ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸದಾಗಿ ಬರುತ್ತಿರುವ 500 ರು. ನೋಟಿನ ಬಗ್ಗೆ ಆರ್ ಬಿಐ ಹೇಳೋದೇನು?

ಹೊಸದಾಗಿ 500 ರು. ನೋಟುಗಳನ್ನು ಬಿಡುಗಡೆಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಸಜ್ಜಾಗಿದೆ. ಹಾಗಾಗಿ, ಹೊಸ ನೋಟುಗಳ ಬಗ್ಗೆ ಮಾಹಿತಿಯನ್ನು ಅದು ಪ್ರಕಟಿಸಿದೆ. ಅದರಂತೆ, ನೋಟಿನ ಮುಂಭಾಗದಲ್ಲಿ ಈವರೆಗೆ ಇದ್ದ 'A' ಅಕ್ಷರದ ಬದಲಿಗೆ 'E' ಅಕ್ಷರ

|
Google Oneindia Kannada News

ನವದಹೆಲಿ, ಜೂನ್ 13: ಹೊಸ 500 ರು.ಗಳ ನೋಟುಗಳು ಸದ್ಯದಲ್ಲೇ ಚಲಾವಣೆಗೆ ಬರಲಿವೆ. ಹಾಗಾಗಿ, ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ), ಹೊಸ ನೋಟಿನಲ್ಲಿ ಇರುವ ಅಂಶಗಳ ಬಗ್ಗೆ ಪ್ರಕಟಣೆ ನೀಡಿದೆ.

ನೋಟುಗಳ ಮುಂಭಾಗದಲ್ಲಿ ಈವರೆಗೆ ಇಂಗ್ಲೀಷ್ ನ E ಅಕ್ಷರದ ಬದಲಾಗಿ, A ಅಕ್ಷರ ಇರುತ್ತದೆ ಎಂದು ಹೇಳಿರುವ ಆರ್ ಬಿಐ, ಈಗ ಚಾಲ್ತಿಯಲ್ಲಿರುವ 500 ರು. ನೋಟುಗಳಲ್ಲಿರುವ ಮಿಕ್ಕ ಯಾವ ವಿಚಾರಗಳೂ ಹೊಸ ನೋಟುಗಳಲ್ಲಿ ಬದಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಹಾಗಾಗಿ, ಈಗ ನೋಟಿನ ಬದಲಾಗುವ ಅಂಶಗಳ ಜತೆಗೆ ಬದಲಾಗದ ಅಂಶಗಳನ್ನೂ ಈ ಕೆಳಗಿನಂತೆ ಪಟ್ಟಿ ಮಾಡಿಕೊಟ್ಟಿದೆ ಆರ್ ಬಿಐ.

1 ರೂಪಾಯಿ ನೋಟು ಮತ್ತೆ ಮುದ್ರಣ, ಚಾಲನೆಗೆ1 ರೂಪಾಯಿ ನೋಟು ಮತ್ತೆ ಮುದ್ರಣ, ಚಾಲನೆಗೆ

ಆದರೆ, ಹೊಸ 2000 ಮುಖಬೆಲೆಯ ನೋಟುಗಳ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಏನನ್ನೂ ಹೇಳಿಲ್ಲ. ಸದ್ಯಕ್ಕೆ 500 ರು. ಮುಖಬೆಲೆಯ ನೋಟುಗಳಲ್ಲಿನ ಸಣ್ಣ ವ್ಯತ್ಯಾಸದ ಬಗ್ಗೆ ಮಾತ್ರ ಹೇಳಿದೆ.

ಭಾವಚಿತ್ರ ಯಥಾವತ್ತು

ಭಾವಚಿತ್ರ ಯಥಾವತ್ತು

ಹಾಲಿ ಚಾಲ್ತಿಯಲ್ಲಿರುವ 500 ರು. ನೋಟುಗಳಲ್ಲಿರುವ ಗುಣಲಕ್ಷಣಗಳನ್ನೇ ಹೋಲುತ್ತದೆ. ಮಹಾತ್ಮ ಗಾಂಧಿಯವರ ಭಾವಚಿತ್ರದಲ್ಲೂ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಆರ್ ಬಿಐ ಹೇಳಿದೆ.

