ಈ ನೂತನ ಯೋಜನೆ ತಂದಿದೆ.

ಕಾರ್ಡ್‌ ಟೋಕನೈಸೇಶನ್ ವ್ಯವಸ್ಥೆ ಕಡ್ಡಾಯವಲ್ಲ

ಕಾರ್ಡ್‌ ಟೋಕನೈಸೇಶನ್ ವ್ಯವಸ್ಥೆ ಕಡ್ಡಾಯವಲ್ಲ

ಕಾರ್ಡ್ ಟೋಕನೈಸೇಶನ್ ವ್ಯವಸ್ಥೆ ಕಡ್ಡಾಯವಲ್ಲ. ಆದ್ದರಿಂದ ಗ್ರಾಹಕರು ತಮ್ಮ ಕಾರ್ಡ್‌ನ ಟೋಕನೈಸೇಶನ್‌ಗೆ ಒಪ್ಪಿಗೆ ನೀಡದಿದ್ದರೆ, ಗ್ರಾಹಕರು ಆನ್‌ಲೈನ್ ಪಾವತಿ ಮಾಡುವಾಗ ಪ್ರತಿ ಬಾರಿ ಕಾರ್ಡ್ ಪರಿಶೀಲನೆ ಮೌಲ್ಯ ಅಥವಾ ಸಿವಿಸಿ (CVV) ನಮೂದಿಸುವ ಬದಲು ಹೆಸರು, ಕಾರ್ಡ್ ಸಂಖ್ಯೆ ಮತ್ತು ಕಾರ್ಡ್ ಮಾನ್ಯತೆಯಂತಹ ಎಲ್ಲಾ ಕಾರ್ಡ್ ವಿವರಗಳನ್ನು ನಮೂದಿಸಬೇಕಾಗುತ್ತದೆ.

ಅದೇ ಸಮಯದಲ್ಲಿ, ಗ್ರಾಹಕರು ಕಾರ್ಡ್ ಟೋಕನೈಸೇಶನ್‌ಗೆ ಸಮ್ಮತಿಸಿದರೆ, ಅವನು ಅಥವಾ ಅವಳು ವಹಿವಾಟು ಮಾಡುವಾಗ ಸಿವಿವಿ (CVV) ಅಥವಾ ಒಂದು ಬಾರಿ ಪಾಸ್‌ವರ್ಡ್ (OTP) ವಿವರಗಳನ್ನು ಮಾತ್ರ ನಮೂದಿಸಬೇಕಾಗುತ್ತದೆ.

ಟೋಕನೈಸೇಶನ್ ವ್ಯವಸ್ಥೆ ಸಂಪೂರ್ಣ ಉಚಿತ

ಟೋಕನೈಸೇಶನ್ ವ್ಯವಸ್ಥೆ ಸಂಪೂರ್ಣ ಉಚಿತ

ಟೋಕನೈಸೇಶನ್ ವ್ಯವಸ್ಥೆಯು ಸಂಪೂರ್ಣವಾಗಿ ಉಚಿತವಾಗಿದೆ ಮತ್ತು ಇದು ಒಬ್ಬರ ಕಾರ್ಡ್‌ನ ಡೇಟಾವನ್ನು ಸುರಕ್ಷಿತವಾಗಿರಿಸುವಾಗ ಸುಗಮ ಪಾವತಿ ಅನುಭವವನ್ನು ಒದಗಿಸುತ್ತದೆ. ಅಲ್ಲದೆ ಟೋಕನೈಸೇಶನ್ ದೇಶೀಯ ಆನ್‌ಲೈನ್ ವಹಿವಾಟುಗಳಿಗೆ ಮಾತ್ರ ಅನ್ವಯಿಸುತ್ತದೆ.

ಆರ್ ಬಿಐ ಪ್ರಕಾರ, ಟೋಕನೈಸೇಶನ್ ವಿನಂತಿಯ ನೋಂದಣಿಯನ್ನು ಹೆಚ್ಚುವರಿ ಅಂಶದ ದೃಢೀಕರಣದ (AFA) ಮೂಲಕ ಸ್ಪಷ್ಟ ಗ್ರಾಹಕ ಒಪ್ಪಿಗೆಯೊಂದಿಗೆ ಮಾತ್ರ ಮಾಡಲಾಗುತ್ತದೆ ಮತ್ತು ಚೆಕ್ ಬಾಕ್ಸ್, ರೇಡಿಯೋ ಬಟನ್ ಇತ್ಯಾದಿಗಳ ಬಲವಂತದ ಅಥವಾ ಡೀಫಾಲ್ಟ್ ಅಥವಾ ಸ್ವಯಂಚಾಲಿತ ಆಯ್ಕೆಯ ಮೂಲಕ ಮಾಡಲು ಅವಕಾಶ ಇಲ್ಲ.

English summary
The Reserve Bank of India issued debit and credit card tokenisation rules applicable from July 1, 2022 onwards. New rules asure the customer safety. Under the rules, merchants were barred from storing customer card data in their servers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X