ಆಂಗ್ಲ ಭಾಷೆಯ ಎ ಅಕ್ಷರ

ಆಂಗ್ಲ ಭಾಷೆಯ ಎ ಅಕ್ಷರ

ಈಗ ಚಾಲ್ತಿಯಲ್ಲಿರುವ ಐದು ನೂರು ನೋಟುಗಳ ಮುಂಭಾಗದ ಹಾಗೂ ಕೆಳಗೆ 'E' ಅಕ್ಷರವನ್ನು ಕಾಣಬಹುದು. ಹೊಸ ನೋಟುಗಳಲ್ಲಿ 'A' ಅಕ್ಷರವನ್ನು ಕಾಣಬಹುದು.

ಮುಖಬೆಲೆಯೂ ಅಲ್ಲೇ

ಮುಖಬೆಲೆಯೂ ಅಲ್ಲೇ

ಹೊಸ ಐನೂರರ ನೋಟಿನಲ್ಲಿ, ಹಳೇ ನೋಟಿನಲ್ಲಿದ್ದಂತೆ ಇಂಟಾಗ್ಲಿಯೋ ಪ್ರಿಂಟಿಂಗ್ ತಂತ್ರಜ್ಞಾನದಲ್ಲಿ ಮೂಡಿಬಂದ ಮಹಾತ್ಮ ಗಾಂಧಿ ಭಾವಚಿತ್ರ, ಅಶೋಕ ಸ್ತಂಭ, ರಾಷ್ಟ್ರ ಲಾಂಛನ, ಬ್ಲೀಡ್ ಲೈನ್ ಗಳು ಹಾಗೂ ವೃತ್ತದೊಳಗೆ 500 ಮುಖಬೆಲೆ - ಈ ಎಲ್ಲವೂ ಆಯಾ ಜಾಗಗಳಲ್ಲೇ ಇರುತ್ತವೆ. ಇದರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಹೊಸ ನೋಟು ಎಂದು ನಿಮಲ್ಲಿಗೆ ಬರುವ ಯಾವುದೇ ನೋಟುಗಳಲ್ಲಿ ಇವು ವ್ಯತ್ಯಾಸವಾಗಿದ್ದರೆ ತಕ್ಷಣ ಆರ್ ಬಿಐ ಸಂಪರ್ಕಿಸಬಹುದು.

ಲೋಗೋಗಳ ಸ್ಥಾನಗಳಲ್ಲಿ ವ್ಯತ್ಯಾಸವಿಲ್ಲ

ಲೋಗೋಗಳ ಸ್ಥಾನಗಳಲ್ಲಿ ವ್ಯತ್ಯಾಸವಿಲ್ಲ

ನೋಟಿನ ಮುಂಭಾಗದಲ್ಲಿ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಸಹಿ ಇದೆ. ನೋಟು ಪ್ರಿಂಟ್ ಆದ ವರ್ಷ, ಸ್ವಚ್ಛ ಭಾರತ ಲೋಗೋಗಳು ನೋಟಿದ ಹಿಂಬದಿಯಲ್ಲಿವೆ.

ಏನೂ ವ್ಯತ್ಯಾಸವಿಲ್ಲ

ಏನೂ ವ್ಯತ್ಯಾಸವಿಲ್ಲ

ಅಲ್ಲದೆ, ದೆಹಲಿಯ ಕೆಂಪು ಕೋಟೆಯ ಚಿತ್ರವೂ ಇರುತ್ತದೆ. ಇದರಲ್ಲೂ ಯಾವುದೇ ವ್ಯತ್ಯಾಸವಾಗಿರುವುದಿಲ್ಲ.

English summary
The Reserve Bank of India or RBI is issuing a new batch of Rs. 500 banknotes with the inset letter 'A', the central bank said today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X